Nita Ambani expensive handbag: ಬಾಲಿವುಡ್ ಮಂದಿ ಸೇರಿದಂತೆ ದೇಶದ ಶ್ರೀಮಂತ ವ್ಯಕ್ತಿಗಳ ನೆಚ್ಚಿನ ಡಿಸೈನರ್ ಆಗಿರುವ ಮನಿಷ್ ಮಲ್ಹೋತ್ರಾ ಅಕ್ಟೋಬರ್ 12, 2025ರಂದು ಆಯೋಜಿಸಿದ್ದ ದೀಪಾವಳಿ ಪಾರ್ಟಿ ಸದ್ಯ ಭಾರೀ ಚರ್ಚೆಯ ವಿಷಯವಾಗಿದೆ. ಆದರೆ, ಈ ಚರ್ಚೆ ಮನೀಶ್ ಮಲ್ಹೊತ್ರಾ ಅವರ ಪಾರ್ಟಿಯ ಬಗ್ಗೆಯಲ್ಲ ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಕೈಯಲ್ಲಿದ್ದ ಬ್ಯಾಗ್ ಬಗ್ಗೆ ಆಗಿದೆ.

ಮನೀಶ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿಯಲ್ಲಿ ತಮ್ಮ ಮುದ್ದು ಸೊಸೆ ರಾಧಿಕಾ ಮರ್ಚೆಂಟ್ ಜೊತೆಗೆ ಕಾಣಿಸಿಕೊಂಡ ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ಮತ್ತು ಸಂಸ್ಥಾಪಕಿ ನೀತಾ ಅಂಬಾನಿ ಮಿಣ ಮಿಣ ಮಿನುಗುವ ಸಿಲ್ವರ್ ಸ್ಯಾರಿ, ಪಚ್ಚೆ ಕಿವಿಯೋಲೆಗಳೊಂದಿಗೆ ಪರಿಕರಗಳನ್ನು ಧರಿಸಿ ಬೆರಗುಗೊಳಿಸಿದರು. ಇದೇ ವೇಳೆ ರಾಧಿಕಾ ಮರ್ಚೆಂಟ್ ವಜ್ರದ ಆಭರಣಗಳೊಂದಿಗೆ ತಯಾರಿಸಲಾದ ದಂತದ ಬಣ್ಣದ ಸೀರೆಯಲ್ಲಿ ಡೈಮಂಡ್ ಸೆಟ್ ಆಭರಣಗಳನ್ನು ಧರಿಸಿ ಕಂಗೊಳಿಸಿದರು. ಆದರೆ, ಈ ದೀಪಾವಳಿ ಪಾರ್ಟಿಯಲ್ಲಿ ಇಂಟರ್ನೆಟ್‌ನ ಗಮನ ಸೆಳೆದು ಜನರನ್ನು ಮೋಡಿ ಮಾಡಿದ್ದು ಮಾತ್ರ, ನಿತಾ ಅಂಬಾನಿ ಕೈಯಲ್ಲಿದ್ದ ಮಿನಿ ಸ್ಟರ್ಲಿಂಗ್ ಬೆಳ್ಳಿ ಕೆಲ್ಲಿಮಾರ್ಫೋಸ್ ಸ್ಯಾಕ್ ಬಿಜೌ ಬ್ಯಾಗ್.
ಕೆಲ್ಲಿಮಾರ್ಫೋಸ್ ಬ್ಯಾಗ್:
ವಿಶ್ವದ ಅತ್ಯಂತ ದುಬಾರಿ ಹರ್ಮೆಸ್ ಬ್ಯಾಗ್‌ಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಅಪರೂಪದ ಕೆಲ್ಲಿಮಾರ್ಫೋಸ್ ಬ್ಯಾಗ್ ಅನ್ನು 1930ರ ದಶಕದಲ್ಲಿ ರಾಬರ್ಟ್ ಡುಮಾಸ್ ವಿನ್ಯಾಸಗೊಳಿಸಿರು. ನಟಿ ಮತ್ತು ರಾಜಮನೆತನದ ಗ್ರೇಸ್ ಕೆಲ್ಲಿ ಅವರ ಗೌರವಾರ್ಥವಾಗಿ ಇದಕ್ಕೆ ಹರ್ಮೆಸ್ ಕೆಲ್ಲಿ ಬ್ಯಾಗ್ ಎಂದು ಹೆಸರಿಸಲಾಗಿದೆ.
ಕೆಲ್ಲಿಮಾರ್ಫೋಸ್ ವಿಶಿಷ್ಟ ಏಕೆ?
