1. ನೀವೂ ಪಿಪಿಎಫ್ ನಲ್ಲಿ ಹಣ ಹೂಡಿಕೆ ಮಾಡುತ್ತೀರಾ? ಎಚ್ಚರ... ಈ ಹೊಸ ಅಪ್ಡೇಟ್ ನಿಮಗೆ ತಿಳಿದಿರಲಿ!
2. ಹೂಡಿಕೆಗಾಗಿ ಪಿಪಿಎಫ್ ಒಂದು ಉತ್ತಮ ಆಯ್ಕೆಯಾಗಿದೆ. ಇದರ ಹಲವು ಲಾಭಗಳಿವೆ.
3. ಪಿಪಿಎಫ್ ಒಂದು ದೀರ್ಘಾವಧಿಯ ಯೋಜನೆಯಾಗಿದೆ. ಅಲ್ಪಾವಧಿಯ ಹೂಡಿಕೆ ಮಾಡಬೇಕಾದರೆ ಈ ಯೋಜನೆ ಆಯ್ಕೆ ಬೇಡ.
4. ಈ ಯೋಜನೆಯಲ್ಲಿ 15 ವರ್ಷಗಳ ಬಳಿಕ ನಿಮಗೆ ಮ್ಯಾಚೂರಿಟಿ ಹಣ ಸಿಗುತ್ತದೆ.
5. ಪ್ರತಿ ಆರ್ಥಿಕ ವರ್ಷದಲ್ಲಿ ನೀವು ಈ ಯೋಜನೆಯಲ್ಲಿ ಕನಿಷ್ಠ ಅಂದರೆ 500 ರೂ.ಹೂಡಿಕೆ ಮಾಡಬೇಕು.
6. ಒಂದು ವೇಳೆ ನೀವು ಕನಿಷ್ಠ 500 ರೂ. ಕೂಡ ಹೂಡಿಕೆ ಮಾಡಲು ವಿಫಲರಾದರೆ, ನಿಮ್ಮ ಖಾತೆ ಡೋರ್ಮೆಂಟ್ ಆಗುತ್ತದೆ ಮತ್ತು ಅದನ್ನು ಪುನಃ ಸಕ್ರಿಯಗೊಳಿಸಲು ನೀವು ದಂಡ ಪಾವತಿಸಬೇಕಾಗುತ್ತದೆ.
7. ಪಿಪಿಎಫ್ ಖಾತೆಯಲ್ಲಿ ಒಂದು ಆರ್ಥಿಕ ವರ್ಷದಲ್ಲಿ ನೀವು ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು.
8. ಪ್ರಸ್ತುತ ಪಿಪಿಎಫ್ ಖಾತೆಯಲ್ಲಿ ಜನರಿಗೆ ಶೇ.7.1 ರಷ್ಟು ಬಡ್ಡಿ ಲಭಿಸುತ್ತದೆ.
9. ಕೇಂದ್ರ ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಈ ಬಡ್ಡಿದರವನ್ನು ಪರಿಷ್ಕರಿಸುತ್ತದೆ.
10. ಇದರಲ್ಲಿ ನೀವು ಮಾಡುವ ಹೂಡಿಕೆಯಿಂದ ನೀವು 80ಸಿ ಅಡಿ ತೆರಿಗೆ ವಿನಾಯ್ತಿ ಕೂಡ ಪಡೆಯಬಹುದು.