FD Rates: 12 ತಿಂಗಳ FD ಮೇಲೆ ಯಾವ ಬ್ಯಾಂಕ್ ಹೆಚ್ಚಿನ ಬಡ್ಡಿ ನೀಡುತ್ತಿದೆ, ಇಲ್ಲಿದೆ ಮಾಹಿತಿ

FD Rates: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 12 ತಿಂಗಳ ಅವಧಿಯ FDಗಳ ಮೇಲೆ ಸಾಮಾನ್ಯ ನಾಗರಿಕರಿಗೆ ಶೇ.6.5ರಷ್ಟು ಬಡ್ಡಿ ಮತ್ತು ಹಿರಿಯ ನಾಗರಿಕರಿಗೆ ಶೇ.7.0ರಷ್ಟು ಬಡ್ಡಿಯನ್ನು ನೀಡುತ್ತಿದೆ.

Written by - Puttaraj K Alur | Last Updated : May 15, 2025, 09:13 PM IST
  • SBI 12 ತಿಂಗಳ ಅವಧಿಯ FDಗಳ ಮೇಲೆ ಸಾಮಾನ್ಯ ನಾಗರಿಕರಿಗೆ ಶೇ.6.5ರಷ್ಟು ಬಡ್ಡಿ ನೀಡುತ್ತಿದೆ
  • ಬ್ಯಾಂಕ್ ಆಫ್ ಬರೋಡಾ 12 ತಿಂಗಳ FD ಮೇಲೆ ಸಾಮಾನ್ಯ ನಾಗರಿಕರಿಗೆ ಶೇ.6.8ರಷ್ಟು ಬಡ್ಡಿ ನೀಡುತ್ತೆ
  • PNB ಬ್ಯಾಂಕ್ 12 ತಿಂಗಳ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ ಶೇ.6.7ರಷ್ಟು ಬಡ್ಡಿ ನೀಡುತ್ತದೆ
FD Rates: 12 ತಿಂಗಳ FD ಮೇಲೆ ಯಾವ ಬ್ಯಾಂಕ್ ಹೆಚ್ಚಿನ ಬಡ್ಡಿ ನೀಡುತ್ತಿದೆ, ಇಲ್ಲಿದೆ ಮಾಹಿತಿ

FD Rates in India: ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ವರ್ಷ ಎರಡು ಬಾರಿ ರೆಪೋ ದರವನ್ನು ಕಡಿಮೆ ಮಾಡಿದೆ. ಫೆಬ್ರವರಿಯಲ್ಲಿ ಆರ್‌ಬಿಐ ಮೊದಲು ರೆಪೊ ದರವನ್ನು ಶೇ.0.25ರಷ್ಟು ಕಡಿತಗೊಳಿಸಿತ್ತು, ನಂತರ ಏಪ್ರಿಲ್‌ನಲ್ಲಿ ಮತ್ತೆ ರೆಪೊ ದರವನ್ನು ಶೇ.0.25ರಷ್ಟು ಕಡಿಮೆ ಮಾಡಲಾಗಿತ್ತು. ಈ ರೀತಿ 2 ತಿಂಗಳೊಳಗೆ ಆರ್‌ಬಿಐ ರೆಪೊ ದರವನ್ನು ಶೇ.6.50ರಿಂದ 6.00ಕ್ಕೆ ಇಳಿಸಿತು. ರೆಪೊ ದರ ಕಡಿತದೊಂದಿಗೆ ಒಂದೆಡೆ ಬ್ಯಾಂಕುಗಳು ಸಾಲಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಲು ಪ್ರಾರಂಭಿಸಿದವು. ಮತ್ತೊಂದೆಡೆ ಬ್ಯಾಂಕುಗಳು ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು ಸಹ ಕಡಿಮೆ ಮಾಡಲು ಪ್ರಾರಂಭಿಸಿದವು. ಇಂದು ನಾವು 12 ತಿಂಗಳ ಅವಧಿಯ FD ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡುತ್ತಿರುವ ಪ್ರಮುಖ ಬ್ಯಾಂಕುಗಳ ಮಾಹಿತಿ ಇಲ್ಲಿದೆ ನೋಡಿ...

