)
HDFC Bank home loan: ಯಾವುದೇ ಬ್ಯಾಂಕಿನಿಂದ ಗೃಹ ಸಾಲ ಪಡೆಯುವುದು ನಿಮ್ಮ ವಯಸ್ಸು, ಮಾಸಿಕ ಆದಾಯ, CIBIL ಸ್ಕೋರ್ ಮತ್ತು ಮರುಪಾವತಿ ಸಾಮರ್ಥ್ಯವನ್ನ ಅವಲಂಬಿಸಿರುತ್ತದೆ. ನಿರ್ದಿಷ್ಟ ಮಾಸಿಕ ಆದಾಯದ ಆಧಾರದ ಮೇಲೆ ನಿಮ್ಮ ಗರಿಷ್ಠ ಸಾಲದ ಮೊತ್ತವನ್ನ ಅನುಮೋದಿಸಲಾಗುತ್ತದೆ.
HDFC ಬ್ಯಾಂಕ್ ಪ್ರಸ್ತುತ ಶೇ.7.90ರಿಂದ ಪ್ರಾರಂಭವಾಗುವ ಬಡ್ಡಿದರದಲ್ಲಿ ಗೃಹ ಸಾಲಗಳನ್ನ ನೀಡುತ್ತದೆ. ನೀವು 20 ವರ್ಷಗಳ ಅವಧಿಗೆ ₹80 ಲಕ್ಷದ ಗೃಹ ಸಾಲ ಪಡೆಯಲು ಬಯಸಿದರೆ, ನಿಮ್ಮ ಕನಿಷ್ಠ ಮಾಸಿಕ ಸಂಬಳವ ಎಷ್ಟಿರಬೇಕು ಎಂಬುದನ್ನ ಅರ್ಥಮಾಡಿಕೊಳ್ಳುವುದು ಬಹುಮುಖ್ಯ.
HDFC ಬ್ಯಾಂಕ್ ಗೃಹ ಸಾಲದ ಅರ್ಹತಾ ಕ್ಯಾಲ್ಕುಲೇಟರ್ ಪ್ರಕಾರ, ನೀವು ಯಾವುದೇ ಸಾಲವನ್ನ ಹೊಂದಿಲ್ಲದಿದ್ದರೆ ಮತ್ತು ಶೇ.7.90ರಷ್ಟು ಬಡ್ಡಿಯಲ್ಲಿ ಗೃಹ ಸಾಲ ಪಡೆಯಬಹುದಾದರೆ (ನಿಮ್ಮ CIBIL ಸ್ಕೋರ್ 800 ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ), 80 ಲಕ್ಷ ರೂ.ಗಳ ಗೃಹ ಸಾಲಕ್ಕೆ ನಿಮ್ಮ ಕನಿಷ್ಠ ಮಾಸಿಕ ವೇತನ 1,20,800 ರೂ. ಆಗಿರಬೇಕು. ಲೆಕ್ಕಾಚಾರದ ಪ್ರಕಾರ, ನೀವು ಗರಿಷ್ಠ ₹80,02,628 ಗೃಹ ಸಾಲ ಪಡೆಯುತ್ತೀರಿ, ಇದಕ್ಕಾಗಿ ಮಾಸಿಕ EMI (ಮಾಸಿಕ ಕಂತು) ₹66,440 ಆಗಿರುತ್ತದೆ.
ಯಾವುದೇ ಸಾಲದ ಬಗ್ಗೆ ನೀವು ಅರ್ಥಮಾಡಿಕೊಳ್ಳಬೇಕಾದ ಒಂದು ವಿಷಯವೆಂದರೆ ನಿಮ್ಮ ಮರುಪಾವತಿ ಅವಧಿ ಹೆಚ್ಚಾದಷ್ಟೂ ನೀವು ಪಾವತಿಸುವ ಬಡ್ಡಿಯೂ ಹೆಚ್ಚಾಗುತ್ತದೆ. ಹೌದು, EMI ಮೊತ್ತ ಕಡಿಮೆ ಇರುತ್ತದೆ. ನಿಮ್ಮ ಮರುಪಾವತಿ ಅವಧಿ ಕಡಿಮೆ ಇದ್ದಷ್ಟೂ ನೀವು ಪಾವತಿಸುವ ಬಡ್ಡಿಯೂ ಕಡಿಮೆಯಾಗುತ್ತದೆ. ಆದಾಗ್ಯೂ ನಿಮ್ಮ EMI ಸ್ವಲ್ಪ ಹೆಚ್ಚಾಗಿರುತ್ತದೆ. ಹೀಗಾಗಿ ಎಲ್ಲಾ ರೀತಿಯ ಸಂಪೂರ್ಣ ಮಾಹಿತಿಯನ್ನ ಪಡೆದುಕೊಂಡೇ ನೀವು ಸಾಲವನ್ನ ತೆಗೆದುಕೊಳ್ಳಬೇಕು.
(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)