ಸೋಮವಾರ ಷೇರು ಮಾರುಕಟ್ಟೆಯಲ್ಲಿ ಏನಾಗಲಿದೆ? ಏರಿಕೆಯಾಗುತ್ತೋ ಅಥವಾ ಕುಸಿತವಾಗುತ್ತೋ?

Stock Market News: ಕಳೆದ ವಾರ ರಜಾದಿನಗಳ ಕಾರಣ ಷೇರು ಮಾರುಕಟ್ಟೆಯಲ್ಲಿ ಕೇವಲ 3 ವಹಿವಾಟು ಅವಧಿಗಳು ಮಾತ್ರ ಇದ್ದವು. ಆದರೂ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ದಾಖಲಾಗಿದೆ. BSE ಸೆನ್ಸೆಕ್ಸ್ 3,395.94 ಪಾಯಿಂಟ್‌ಗಳು (4.51%) ಏರಿಕೆ ಕಂಡರೆ, ನಿಫ್ಟಿ 1,023.1 ಪಾಯಿಂಟ್‌ಗಳು (4.48%) ಜಿಗಿತ ಕಂಡಿದೆ.

Written by - Puttaraj K Alur | Last Updated : Apr 20, 2025, 04:06 PM IST
  • ಸೋಮವಾರದಿಂದ ಪ್ರಾರಂಭವಾಗುವ ವಾರದಲ್ಲಿ ಮಾರುಕಟ್ಟೆ ಏರಿಕೆಯಾಗುತ್ತೋ ಅಥವಾ ಕುಸಿತವಾಗುತ್ತೋ?
  • ಈ ವಾರ ಮಾರುಕಟ್ಟೆಯ ಏರಿಕೆ ಮುಂದುವರಿಯಬಹುದು ಎಂದು ಮೋತಿಲಾಲ್ ಓಸ್ವಾಲ್ ಲಿಮಿಟೆಡ್‌
  • ದೇಶದ ಎರಡನೇ ಅತಿದೊಡ್ಡ ಐಟಿ ಕಂಪನಿ ಇನ್ಫೋಸಿಸ್ ಷೇರುಗಳು ಸೋಮವಾರ ಸದ್ದು ಮಾಡಬಹುದು
ಸೋಮವಾರ ಷೇರು ಮಾರುಕಟ್ಟೆಯಲ್ಲಿ ಏನಾಗಲಿದೆ? ಏರಿಕೆಯಾಗುತ್ತೋ ಅಥವಾ ಕುಸಿತವಾಗುತ್ತೋ?

Stock Market News Update: ಕಳೆದ ವಾರ ಸೆನ್ಸೆಕ್ಸ್ 3,395.94 ಅಂಕಗಳ ಏರಿಕೆ ಕಂಡಿತ್ತು. ಅದೇ ರೀತಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ50 1,023.1 ಅಂಕಗಳ ಜಿಗಿತವನ್ನು ಕಂಡಿತ್ತು. ಷೇರು ಮಾರುಕಟ್ಟೆಯಲ್ಲಿನ ಅದ್ಭುತ ಕಮ್‌ಬ್ಯಾಕ್‌ನಿಂದ ಹೂಡಿಕೆದಾರರು ಭಾರೀ ಲಾಭ ಗಳಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಸೋಮವಾರದಿಂದ ಪ್ರಾರಂಭವಾಗುವ ವಾರದಲ್ಲಿ ಮಾರುಕಟ್ಟೆ ಏರಿಕೆಯಾಗುತ್ತೋ ಅಥವಾ ಕುಸಿತವಾಗುತ್ತೋ? ಅನ್ನೋ ಪ್ರಶ್ನೆ ಉದ್ಭವಿಸಿದೆ.

Add Zee News as a Preferred Source

ಎಫ್‌ಐಐ ಖರೀದಿ, ಹಣದುಬ್ಬರದಲ್ಲಿನ ಮಂದಗತಿ ಮತ್ತು ಉತ್ತಮ ಮಾನ್ಸೂನ್ ನಿರೀಕ್ಷೆಗಳಂತಹ ಸಕಾರಾತ್ಮಕ ಸೂಚನೆಗಳಿಂದ ಈ ವಾರ ಮಾರುಕಟ್ಟೆಯ ಏರಿಕೆ ಮುಂದುವರಿಯಬಹುದು ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನ ಸಂಪತ್ತು ನಿರ್ವಹಣೆಯ ಮುಖ್ಯಸ್ಥ (ಸಂಶೋಧನೆ) ಸಿದ್ಧಾರ್ಥ್ ಖೇಮ್ಕಾ ಹೇಳಿದ್ದಾರೆ. ಆದರೆ ಅಮೆರಿಕದ ಸುಂಕ ನೀತಿಯ ಕುರಿತ ಉದ್ವಿಗ್ನತೆ ಹೆಚ್ಚಾದರೆ, ಮಾರುಕಟ್ಟೆ ಅಸ್ಥಿರತೆಯನ್ನ ಎದುರಿಸಬಹುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: BSNL 5G ಸಿಮ್ ಕಾರ್ಡ್ ಆನ್‌ಲೈನ್ ಬುಕಿಂಗ್ ಸೇವೆ ಭಾರತದಲ್ಲಿ ಆರಂಭ

