ದೇಶಾದ್ಯಂತ ಮಹಿಳೆಯರಿಗೆ ಸಿಗುತ್ತಿದೆ 11,000 ರೂ. : ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರದ ಮಹತ್ವದ ಯೋಜನೆ

ಭಾರತದಲ್ಲಿ ಅನೇಕ ಮಹಿಳೆಯರು ಈಗಾಗಲೇ ಈ ಯೋಜನೆಯ ಸಹಾಯ ಪಡೆಯುತ್ತಿದ್ದಾರೆ. ಈ ಯೋಜನೆಯ ಪ್ರಯೋಜನ ಪಡೆಯಬೇಕಾದರೆ ಅರ್ಜಿ ಸಲ್ಲಿಸಬೇಕಾಗುತ್ತದೆ. 

Written by - Ranjitha R K | Last Updated : Nov 10, 2025, 09:46 AM IST
  • ಮಹಿಳೆಯರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ
  • ಅವುಗಳಲ್ಲಿ ಒಂದು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ
  • ತಾಯಿ, ಮಗುವಿಗೆ ಸರಿಯಾದ ಆಹಾರ ಮತ್ತು ವೈದ್ಯಕೀಯ ಆರೈಕೆ ನೀಡುವ ಉದ್ದೇಶ
ದೇಶಾದ್ಯಂತ ಮಹಿಳೆಯರಿಗೆ  ಸಿಗುತ್ತಿದೆ 11,000 ರೂ. : ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರದ ಮಹತ್ವದ ಯೋಜನೆ

ಮಹಿಳೆಯರು ಆರೋಗ್ಯವಾಗಿರಲು ಮತ್ತು ಹಣ ಸಂಪಾದಿಸಲು ಸಹಾಯ ಮಾಡಲು ಭಾರತ ಸರ್ಕಾರ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ. ಅವುಗಳಲ್ಲಿ ಒಂದು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY).ಈ ಯೋಜನೆಯು ಗರ್ಭಿಣಿ ಮತ್ತು ಮೊದಲ ಬಾರಿಗೆ ತಾಯಿಯಾಗುತ್ತಿರುವ ಮಹಿಳೆಯರಿಗಾಗಿ  ಪರಿಚಯಿಸಲಾಗಿದೆ. ತಾಯಿ ಮತ್ತು ಮಗುವಿಗೆ ಸರಿಯಾದ ಆಹಾರ ಮತ್ತು ವೈದ್ಯಕೀಯ ಆರೈಕೆಯನ್ನು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಅಲ್ಲದೆ, ತಾಯಂದಿರ ಮರಣದ ಸಂಖ್ಯೆಯನ್ನು ಕಡಿಮೆ ಮಾಡುವುದು ಕೂಡಾ ಈ ಯೋಜನೆಯ ಮುಖ್ಯ ಗುರಿಯಾಗಿದೆ. ಭಾರತದಲ್ಲಿ ಅನೇಕ ಮಹಿಳೆಯರು ಈಗಾಗಲೇ ಈ ಯೋಜನೆಯ ಸಹಾಯ ಪಡೆಯುತ್ತಿದ್ದಾರೆ. ಈ ಯೋಜನೆಯ ಪ್ರಯೋಜನ ಪಡೆಯಬೇಕಾದರೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಂತರ   ಹಣವು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಸೇರುತ್ತದೆ. 

Add Zee News as a Preferred Source

ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ : 
ಈ ಯೋಜನೆಯು ಮೊದಲ ಬಾರಿಗೆ ತಾಯಿಯಾಗುತ್ತಿರುವವರಿಗಾಗಿ ಪರಿಚಯಿಸಲಾಗಿದೆ. ಎರಡನೇ ಮಗು ಹೆಣ್ಣಾಗಿದ್ದರೆ ಹೆಚ್ಚುವರಿ ಹಣವನ್ನು ನೀಡಲಾಗುತ್ತದೆ. ಎಸ್‌ಸಿ, ಎಸ್‌ಟಿ, ಅಂಗವಿಕಲರು ಮತ್ತು ಆಯುಷ್ಮಾನ್ ಭಾರತ್ ಗುಂಪುಗಳ ಮಹಿಳೆಯರು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಪ್ರಯೋಜನ ಪಡೆಯಬೇಕಾದರೆ ಮಹಿಳೆಗೆ ಕನಿಷ್ಟ 19 ವರ್ಷ ವಯಸ್ಸಾಗಿರಬೇಕು. ಹೆರಿಗೆಯಾದ 270 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕು. 

