Gold Price Drop: ದಿನೇ ದಿನೇ ಹೆಚ್ಚಾಗುತ್ತಿರುವ ಬೇಡಿಕೆ ಹಾಗೂ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಕಳೆದೆರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಹೊಸ ದಾಖಲೆಯಾನೆ ಸೃಷ್ಟಿಸಿದೆ. ಆಗಸದೆತ್ತರಕ್ಕೆ ಏರುತ್ತಿರುವ 'ಹಳದಿ ಲೋಹ'ದ ದರ ನೋಡಿದರೆ ಮಧ್ಯಮವರ್ಗದ ಜನರು ಚಿನ್ನ ಖರೀದಿಸುವುದು ಒಂದು ಕನಸು ಎಂಬಂತೆ ಭಾಸವಾಗುತ್ತಿದೆ. ಏತನ್ಮಧ್ಯೆ ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಶೀಘ್ರದಲ್ಲೇ ಚಿನ್ನದ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಚಿನ್ನದ ಬೆಲೆ ಲಕ್ಷದ ಗಡಿ ಮುಟ್ಟಲಿದೆ ಎಂಬ ವರದಿಗಳ ನಡುವೆ ಇದೊಂದು ನೆಮ್ಮದಿಯ ಸುದ್ದಿ ಎಂತಲೇ ಹೇಳಬಹುದು. ವಾಸ್ತವವಾಗಿ, ಭಾರತದಲ್ಲೇ ಬೃಹತ್ ಚಿನ್ನದ ನಿಕ್ಷೇಪವೊಂದು ಪತ್ತೆಯಾಗಿದ್ದು, ಶೀಘ್ರದಲ್ಲೇ ಚಿನ್ನದ ಬೆಲೆ ಇಳಿಮುಖವಾಗಲಿದೆ ಎಂಬ ನಿರೀಕ್ಷೆಯನ್ನು ಹೆಚ್ಚಿಸಿದೆ.
ಇದನ್ನೂ ಓದಿ- ಕರ್ನಾಟಕದಲ್ಲಿ ಇಂದಿನಿಂದ ಹಾಲು, ಮೊಸರು, ವಿದ್ಯುತ್, ಟೋಲ್ ಸೇರಿದಂತೆ ಯಾವೆಲ್ಲ ವಸ್ತುಗಳ ಬೆಲೆ ಎಷ್ಟೆಷ್ಟು ಏರಿಕೆ?
ಭಾರತೀಯ ವಿಜ್ಞಾನಿಗಳು ಖನಿಜ ಸಂಪತ್ತಿಗೆ ಖ್ಯಾತಿ ಹೊಂದಿರುವ ಒಡಿಶಾ ರಾಜ್ಯದಲ್ಲಿ ಬೃಹತ್ ಆದ ಚಿನ್ನದ ನಿಕ್ಷೇಪವನ್ನು ಪತ್ತೆ ಹಚ್ಚಿದ್ದು, ಇದು ಭಾರತದ ಚಿನ್ನದ ನಿಕ್ಷೇಪಗಳ ಭವಿಷ್ಯವನ್ನೇ ಬದಲಾಯಿಸಬಹುದು ಎಂದು ತಿಳಿಸಿದ್ದಾರೆ. ವರದಿಗಳ ಪ್ರಕಾರ, ವಿಜ್ಞಾನಿಗಳು ಒಡಿಶಾದ ಕಿಯೋಂಜಾರ್, ಮಯೂರ್ಭಂಜ್, ಸುಂದರ್ಗಢ್, ಕೊರಪುಟ್, ಮಲ್ಕನ್ಗಿರಿ, ನಬರಂಗ್ಪುರ, ಬೌಧ್ ಮತ್ತು ಅಂಗುಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಶೋಧಕಾರ್ಯ ನಡೆಸಿದೆ.
ವಿಜ್ಞಾನಿಗಳ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಕಿಯೋಂಜಾರ್ ಜಿಲ್ಲೆಯ ಅರದಂಗಿ, ದಿಮಿರ್ಮುಡಾ, ತೆಲ್ಕೊಯ್, ಗೋಪುರ, ಗಜಜೈಪುರ, ಸಲೈಕಾನಾ, ಸಿಂಗ್ಪುರ್ ಮತ್ತು ಕುಸಕಲಾದಲ್ಲಿ ಹೆಚ್ಚಿನ ಸಾಂದ್ರತೆ ಕಂಡು ಬಂದಿದ್ದು, ಈ ಭಾಗಗಳಲ್ಲಿ ಚಿನ್ನದ ಗಣಿಗಾರಿಕೆ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನಿರೀಕ್ಷೆಯಂತೆ ಭಾರತದ ಈ ಪ್ರದೇಶಗಳಲ್ಲಿ ಚಿನ್ನದ ಗಣಿಗಾರಿಕೆ ಆರಂಭವಾದರೆ ಆಗಸದೆತ್ತರಕ್ಕೆ ಏರಿ ಜನಸಾಮಾನ್ಯರಿಗೆ ಕನಸಾಗಿರುವ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.
ಇಂದಿನ ಚಿನ್ನ ಬೆಳ್ಳಿ ಬೆಲೆ:
ಗಮನಾರ್ಯವಾಗಿ ಇಂದು (ಏಪ್ರಿಲ್ 02, 2025) ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.
ಭಾರತದಲ್ಲಿ ಇಂದಿನ ಚಿನ್ನದ ದರ ಕೆಳಕಂಡಂತಿದೆ
* 24K ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9191
* 22K ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8425
* 18K ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹6894 ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆ ಇರುತ್ತದೆ. ಆದಾಗ್ಯೂ, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮೇಲ್ಕಂಡಂತೆಯೇ ಇದೆ.
ಇಂದಿನ ಬೆಳ್ಳಿ ಬೆಲೆ:
ಬೆಳ್ಳಿ ಬೆಲೆ ಇಂದೂ ಕೂಡ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇಂದಿನ (ಏಪ್ರಿಲ್ 02, 2025) ಬೆಳ್ಳಿ ದರ ಪ್ರತಿ ಕೆಜಿಗೆ ₹1,03,90 ಆಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









