Sanjay Kapoor Net Worth: ಬಾಲಿವುಡ್ ಖ್ಯಾತ ನಟಿ ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ವಿಶ್ವದ ಬಹುದೊಡ್ಡ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು. ವಿಶ್ವದ ಅತಿದೊಡ್ಡ ಆಟೋ ಬಿಡಿಭಾಗ ತಯಾರಕರ ಕಂಪನಿಯೊಂದರ ಮುಖ್ಯಸ್ಥರಾಗಿದ್ದ ಸಂಜಯ್ ಕಪೂರ್ ನಿಧನ ಮನರಂಜನಾ ಕ್ಷೇತ್ರಕ್ಕೆ ಮಾತ್ರವಲ್ಲದೆ ವ್ಯವಹಾರ ಜಗತ್ತಿನಲ್ಲೂ ಅತಿದೊಡ್ಡ ಅಲೆಯನ್ನು ಸೃಷ್ಟಿಸಿದೆ. ಸಂಜಯ್ ಕಂಪೂರ್ ನಿಧನ ವಾರ್ತೆಯ ಬೆನ್ನಲ್ಲೇ ಶುಕ್ರವಾರ ಸಂಸ್ಥೆಯ ಷೇರುಗಳು 7% ರಷ್ಟು ಕುಸಿತ ಕಂಡಿದ್ದವು. ಇದೀಗ ಕಂಪನಿ ಸೋನಾ ಕಾಮ್‌ಸ್ಟಾರ್‌ನ ಮುಂದಿನ ಉತ್ತರಾಧಿಯಾಗಿ ಯಾರಾಗ್ತಾರೆ ಎಂಬ ಚರ್ಚೆ ಎಲ್ಲೆಡೆ ಜೋರಾಗಿದೆ.
ಸುಮಾರು $4 ಬಿಲಿಯನ್ ಸಾಮ್ರಾಜ್ಯದ ಒಡೆಯ ಸಂಜಯ್ ಕಪೂರ್:
2015 ರಲ್ಲಿ ತಮ್ಮ ತಂದೆಯ ಮರಣದ ನಂತರ ಆಟೋ ಬಿಡಿಭಾಗಗಳ ತಯಾರಕ ಸೋನಾ ಕಾಮ್‌ಸ್ಟಾರ್‌ನ ಅಧ್ಯಕ್ಷರಾಗಿದ್ದ ಸಂಜಯ್ ಕಪೂರ್ ಯಶಸ್ವಿಯಾಗಿ ಕಂಪನಿ ವಿಸ್ತರಣೆಯನ್ನು ಹೊಸ ಮಾರುಕಟ್ಟೆಗೆ ಮುನ್ನಡೆಸಿದ್ದರು. ಬ್ಲೂಮ್‌ಬರ್ಗ್ ಪ್ರಕಾರ, ಸೋನಾ ಕಾಮ್‌ಸ್ಟಾರ್ ₹ 31000 ಕೋಟಿ (ಸುಮಾರು $4 ಬಿಲಿಯನ್) ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.
2003ರಲ್ಲಿ ಕರೀಷ್ಮಾ ಕಪೂರ್ ಕೈ ಹಿಡಿದಿದ್ದ ಸಂಜಯ್ ಕಪೂರ್ 2016ರಲ್ಲಿ ವಿಚ್ಛೇದನ ಪಡೆದಿದ್ದರು. ಈ ದಂಪತಿಗೆ ಸಮೈರಾ (20 ) ಮತ್ತು ಕಿಯಾನ್ (14) ಎಂಬ ಇಬ್ಬರು ಮಕ್ಕಳಿದ್ದಾರೆ. ಸಂಜಯ್ ಕಪೂರ್ ಕಿರಿಯ ಮಗ ಅಜಾರಿಯಾಸ್ (ಅವರ ಮೂರನೇ ಪತ್ನಿ ಪ್ರಿಯಾ ಸಚ್‌ದೇವ್ ಪುತ್ರ) ಗೆ ಈಗಿನ್ನೂ 6 ವರ್ಷ ವಯಸ್ಸು. ಹಾಗಾಗಿ, ಸಂಜಯ್ ಕಪೂರ್ ಮಕ್ಕಳಲ್ಲಿ ಯಾರೂ ಸಹ ಸದ್ಯಕ್ಕೆ ಅದರ ಉತ್ತರಾಧಿಕಾರಿಯಾಗುವ ನಿರೀಕ್ಷೆಗಳಿಲ್ಲ.