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 12 ತಿಂಗಳ ಅವಧಿಯ FDಗಳ ಮೇಲೆ ಸಾಮಾನ್ಯ ನಾಗರಿಕರಿಗೆ ಶೇ.6.5ರಷ್ಟು ಬಡ್ಡಿ ಮತ್ತು ಹಿರಿಯ ನಾಗರಿಕರಿಗೆ ಶೇ.7.0ರಷ್ಟು ಬಡ್ಡಿಯನ್ನು ಪಾವತಿಸುತ್ತಿದೆ.

ಇದನ್ನೂ ಓದಿ: ಮಧ್ಯಮ ವರ್ಗದವರಿಗಾಗಿಯೇ ಇರುವ ಸರ್ಕಾರದ ಯೋಜನೆ ಇದು ! ದೊಡ್ಡ ಮಟ್ಟದ ಆದಾಯ ಗಳಿಸಲು ಬೆಸ್ಟ್ ಸ್ಕೀಮ್

ಬ್ಯಾಂಕ್ ಆಫ್ ಬರೋಡಾ: ಮಾರುಕಟ್ಟೆ ಬಂಡವಾಳೀಕರಣದ ವಿಷಯದಲ್ಲಿ ದೇಶದ 2ನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ, 12 ತಿಂಗಳ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ ಶೇ.6.8ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇ.7.30ರಷ್ಟು ಬಡ್ಡಿಯನ್ನು ನೀಡುತ್ತಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಂದರೆ ಪಿಎನ್‌ಬಿ ಕೂಡ ಸರ್ಕಾರಿ ಬ್ಯಾಂಕ್ ಆಗಿದೆ. ಈ ಬ್ಯಾಂಕ್ 12 ತಿಂಗಳ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ ಶೇ.6.7ರಷ್ಟು ಬಡ್ಡಿ ಮತ್ತು ಹಿರಿಯ ನಾಗರಿಕರಿಗೆ ಶೇ.7.20ರಷ್ಟು ಬಡ್ಡಿಯನ್ನು ನೀಡುತ್ತಿದೆ.

HDFC ಬ್ಯಾಂಕ್: ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ HDFC ಬ್ಯಾಂಕ್ 12 ತಿಂಗಳ FD ಮೇಲೆ ಸಾಮಾನ್ಯ ನಾಗರಿಕರಿಗೆ ಶೇ.6.6ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇ.7.1ರಷ್ಟು ಬಡ್ಡಿಯನ್ನು ನೀಡುತ್ತಿದೆ.

ಐಸಿಐಸಿಐ ಬ್ಯಾಂಕ್: ಐಸಿಐಸಿಐ ಬ್ಯಾಂಕ್ 12 ತಿಂಗಳ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ ಶೇ.6.7 ಮತ್ತು ಹಿರಿಯ ನಾಗರಿಕರಿಗೆ ಶೇ.7.2ರಷ್ಟು ಬಡ್ಡಿದರವನ್ನು ನೀಡುತ್ತಿದೆ.

ಆಕ್ಸಿಸ್ ಬ್ಯಾಂಕ್: ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್ 12 ತಿಂಗಳ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ ಶೇ.6.7ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇ.7.2ರಷ್ಟು ಬಡ್ಡಿಯನ್ನು ನೀಡುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಆಪಲ್ ಕಾರ್ಖಾನೆಗಳನ್ನು ಸ್ಥಾಪಿಸದಂತೆ ಟಿಮ್ ಕುಕ್‌ಗೆ ಡೊನಾಲ್ಡ್ ಟ್ರಂಪ್ ಸೂಚನೆ

(ಗಮನಿಸಿರಿ: ಈ ಲೇಖನವನ್ನು ಮಾಹಿತಿ ನೀಡುವ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯ ತೆಗೆದುಕೊಳ್ಳುವ ಮೊದಲು ದಯವಿಟ್ಟು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರಿಯಾಗಿರುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News