SBI Special FD Scheme: ಎಸ್‌ಬಿಐ ಈ ವಿಶೇಷ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಕೇವಲ 5 ದಿನಗಳು ಬಾಕಿ ಉಳಿದಿವೆ, ಸಿಗುತ್ತೆ ಶೇ.7.60ರಷ್ಟು ಬಡ್ಡಿದರದ ಲಾಭ!
SBI Special FD Scheme: `ಅಮೃತ್ ಕಲಶ` ಎಂದು ಕರೆಯಲ್ಪಡುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿಶೇಷ ನಿಶ್ಚಿತ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಕೊನೆಯ ದಿನಾಂಕ ಮಾರ್ಚ್ 31 ರಂದು ಮುಕ್ತಾಯಗೊಳ್ಳುತ್ತಿದೆ. ಈ ಯೋಜನೆಯಲ್ಲಿ, 400 ದಿನಗಳ ಅವಧಿಯಲ್ಲಿ 5 ಲಕ್ಷ ರೂಪಾಯಿಗಳ ಹೂಡಿಕೆಯ ಮೇಲೆ ಕೇವಲ 43000 ರೂಪಾಯಿಗಳ ಬಡ್ಡಿ ಲಭಿಸುತ್ತದೆ.
SBI Amrit Kalash Scheme: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರಂಭಿಸಿರುವ ವಿಶೇಷ FD ಯೋಜನೆಯಲ್ಲಿ ಹೂಡಿಕೆಗಾಗಿ ಅಂತಿಮ ಗಡುವು 31 ಮಾರ್ಚ್ 2023 ರಂದು ಕೊನೆಗೊಳ್ಳಲಿದೆ. ಈ ಯೋಜನೆಯಡಿ, ಹಿರಿಯ ನಾಗರಿಕರಿಗೆ 7.60 ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ಬ್ಯಾಂಕ್ ಈ ವಿಶೇಷ FD ಯೋಜನೆಯನ್ನು 15 ಫೆಬ್ರವರಿ 2023 ರಂದು ಪ್ರಾರಂಭಿಸಿದೆ. ಇದಕ್ಕೆ ಅಮೃತ ಕಲಶ ಯೋಜನೆ ಎಂದು ಹೆಸರಿಡಲಾಗಿದೆ. ಇದು 400 ದಿನಗಳ ಒಂದು ಸ್ಥಿರ ಅಥವಾ ಅವಧಿ ಠೇವಣಿ ಯೋಜನೆಯಾಗಿದೆ. ಈ ಯೋಜನೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳೋಣ.
ಈ FD 400 ದಿನಗಳ ಅವಧಿಯದ್ದಾಗಿದೆ
ಎಸ್‌ಬಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಅಮೃತ್ ಕಲಶ್ ಎಂದು ಕರೆಯಲ್ಪಡುವ ವಿಶೇಷ ಸ್ಥಿರ ಠೇವಣಿ ಯೋಜನೆಯು 400 ದಿನಗಳ ಅವಧಿಯದ್ದಾಗಿದೆ. ಇದರಲ್ಲಿ ಹೂಡಿಕೆ ಮಾಡುವ ಸಾಮಾನ್ಯ ವ್ಯಕ್ತಿಗಳಿಗೆ ಬಡ್ಡಿದರವು ಶೇಕಡಾ 7.10 ರಷ್ಟು ಇದ್ದರೆ, ಹಿರಿಯ ನಾಗರಿಕರಿಗೆ ಬಡ್ಡಿದರವು ಶೇಕಡಾ 7.60 ರಷ್ಟಿದೆ. ಈ ಬಡ್ಡಿ ದರವು ಬ್ಯಾಂಕಿನ ವಿಶೇಷ ವಿ-ಕೇರ್ ಯೋಜನೆಗಿಂತ ಹೆಚ್ಚಾಗಿದೆ. ಎಸ್‌ಬಿಐ ವಿ-ಕೇರ್ ಫಿಕ್ಸೆಡ್ ಡೆಪಾಸಿಟ್‌ನ ಅವಧಿಯು 5-10 ವರ್ಷಗಲದ್ದಾಗಿದೆ. ಇದರಲ್ಲಿ, ವೈಯಕ್ತಿಕ ಬಡ್ಡಿದರವು 6.50 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಇದು 7.50 ರಷ್ಟಿದೆ.
ಇದನ್ನೂ ಓದಿ-New Wage Rates 2023-24: ದೇಶಾದ್ಯಂತ ಇರುವ ಕೋಟ್ಯಾಂತರ ಕೂಲಿ ಕಾರ್ಮಿಕರಿಗೆ ಒಂದು ಭಾರಿ ನೆಮ್ಮದಿಯ ಸುದ್ದಿ!
43 ಸಾವಿರ ರೂಪಾಯಿ ಬಡ್ಡಿ ಲಾಭ ಸಿಗಲಿದೆ
ಎಸ್‌ಬಿಐ ಎಫ್‌ಡಿ ಕ್ಯಾಲ್ಕುಲೇಟರ್ ಪ್ರಕಾರ, ಹಿರಿಯ ನಾಗರಿಕರು ಅಮೃತ್ ಕಲಶ ಯೋಜನೆಯಲ್ಲಿ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, 400 ದಿನಗಳ ನಂತರ ಅವರು ಒಟ್ಟು 5 ಲಕ್ಷ 43 ಸಾವಿರ ಆದಾಯ ಪಡೆಯುತ್ತಾರೆ. ಅಂದರೆ, ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಅವಧಿಗೆ, ಹೂಡಿಕೆದಾರರಿಗೆ ಕೇವಲ 43 ಸಾವಿರ ರೂಪಾಯಿ ಬಡ್ಡಿ ಸಿಗುತ್ತದೆ. ತ್ರೈಮಾಸಿಕ ಸಂಯೋಜನೆಯ ಆಧಾರದ ಮೇಲೆ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-ದೇಶದ ಕೋಟ್ಯಾಂತರ ಪಿಂಚಣಿದಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ನಿರ್ಮಲಾ ಸೀತಾರಾಮನ್!
ಮಾರ್ಚ್ 31ರವರೆಗೆ ಈ ಸೌಲಭ್ಯ ತೆರೆದುಕೊಂಡಿದೆ
ಸ್ಟೇಟ್ ಬ್ಯಾಂಕ್ ಕೊನೆಯ ಬಾರಿಗೆ ಫೆಬ್ರವರಿ 15 ರಂದು ಸಾಮಾನ್ಯ ಸ್ಥಿರ ಠೇವಣಿ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಬ್ಯಾಂಕ್ ಸಾಮಾನ್ಯ ಜನರಿಗೆ ಕನಿಷ್ಠ 3 ಪ್ರತಿಶತ ಮತ್ತು ಗರಿಷ್ಠ 7 ಪ್ರತಿಶತ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರ ವಿಷಯಕ್ಕೆ ಬಂದಾಗ ಇದು ಕನಿಷ್ಠ ಬಡ್ಡಿ ದರ ಶೇ.3.50 ಮತ್ತು ಗರಿಷ್ಠ ಬಡ್ಡಿ ದರ ಶೇ.7.50ರಷ್ಟಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.