ಇದನ್ನೂ ಓದಿ : ಎಗ್ಗಿಲ್ಲದೆ ಏರುತ್ತಿರುವ ಚಿನ್ನದ ಬೆಲೆಗೆ ಬಿತ್ತು ಲಗಾಮು ! ಗಗನದಿಂದ ಪಾತಾಳಕ್ಕೆ ಬಂಗಾರದ ದರ

ಮಹಿಳೆಯರಿಗೆ ಎಷ್ಟು ಸಹಾಯ ಸಿಗುತ್ತದೆ? :
PMMVY ಯೋಜನೆಯಡಿ ಮಹಿಳೆಯರು 11,000 ರೂ.  ಪಡೆಯುತ್ತಾರೆ. ಮೊದಲ ಮಗುವಿಗೆ, 5,000 ರೂ.ಯನ್ನು ಮೂರು ಭಾಗಗಳಲ್ಲಿ ನೀಡಲಾಗುತ್ತದೆ. 
ಗರ್ಭಧಾರಣೆಯನ್ನು ನೋಂದಾಯಿಸಿದ ನಂತರ 1,000.
ಆರನೇ ತಿಂಗಳಲ್ಲಿ ಆರೋಗ್ಯ ತಪಾಸಣೆಯ ನಂತರ 2,000.
ಹೆರಿಗೆ ಮತ್ತು ಲಸಿಕೆ ಹಾಕಿದ ನಂತರ 2,000.
ಎರಡನೇ ಮಗು ಹೆಣ್ಣಾಗಿದ್ದರೆ, ಅವರಿಗೆ ಹೆಚ್ಚುವರಿಯಾಗಿ 6,000 ರೂ . ಸಿಗುತ್ತದೆ.

ಹಣವನ್ನು ಹೇಗೆ ನೀಡಲಾಗುತ್ತದೆ? : 
ಮೊದಲ ಮಗುವಿಗೆ ಮಹಿಳೆಯರು ಮೂರು ಸರಳ ಹಂತಗಳಲ್ಲಿ 5,000 ರೂ. ಪಡೆಯುತ್ತಾರೆ:
ಮೂರು ತಿಂಗಳ ಗರ್ಭಾವಸ್ಥೆಯ ನಂತರ 1,000 ರೂ .
ಒಂದು ಪ್ರಸವಪೂರ್ವ ತಪಾಸಣೆಯ ನಂತರ 2,000 ರೂ .
ಜನನ ನೋಂದಣಿ ಮತ್ತು ಮೊದಲ ಲಸಿಕೆಯ ನಂತರ 2,000. ರೂ . ನೀಡಲಾಗುತ್ತದೆ. 
ಈ ಹಣವು ತಾಯಂದಿರಿಗೆ ಆಹಾರವನ್ನು ಖರೀದಿಸಲು ಮತ್ತು ವೈದ್ಯಕೀಯ ಆರೈಕೆಯನ್ನು ಪಡೆಯಲು ಸಹಾಯ ಮಾಡುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ ? : 
ಮಹಿಳೆಯರು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಫಾರ್ಮ್ ಅನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. 
ಆಫ್‌ಲೈನ್: ಹತ್ತಿರದ ಅಂಗನವಾಡಿ ಅಥವಾ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. 
ಅನುಮೋದನೆಯ ನಂತರ, ಹಣವು DBT ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಹೋಗುತ್ತದೆ.

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಬಹುದೊಡ್ಡ ಆಘಾತ? 8ನೇ ವೇತನ ಆಯೋಗ ಮತ್ತಷ್ಟು ವಿಳಂಬ..?

ಅಗತ್ಯವಿರುವ ದಾಖಲೆಗಳು : 
ಪಡಿತರ ಚೀಟಿ
ಬ್ಯಾಂಕ್ ಪಾಸ್‌ಬುಕ್ ಪ್ರತಿ
ಆಧಾರ್ ಕಾರ್ಡ್ ಅಥವಾ ಐಡಿ ಪ್ರೂಫ್
ಗರ್ಭಧಾರಣೆಯ ವೈದ್ಯಕೀಯ ವರದಿ
ತಾಯಿ ಮತ್ತು ಮಗುವಿನ ಆರೋಗ್ಯ ಕಾರ್ಡ್
ದಾಖಲೆಗಳ ಪರಿಶೀಲನೆಯ ನಂತರ, ಸರ್ಕಾರವು ಹಣವನ್ನು ಖಾತೆಗೆ ಕಳುಹಿಸುತ್ತದೆ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News