ಬಂಗಾರ ಪ್ರಿಯರಿಗೆ ಶಾಕ್..! ಮತ್ತೆ ಏರಿಕೆಯಾದ ಚಿನ್ನದ ಬೆಲೆ..!

Gold Rate: ಕಳೆದ ವಾರ ಸತತ ನಾಲ್ಕು ದಿನ ಕುಸಿತ ಕಂಡಿದ್ದ 'ಹಳದಿ ಲೋಹ'ದ ಬೆಲೆ ಇದೀಗ ಮತ್ತೆ ಏರಿಕೆಯಾಗತೊಡಗಿದ್ದು ಬಂಗಾರ ಪ್ರಿಯರಿಗೆ ನಿರಾಶೆ ಉಂಟು ಮಾಡಿದೆ. 

Written by - Yashaswini V | Last Updated : Apr 10, 2025, 08:35 AM IST
  • ಏಪ್ರಿಲ್ ಮೊದಲ ವಾರದಲ್ಲಿ ಸತತವಾಗಿ ನಾಲ್ಕು ದಿನಗಳ ಕಾಲ ಇಳಿಮುಖವಾಗಿದ್ದ ಚಿನ್ನದ ಬೆಲೆ ನಿನ್ನೆಯಿಂದ ಮತ್ತೆ ಏರಿಕೆಯಾಗತೊಡಗಿದೆ.
  • ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (ಎಂಸಿ‌ಎಕ್ಸ್) ದತ್ತಾಂಶಗಳ ಪ್ರಕಾರ, ಏಪ್ರಿಲ್ 06, 2025ರಂದು ಚಿನ್ನದ ಬೆಲೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿತ್ತು.
  • ಆ ದಿನ ಪ್ರತಿ 10 ಗ್ರಾಂ ಚಿನ್ನದ ದರ ಸುಮಾರು 88,130ರೂ.ಗೆ ಇಳಿದಿತ್ತು.
ಬಂಗಾರ ಪ್ರಿಯರಿಗೆ ಶಾಕ್..! ಮತ್ತೆ ಏರಿಕೆಯಾದ ಚಿನ್ನದ ಬೆಲೆ..!

Gold Rate In Bangalore: ವಿಶ್ವದಾದ್ಯಂತ ಸುರಕ್ಷಿತ ಆಸ್ತಿ ಹೂಡಿಕೆಯಾಗಿ ಜನಪ್ರಿಯವಾಗಿರುವ ಚಿನ್ನದ ಬೆಲೆ ಶೀಘ್ರದಲ್ಲೇ ಭಾರೀ ಕುಸಿತವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದರು. ಇದಕ್ಕೆ ಪೂರಕವಾಗಿ, ಏಪ್ರಿಲ್ ಮೊದಲ ವಾರದಲ್ಲಿ ಸತತವಾಗಿ ನಾಲ್ಕು ದಿನಗಳ ಕಾಲ ಇಳಿಮುಖವಾಗಿದ್ದ ಚಿನ್ನದ ಬೆಲೆ ನಿನ್ನೆಯಿಂದ ಮತ್ತೆ ಏರಿಕೆಯಾಗತೊಡಗಿದೆ. 

Add Zee News as a Preferred Source

ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (ಎಂಸಿ‌ಎಕ್ಸ್) ದತ್ತಾಂಶಗಳ ಪ್ರಕಾರ, ಏಪ್ರಿಲ್ 06, 2025ರಂದು ಚಿನ್ನದ ಬೆಲೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಆ ದಿನ ಪ್ರತಿ 10 ಗ್ರಾಂ ಚಿನ್ನದ ದರ ಸುಮಾರು 88,130ರೂ.ಗೆ ಇಳಿದಿತ್ತು. ಇನ್ನೂ ಅದೇ ದಿನ ಬೆಳ್ಳಿಯ ಬೆಲೆ ಪ್ರತಿ ಕಿಲೋಗ್ರಾಂಗೆ 92,403ರಷ್ಟಿತ್ತು. ಆದಾಗ್ಯೂ, ಮತ್ತೆ 'ಹಳದಿ ಲೋಹ'ದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. 

ಇದನ್ನೂ ಓದಿ- EPFO ಬಹು ದೊಡ್ಡ ನಿರ್ಧಾರ! ಇನ್ಮುಂದೆ ಪಿ‌ಎಫ್ ವಿತ್ ಡ್ರಾ ಮಾಡಲು ಇದರ ಅವಶ್ಯಕತೆ ಇಲ್ಲ, ಎರಡೇ ದಿನಕ್ಕೆ ಖಾತೆ ಸೇರುತ್ತೆ ಹಣ...!