ಹರ್ಮೆಸ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಕೆಲ್ಲಿ ಒಂದು ಸಾಮಾನ್ಯ ಬ್ಯಾಗ್ ಅಲ್ಲ. ಅದೊಂದು ನಿಗೂಢ ಮತ್ತು ದಂತಕತೆಯಾಗಿದೆ. ಬಲವಾದ ದೃಢವಾದ ಆಕಾರವನ್ನು ಹೊಂದಿರುವ ಕೆಲ್ಲಿಮಾರ್ಫೋಸ್ ಸಂಗ್ರಹವು ಐಕಾನಿಕ್ ಕೆಲ್ಲಿ ಬ್ಯಾಗ್ ಕ್ರಿಯಾತ್ಮಕ ಮತ್ತು ಅಲಂಕಾರಿಕ ರೂಪಗಳಲಿ ಕಾಣಬಹುದು. ಇದು, ಗುಲಾಬಿ ಚಿನ್ನ, ತುಂಬಾನಯವಾದ ಕಪ್ಪು, ಬಿಳಿ ಚಿನ್ನ, ಘನ ಬೆಳ್ಳಿ ಮತ್ತು ಸ್ಟರ್ಲಿಂಗ್ ಬೆಳ್ಳಿಯ ಛಾಯೆಗಳಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, ಈ ಬ್ಯಾಗ್ ಬ್ಯಾಗೆಟ್-ಕಟ್ ವಜ್ರಗಳಿಂದ ಹೊಂದಿಸಲ್ಪಟ್ಟಿದೆ.
ಐಷಾರಾಮಿ ಫ್ಯಾಷನ್ ಇನ್‌ಸ್ಟಾಗ್ರಾಮ್ ಪೇಜ್, ತ್ರೀ ಓವರ್ ಸಿಕ್ಸ್ ಪ್ರಕಾರ, ಈ ಗಮನಾರ್ಹ ಹ್ಯಾಂಡ್‌ಬ್ಯಾಗ್ ಅನ್ನು ಘನ 18k ಬಿಳಿ ಚಿನ್ನದಿಂದ ಸೂಕ್ಷ್ಮವಾಗಿ ನಿರ್ಮಿಸಲಾಗಿದೆ. ಈ ಬ್ಯಾಗ್ ಅನ್ನು 3,025 ಬೆರಗುಗೊಳಿಸುವ ವಜ್ರಗಳಿಂದ ಅಲಂಕರಿಸಲಾಗಿದೆ. ಒಟ್ಟು 111.09 ಕ್ಯಾರೆಟ್ ತೂಕವನ್ನು ಹೊಂದಿದೆ ಎನ್ನಲಾಗಿದೆ.
ನೀತಾ ಅಂಬಾನಿ ಕೈಯಲ್ಲಿದ್ದ ಬ್ಯಾಗ್ ಬೆಲೆ ಎಷ್ಟು?
ಮನೀಶ್ ಮಲ್ಹೊತ್ರಾ ದೀಪಾವಳಿ ಪಾರ್ಟಿಯಲ್ಲಿ ನೀತಾ ಅಂಬಾನಿ ಕೈಯಲ್ಲಿದ್ದ ಬ್ಯಾಗ್ ಅನ್ನು ಹರ್ಮಿಸ್ ಬಿರ್ಕಿನ್ ಸ್ಪೆಷಲ್ ಎಡಿಶನ್ ಮಿನಿಯೇಚರ್ ಬ್ಯಾಗ್ ಎಂದು ಗುರುತಿಸಲಾಗಿದ್ದು ಈ ಹರ್ಮಿಸ್ ಕೆಲ್ಲಮೊರ್ಫೋಸ್ ಬ್ಯಾಕ್ 18ಕ್ಯಾರೆಟ್ ಚಿನ್ನದಿಂದ ನಿರ್ಮಿತವಾಗಿದೆ. ಇದರಲ್ಲಿ ಬರೋಬ್ಬರಿ 3035 ವಜ್ರಗಳನ್ನು ಪೋನಿಸಲಾಗಿದ್ದು ಇದರ ಬೆಲೆ 15 ಕೋಟಿ ರೂ.ಗಳು ಎನ್ನಲಾಗುತ್ತಿದೆ. ಇನ್ನೂ ಕೆಲವು ವರದಿಗಳು ಈ ಐತಿಹಾಸಿಕ ಹೆರ್ಮಿಸ್ ಸಾಕ್ ಬಿಜೋಸ್ ಬಿರ್ಕಿನ್ ಬ್ಯಾಗ್ ಬೆಲೆ 17ಕೋಟಿ ರೂ. ಇರಬಹುದು ಎಂದು ಅಂದಾಜಿಸಿವೆ.









