ನೀವು ATMನಿಂದ ಮಾತ್ರವಲ್ಲದೆ UPIನಿಂದಲೂ PF ಹಣ ಪಡೆಯಬಹುದು; ಈ ಸೌಲಭ್ಯ ಯಾವಾಗ ಪ್ರಾರಂಭವಾಗಲಿದೆ?

EPFO: ಈ ವರ್ಷದ ಮೇ ಅಂತ್ಯ ಅಥವಾ ಜೂನ್ ವೇಳೆಗೆ ಇಪಿಎಫ್‌ಒ ಸದಸ್ಯರು ಯುಪಿಐ ಮತ್ತು ಎಟಿಎಂ ಮೂಲಕ ತಮ್ಮ ಪಿಎಫ್ ಖಾತೆಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿದೆ ಎಂದು ಸುಮಿತಾ ದಾವ್ರಾ ಹೇಳಿದ್ದಾರೆ.  

Written by - Puttaraj K Alur | Last Updated : Mar 26, 2025, 05:57 PM IST
  • EPFO ​​ಅಡಿಯಲ್ಲಿ ಬರುವ ಕೋಟ್ಯಂತರ ಉದ್ಯೋಗಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ
  • ATM ಮಾತ್ರವಲ್ಲದೆ UPI ಮೂಲಕವೂ PF ಹಣ ಹಿಂಪಡೆಯಲು ಸಾಧ್ಯವಾಗಲಿದೆ
  • ಮೇ ಅಥವಾ ಜೂನ್ ಅಂತ್ಯದ ವೇಳೆಗೆ ಈ ಸೌಲಭ್ಯ ದೊರೆಯುವ ಸಾಧ್ಯತೆ ಇದೆ
ನೀವು ATMನಿಂದ ಮಾತ್ರವಲ್ಲದೆ UPIನಿಂದಲೂ PF ಹಣ ಪಡೆಯಬಹುದು; ಈ ಸೌಲಭ್ಯ ಯಾವಾಗ ಪ್ರಾರಂಭವಾಗಲಿದೆ?

EPFO UPI ATM PF: EPFO ​​ಅಡಿಯಲ್ಲಿ ಬರುವ ಕೋಟ್ಯಂತರ ಉದ್ಯೋಗಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. EPFO ಸದಸ್ಯರು ತಮ್ಮ EPFO ​​ಖಾತೆಯಿಂದ ATM ಮೂಲಕ ಮಾತ್ರವಲ್ಲದೆ UPI ಮೂಲಕವೂ PF ಹಣ ಹಿಂಪಡೆಯಲು ಸಾಧ್ಯವಾಗಲಿದೆ. ದಕ್ಷತೆ ಸುಧಾರಿಸುವ ಮತ್ತು ವಹಿವಾಟಿನ ಸಮಯ ಕಡಿಮೆ ಮಾಡುವ ಗುರಿ ಹೊಂದಿರುವ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) Clean processingಗಾಗಿ ಯುಪಿಐಯನ್ನು ಪರಿಚಯಿಸಲಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಸುಮಿತಾ ದಾವ್ರಾ ಹೇಳಿದ್ದಾರೆ. ಭಾರತದಲ್ಲಿ ಚಿಲ್ಲರೆ ಪಾವತಿ ಮತ್ತು Settlement system ನಿರ್ವಹಿಸುವ ನಿಗಮವಾದ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI)ದ ಶಿಫಾರಸನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಅನುಮೋದಿಸಿದೆ. 

Add Zee News as a Preferred Source

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಬಂಪರ್‌ ಜಾಕ್‌ಪಾಟ್‌; ವೇತನದಲ್ಲಿ ಭಾರೀ ಹೆಚ್ಚಳ.. ಪಿಂಚಣಿಯಲ್ಲಿಯೂ ಭರ್ಜರಿ ಏರಿಕೆ!

