ಇಪಿಎಫ್‌ಒ ಇ-ನಾಮನಿರ್ದೇಶನ ಪೂರ್ಣಗೊಳಿಸಲು ಹಂತ-ಹಂತದ ಪ್ರಕ್ರಿಯೆ

Published by: Yashaswini V | Sep 19, 2025

ಇಪಿಎಫ್‌ಒ ಇ-ನಾಮಿನೇಷನ್

ಭವಿಷ್ಯದ ಅನುಕೂಲತೆ ದೃಷ್ಟಿಯಿಂದ ಪ್ರತಿಯೊಬ್ಬ ಇಪಿಎಫ್‌ಒ ಚಂದಾದಾರರೂ ಕೂಡ ಇಪಿಎಫ್‌ಒ ಇ-ನಾಮನಿರ್ದೇಶನ ಮಾಡುವುದು ಅತ್ಯಗತ್ಯವಾಗಿದ್ದು, ಇದಕ್ಕಾಗಿ ಇಲ್ಲಿದೆ ಸುಲಭ ಪ್ರಕ್ರಿಯೆ.

Published by: Yashaswini V | Sep 19, 2025

ಹಂತ-1

ಇಪಿಎಫ್ ಖಾತೆಯಲ್ಲಿ ಇ-ನಾಮನಿರ್ದೇಶನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮೊದಲು ನಿಮ್ಮ ಯುಎಎನ್ ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ ಇಪಿಎಫ್‌ಒ ​​ಪೋರ್ಟಲ್‌ಗೆ ಲಾಗಿನ್ ಆಗಿ.

Published by: Yashaswini V | Sep 19, 2025

ಹಂತ-2

ಲಾಗಿನ್ ಬಳಿಕ ಮ್ಯಾನೇಜ್ ಟ್ಯಾಬ್‌ನಲ್ಲಿ ಇ-ನಾಮನಿರ್ದೇಶನ ಎಂಬ ಆಯ್ಕೆಯನ್ನು ಆರಿಸಿ. ಇದಕ್ಕಾಗಿ 'ವಿವರಗಳನ್ನು ಒದಗಿಸಿ' ಆಯ್ಕೆ ಮೇಲೆ ಕ್ಲಿಕ್ ಮಾಡಿ ಕುಟುಂಬದ ವಿವರಗಳನ್ನು ಭರ್ತಿ ಮಾಡಿ.

Published by: Yashaswini V | Sep 19, 2025

ಹಂತ-3

ನಿಗದಿತ ಜಾಗದಲ್ಲಿ ನೀವು ನಾಮಿನಿ ಮಾಡಲು ಬಯಸುವ ನಾಮಿನಿಯ ಹೆಸರು, ಆಧಾರ್ ಸಂಖ್ಯೆ, ಜನ್ಮ ದಿನಾಂಕ, ಸಂಬಂಧಿ, ವಿಳಾಸ ಮತ್ತು ಫೋಟೋವನ್ನು ಅಪ್‌ಲೋಡ್ ಮಾಡಿ.

Published by: Yashaswini V | Sep 19, 2025

ಹಂತ-4

ಒಂದೊಮ್ಮೆ ನೀವು ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರಿಸಲು ಬಯಸಿದರೆ, 'ಈಗ ಸೇರಿಸಿ' ಮೇಲೆ ಕ್ಲಿಕ್ ಮಾಡಿ ಮತ್ತು ಪಾಲು (%) ಅನ್ನು ನಿರ್ದಿಷ್ಟಪಡಿಸಿ.

Published by: Yashaswini V | Sep 19, 2025

ಹಂತ-5

'ಇಪಿಎಫ್ ನಾಮನಿರ್ದೇಶನವನ್ನು ಉಳಿಸಿ' ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಅದನ್ನು ಸೇವ್ ಮಾಡಿ.

Published by: Yashaswini V | Sep 19, 2025

ಹಂತ-6

ಇ-ಸಹಿಗಾಗಿ ಆಧಾರ್ ನೊಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ಮತ್ತು ಸಲ್ಲಿಸಿದರೆ ಸ್ಕ್ರೀನ್ ಮೇಲೆ ನಾಮನಿರ್ದೇಶನ ಯಶಸ್ವಿಯಾಗಿದೆ ಎಂಬ ಸಂದೇಶ ಕಾಣಿಸುತ್ತದೆ.

Published by: Yashaswini V | Sep 19, 2025

ಹಂತ-7

ಇಪಿಎಫ್ಒ ಇ ನಾಮನಿರ್ದೇಶನವು ಸಂಕಷ್ಟದ ಸಮಯದಲ್ಲಿ ನಿಮ್ಮ ಕುಟುಂಬಕ್ಕೆ ಹೆಚ್ಚಿನ ಪರಿಹಾರ ತರುವ ಒಂದು ಸಣ್ಣ ಹೆಜ್ಜೆಯಾಗಿದೆ.

Published by: Yashaswini V | Sep 19, 2025

VIEW ALL

Read Next Story