ತ್ರೈಮಾಸಿಕ ಫಲಿತಾಂಶ

ಮುಂಬರುವ ವಾರದಲ್ಲಿ ದೇಶೀಯ ಷೇರು ಮಾರುಕಟ್ಟೆಗಳ ದಿಕ್ಕು ಹಲವಾರು ಪ್ರಮುಖ ಅಂಶಗಳನ್ನು ಅವಲಂಬಿಸಿರುತ್ತದೆ. ಇವುಗಳಲ್ಲಿ ದೊಡ್ಡ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು, ಅಮೆರಿಕದ ಸುಂಕ ನೀತಿಗೆ ಸಂಬಂಧಿಸಿದ ಬೆಳವಣಿಗೆಗಳು ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರ (FPI) ಚಟುವಟಿಕೆಗಳು ಸೇರಿವೆ. ಜಾಗತಿಕ ಮಾರುಕಟ್ಟೆಯ ಚಲನವಲನಗಳು, ಕಚ್ಚಾ ತೈಲ ಬೆಲೆಗಳು ಮತ್ತು ರೂಪಾಯಿ ಸ್ಥಾನವು ಮಾರುಕಟ್ಟೆಯ ಭಾವನೆಯ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ನಂಬಿದ್ದಾರೆ. "ಈ ವಾರ ಹೂಡಿಕೆದಾರರು ಎಚ್‌ಸಿಎಲ್ ಟೆಕ್ನಾಲಜೀಸ್, ಆಕ್ಸಿಸ್ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಮಾರುತಿಯಂತಹ ದೊಡ್ಡ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳನ್ನು ನೋಡಲಿದ್ದಾರೆ.

ಇದರೊಂದಿಗೆ ಜಾಗತಿಕ ಮಟ್ಟದಲ್ಲಿ ಸುಂಕಗಳಿಗೆ ಸಂಬಂಧಿಸಿದ ಯಾವುದೇ ರೀತಿಯ ಚಲನವಲನವನ್ನು ಸಹ ಮೇಲ್ವಿಚಾರಣೆ ಮಾಡಲಾಗುತ್ತದೆ" ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ (ಸಂಶೋಧನೆ) ಅಜಿತ್ ಮಿಶ್ರಾ ಹೇಳಿದ್ದಾರೆ. ಮಾರುಕಟ್ಟೆಯಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ, ಆದರೆ ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಮುಂದುವರಿದರೆ ಏರಿಳಿತಗವಾಗುವುದನ್ನ ತಳ್ಳಿಹಾಕುವಂತಿಲ್ಲ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, EPS-95 ಯೋಜನೆಯಡಿ ಕನಿಷ್ಠ ಮಾಸಿಕ ಪಿಂಚಣಿಯಲ್ಲಿ ಭಾರಿ ಹೆಚ್ಚಳ..!

ಇನ್ಫೋಸಿಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಮೇಲೆ ಕಣ್ಣು

ದೇಶದ ಎರಡನೇ ಅತಿದೊಡ್ಡ ಐಟಿ ಕಂಪನಿ ಇನ್ಫೋಸಿಸ್ ಷೇರುಗಳು ಸೋಮವಾರ ಸದ್ದು ಮಾಡಬಹುದು. ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು ಶೇ.11.7ರಷ್ಟು ಕುಸಿದು 7,033 ಕೋಟಿ ರೂ.ಗಳಿಗೆ ತಲುಪಿದೆ. ಅದೇ ರೀತಿ HDFC ಬ್ಯಾಂಕ್ ಕೂಡ ಶನಿವಾರ ತನ್ನ ಫಲಿತಾಂಶಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬ್ಯಾಂಕಿನ ನಿವ್ವಳ ಲಾಭವು ಶೇ.7ರಷ್ಟು ಹೆಚ್ಚಾಗಿ 18,835 ಕೋಟಿ ರೂ.ಗಳಿಗೆ ತಲುಪಿದೆ. ಆದರೆ ವಸತಿ ಮತ್ತು ಕಾರ್ಪೊರೇಟ್ ಸಾಲಗಳ ಬೆಲೆ ನಿಗದಿಯು ಸಾಲದ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಬಗ್ಗೆ ಬ್ಯಾಂಕ್ ಕಳವಳ ವ್ಯಕ್ತಪಡಿಸಿದೆ. ಐಸಿಐಸಿಐ ಬ್ಯಾಂಕ್ ಮಾರ್ಚ್ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಶೇ.15.7ರಷ್ಟು ಏರಿಕೆಯಾಗಿ 13,502 ಕೋಟಿ ರೂ.ಗಳಿಗೆ ತಲುಪಿದೆ ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News