ಯುಪಿಐ ಮತ್ತು ಎಟಿಎಂ ಮೂಲಕ ಹಣ ಹಿಂಪಡೆಯುವ ಸೌಲಭ್ಯ  

ಈ ವರ್ಷದ ಮೇ ಅಂತ್ಯ ಅಥವಾ ಜೂನ್ ವೇಳೆಗೆ ಇಪಿಎಫ್‌ಒ ಸದಸ್ಯರು ಯುಪಿಐ ಮತ್ತು ಎಟಿಎಂ ಮೂಲಕ ತಮ್ಮ ಪಿಎಫ್ ಖಾತೆಗಳಿಂದ ಹಣ ಹಿಂಪಡೆಯಲು ಸಾಧ್ಯವಾಗಲಿದೆ ಎಂದು ಸುಮಿತಾ ದಾವ್ರಾ ಹೇಳಿದ್ದಾರೆ. "ಮೇ ಅಥವಾ ಜೂನ್ ಅಂತ್ಯದ ವೇಳೆಗೆ ಸದಸ್ಯರು ತಮ್ಮ PF ಖಾತೆಯಲ್ಲಿ ಮಹತ್ವದ ಬದಲಾವಣೆಯನ್ನು ನೋಡಲಿದ್ದಾರೆ. ಪ್ರತಿಯೊಬ್ಬರೂ ತಮ್ಮ ಪಿಎಫ್ ಖಾತೆಯ ಬಾಕಿಯನ್ನು ನೇರವಾಗಿ ಯುಪಿಐನಲ್ಲಿಯೇ ಪರಿಶೀಲಿಸಲು ಸಾಧ್ಯವಾಗಲಿದೆ. ಇದರೊಂದಿಗೆ ತಕ್ಷಣವೇ 1 ಲಕ್ಷ ರೂ.ಗಳವರೆಗೆ ಹಣ ಹಿಂಪಡೆಯಲು ಮತ್ತು ವರ್ಗಾವಣೆಗಾಗಿ ತಮ್ಮ ಆದ್ಯತೆಯ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಲು ಸಾಧ್ಯವಾಗಲಿದೆ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ನಾನು ನಂದಿನಿ… ನಿಮ್ಮ ಮನೆ ಬಾಗಿಲಿಗೆ ಬರ್ತೀನಿ, ಇಡ್ಲಿ, ದೋಸೆ ಹಿಟ್ಟು ತರ್ತೀನಿ…

ಪಿಎಫ್ ಖಾತೆಯಿಂದ ಹಣ ಹಿಂಪಡೆಯುವುದು ಯುಪಿಐ ಬಳಸಿದಷ್ಟೇ ಸುಲಭ 

ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಸುಮಿತಾ ದಾವ್ರಾ ಪ್ರಕಾರ, ಅನಾರೋಗ್ಯ, ಮನೆ ನಿರ್ಮಾಣ, ಮಕ್ಕಳ ಶಿಕ್ಷಣ ಮತ್ತು ಮದುವೆಗೆ ಅಸ್ತಿತ್ವದಲ್ಲಿರುವ ನಿಯಮಗಳ ಅಡಿಯಲ್ಲಿ ಹಣ ಹಿಂಪಡೆಯುವ ಆಯ್ಕೆಗಳನ್ನು ಇದಕ್ಕೆ ಸೇರಿಸಲಾಗಿದೆ. ಹಣ ಹಿಂಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲು 120ಕ್ಕೂ ಹೆಚ್ಚು ಡೇಟಾಬೇಸ್‌ಗಳನ್ನು ಸಂಯೋಜಿಸಲಾಗಿದೆ. ಕ್ಲೈಮ್ ಪ್ರಕ್ರಿಯೆಗೆ ತೆಗೆದುಕೊಳ್ಳುವ ಸಮಯವನ್ನು ಈಗ ಕೇವಲ 3 ದಿನಗಳಿಗೆ ಇಳಿಸಲಾಗಿದೆ. ಈಗ ಶೇ.95ರಷ್ಟು ಕ್ಲೈಮ್‌ಗಳು ಸ್ವಯಂಚಾಲಿತವಾಗಿವೆ ಮತ್ತು ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸುವ ಯೋಜನೆಗಳಿವೆ ಅಂತಾ ತಿಳಿಸಿದ್ದಾರೆ. UPI ಭಾರತದಲ್ಲಿ ಪಾವತಿ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿರುವಂತೆಯೇ, ಈ ಹೊಸ ಸೌಲಭ್ಯದ ಮೂಲಕ EPFO ​​ಸದಸ್ಯರಿಗೆ PF ಹಣವನ್ನು ಹಿಂಪಡೆಯುವುದು ಸಹ UPI ಮಾಡುವಷ್ಟೇ ಸುಲಭವಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News