ಇದನ್ನೂ ಓದಿ- ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ಮಾಧ್ಯಮ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಮಹತ್ವದ ಆರ್ಥಿಕ ಕ್ರಮ
ಯಾರಾಗ್ತಾರೆ ಸಂಜಯ್ ಕಪೂರ್ ಸಾಮ್ರಾಜ್ಯದ ಉತ್ತರಾಧಿಕಾರಿ?
ಸೋನಾ ಕಾಮ್‌ಸ್ಟಾರ್ ವ್ಯವಹಾರಗಳನ್ನು ಯಾರು ನಿರ್ವಹಿಸುತ್ತಾರೆ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ಆದಾಗ್ಯೂ, ಕಂಪನಿಯ ಆಡಳಿತ ಮಂಡಳಿ ಅಧಿಕಾರ ಚಲಾಯಿಸಿದರೂ, ಸಂಜಯ್ ಸಹೋದರಿಯರು ನಿರ್ವಹಣೆ ನಡೆಸಬಹುದು ಎಂದು ಇಂಡಿಯಾ.ಕಾಮ್ ವರದಿ ಮಾಡಿದೆ.
ಸಂಜಯ್ ಕಪೂರ್ ಅವರ ₹ 10300 ಕೋಟಿ ವೈಯಕ್ತಿಕ ಸಂಪತ್ತಿಗೆ ಒಡೆಯರಾರು?
2022 ಮತ್ತು 2024 ರಲ್ಲಿ ಸಂಜಯ್ ಕಪೂರ್ ಅವರ ಗರಿಷ್ಠ ಸಂಪತ್ತು ₹ 13000 ಕೋಟಿ ಆಗಿತ್ತು. ಫೋರ್ಬ್ಸ್ ವರದಿ ಪ್ರಕಾರ, ಸಂಜಯ್ ಕಪೂರ್ ನಿಧನರಾದಾಗ ಅವರ ನಿವ್ವಳ ಮೌಲ್ಯ $1.2 ಬಿಲಿಯನ್ ( ₹ 10300 ಕೋಟಿ) ಎಂದು ತಿಳಿದು ಬಂದಿದೆ.
ಇದನ್ನೂ ಓದಿ- ನಿಮ್ಮ ಸಂಬಳದ ಮೇಲೆ ಎಷ್ಟು ಪರ್ಸನಲ್ ಲೋನ್ ಪಡೆಯಬಹುದು? ₹25,000- ₹2 ಲಕ್ಷದವರೆಗೆ ಸಂಬಳವಿದ್ದವರು ನೋಡಿ
ಕಾನೂನಿನ ಪ್ರಕಾರ, ಸಂಜಯ್ ಅವರ ಎಸ್ಟೇಟ್ ಮತ್ತು ಸಂಪತ್ತಿನ ನಿರ್ವಹಣೆ ಎಲ್ಲವೂ ಅವರ ಪತ್ನಿ ಪ್ರಿಯಾ ಸಚ್‌ದೇವ್ ಅವರಿಗೆ ಹೋಗುತ್ತದೆ. ಆದಾಗ್ಯೂ, ಮೊದಲ ಪತ್ನಿ ಕರಿಷ್ಮಾ ಕಪೂರ್ ಅವರ ಇಬ್ಬರು ಮಕ್ಕಳಾದ ಸಮೈರಾ ಮತ್ತು ಕಿಯಾನ್ ಇಬ್ಬರಿಗೂ ಸಂಜಯ್ ₹ 14 ಕೋಟಿ ಮೌಲ್ಯದ ಬಾಂಡ್‌ಗಳನ್ನು ಉಡುಗೊರೆಯಾಗಿ ನೀಡಿದ್ದರು. ಅಲ್ಲದೆ, ತಲಾ ₹ 10 ಲಕ್ಷ ಮಾಸಿಕ ಆದಾಯ ಅವರಿಗೆ ಹೋಗುತ್ತದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