ಚಿನ್ನದ ಬೆಲೆಯಲ್ಲಿ ಇಂದೂ ಸಹ ಏರಿಕೆ: 
ಚಿನ್ನದ ಬೆಲೆಯಲ್ಲಿ ನಿನ್ನೆಯ ದರಕ್ಕೆ ಹೋಲಿಸಿದರೆ ಔನ್ಸ್‌ಗೆ ಸುಮಾರು 700ರೂ. ಹೆಚ್ಚಳವಾಗಿದೆ. ಆದಾಗ್ಯೂ, ಬೆಳ್ಳಿಯ ಬೆಲೆಯಲ್ಲಿ ಪ್ರತಿ ಕೆಜಿಗೆ ಸುಮಾರು 1000 ರೂ.ಗಳಷ್ಟು ಕಡಿಮೆಯಾಗಿದೆ. 

ದೇಶದ ಪ್ರಮುಖ ನಗರಗಳಲ್ಲಿ ಇಂದಿನ 22K, 24K ಚಿನ್ನದ ದರ ಎಷ್ಟಿದೆ? 
ದೆಹಲಿಯಲ್ಲಿ ಪ್ರತಿ 10 ಗ್ರಾಂಗೆ  22K ಚಿನ್ನದ ದರ -  83,060ರೂ., 24K ಚಿನ್ನದ ದರ 90,600 ರೂ. ಆಗಿದೆ. 
ಚೆನ್ನೈನಲ್ಲಿ ಪ್ರತಿ 10 ಗ್ರಾಂಗೆ  22K ಚಿನ್ನದ ದರ -  82,910ರೂ., 24K ಚಿನ್ನದ ದರ 90,450 ರೂ. ನಷ್ಟಿದೆ. 
ಮುಂಬೈನಲ್ಲಿ ಪ್ರತಿ 10 ಗ್ರಾಂಗೆ  22K ಚಿನ್ನದ ದರ -  82,910ರೂ., 24K ಚಿನ್ನದ ದರ 90,450 ರೂ. ಆಗಿದೆ. 
ಹೈದರಾಬಾದ್‌ನಲ್ಲಿ  ಪ್ರತಿ 10 ಗ್ರಾಂಗೆ  22K ಚಿನ್ನದ ದರ -  82,910ರೂ., 24K ಚಿನ್ನದ ದರ 90,450 ರೂ. ನಷ್ಟಿದೆ. 
ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂಗೆ  22K ಚಿನ್ನದ ದರ -  82,910ರೂ., 24K ಚಿನ್ನದ ದರ 90,450 ರೂ. ಆಗಿದೆ. 

ಇದನ್ನೂ ಓದಿ- Unified Pension Scheme: ಕೇಂದ್ರ ಸರ್ಕಾರಿ ನೌಕರಿಗಾಗಿ ಮೋದಿ ಸರ್ಕಾರದ ಮಹತ್ವದ ಯೋಜನೆ, 10 ವರ್ಷ ಕೆಲಸ ಮಾಡಿದ್ರೆ ಎಷ್ಟು ಪಿಂಚಣಿ ಬರುತ್ತೆ ಗೊತ್ತಾ...

ಚಿನ್ನದ ದರ ಶೇ. 38ರಷ್ಟು ಕುಸಿತದ ನಿರೀಕ್ಷೆ: 
ದಾಖಲೆ ಬರೆಯುತ್ತಿರುವ ಚಿನ್ನದ ಬೆಲೆ ಮುಂಬರುವ ವರ್ಷಗಳಲ್ಲಿ ಶೇ. 38ರಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ಯುಎಸ್ ಮೂಲದ ಹಣಕಾಸು ಸೇವಾ ಸಂಸ್ಥೆಯೊಂದರಲ್ಲಿ ಮಾರುಕಟ್ಟೆ ತಜ್ಞರಾಗಿರುವ ಜಾನ್ ಮಿಲ್ಸ್ ಅಭಿಪ್ರಾಯಪಟ್ಟಿದ್ದಾರೆ. ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $3,000ಕ್ಕಿಂತ ಹೆಚ್ಚಾಗಿದ್ದು, ಇದು ಔನ್ಸ್‌ಗೆ $1,820ರಷ್ಟು ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News