Amazonನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಹು ದೊಡ್ಡ ಅವಕಾಶ !ಕಂಪನಿಯಲ್ಲಿ ಸೃಷ್ಟಿಯಾಗಿದೆ 20 ಲಕ್ಷ ಹುದ್ದೆ

2025ರ ವೇಳೆಗೆ ಭಾರತದಲ್ಲಿ 20 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಅಮೆಜಾನ್ ಸಮ್ಮೇಳನದಲ್ಲಿ ಹೇಳಿದೆ. ಕಂಪನಿಯು ತನ್ನ ವ್ಯಾಪಾರವನ್ನು ಹೆಚ್ಚಿಸಲು ಮತ್ತು ವಿತರಣಾ ಸೇವೆಯನ್ನು ಸುಧಾರಿಸಿವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ. 

Written by - Ranjitha R K | Last Updated : Dec 11, 2024, 12:19 PM IST
  • ಅಮೆಜಾನ್ ಇಂಡಿಯಾ ಹೊಸ ಸೇವೆಯನ್ನು ಪ್ರಾರಂಭಿಸುವ ಬಗ್ಗೆ ಪ್ರಕಟಿಸಿದೆ.
  • 15 ನಿಮಿಷಗಳಲ್ಲಿ ಮನೆಯಲ್ಲಿ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಲು ಸಾಧ್ಯ
  • ಕೆಲವು ನಗರಗಳಲ್ಲಿ ಮೊದಲ ಹಂತದಲ್ಲಿಯೇ ಸೇವೆ ಆರಂಭ
Amazonನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಹು ದೊಡ್ಡ ಅವಕಾಶ !ಕಂಪನಿಯಲ್ಲಿ ಸೃಷ್ಟಿಯಾಗಿದೆ 20 ಲಕ್ಷ ಹುದ್ದೆ  title=

15-minute delivery Service : ಅಮೆಜಾನ್ ಇಂಡಿಯಾ ಹೊಸ ಸೇವೆಯನ್ನು ಪ್ರಾರಂಭಿಸುವ ಬಗ್ಗೆ ಪ್ರಕಟಿಸಿದೆ. ಈ ಸೇವೆಯ ಅಡಿಯಲ್ಲಿ, ಗ್ರಾಹಕರು ಕೇವಲ 15 ನಿಮಿಷಗಳಲ್ಲಿ ಮನೆಯಲ್ಲಿ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಲು ಸಾಧ್ಯವಾಗುತ್ತದೆ. ಅಮೆಜಾನ್ ಇಂಡಿಯಾ ಕಂಟ್ರಿ ಮ್ಯಾನೇಜರ್ ಸಮೀರ್ ಕುಮಾರ್ ನವದೆಹಲಿಯಲ್ಲಿ ನಡೆದ ಸಮ್ಮೇಳನದಲ್ಲಿ ಈ ಘೋಷಣೆ ಮಾಡಿದ್ದಾರೆ. 

ಕೆಲವು ನಗರಗಳಲ್ಲಿ ಮೊದಲ ಹಂತದಲ್ಲಿಯೇ ಸೇವೆ ಆರಂಭ : 
ಮೊದಲಿಗೆ, Tez ಅನ್ನು ಆಯ್ದ ಸ್ಥಳಗಳಲ್ಲಿ ಪ್ರಾರಂಭಿಸಲಾಗುವುದು. ನಂತರ ಈ ಸೇವೆಯನ್ನು ಹೆಚ್ಚಿನ ಸ್ಥಳಗಳಿಗೆ ವಿಸ್ತರಿಸಲಾಗುವುದು. Blinkit ಮತ್ತು Zepto ನಂತಹ ಕಂಪನಿಗಳಿಂದ Amazon ಮೇಲೆ ಒತ್ತಡ ಹೆಚ್ಚಿದೆ. ಈ ನಿಟ್ಟಿನಲ್ಲಿ ಕಂಪನಿಯ 15 ನಿಮಿಷಗಳ ಡೆಲಿವೆರಿ ಸೇವೆ ಮೂಲಕ ಮತ್ತೆ  ಈ ಫೀಲ್ಡ್ ನಲ್ಲಿ ಪಾರುಪಥ್ಯ ಸಾಧಿಸಲು ಸಹಾಯವಾಗಲಿದೆ ಎನ್ನುವುದು ಅಮೆಜಾನ್ ಆಶಯ. 

ಇದನ್ನೂ ಓದಿ : ಸ್ನಾನ ಮಾಡಿಸುವುದಕ್ಕೂ ಬಂದಿದೆ AI ಚಾಲಿತ ಮೆಷಿನ್ !ಇದರೊಳಗೆ ಕೂರುವುದಷ್ಟೇ ನಿಮ್ಮ ಕೆಲಸ !

ಮುಂಬರುವ ವಾರಗಳಲ್ಲಿ 15 ನಿಮಿಷಗಳಲ್ಲಿ ಬಳಕೆದಾರರಿಗೆ ಸರಕುಗಳು ಲಭ್ಯವಾಗುವಂತೆ ಮಾಡುವ ಅಗತ್ಯ ವಸ್ತುಗಳ ಡೆಲಿವೆರಿ ಸೇವೆಯನ್ನು ಆರಂಭಿಸುವುದಾಗಿ ಸಮೀರ್ ಕುಮಾರ್ ತಿಳಿಸಿದ್ದಾರೆ. Amazon Tez ಹೆಸರಿನ ಈ ಸೇವೆ ಈ ತಿಂಗಳಿನಿಂದಲೇ ಪ್ರಾರಂಭವಾಗಲಿದೆ. 

20 ಲಕ್ಷ ಜನರಿಗೆ ಉದ್ಯೋಗವಕಾಶ: 
2025ರ ವೇಳೆಗೆ ಭಾರತದಲ್ಲಿ 20 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಅಮೆಜಾನ್ ಸಮ್ಮೇಳನದಲ್ಲಿ ಹೇಳಿದೆ. ಕಂಪನಿಯು ತನ್ನ ವ್ಯಾಪಾರವನ್ನು ಹೆಚ್ಚಿಸಲು ಮತ್ತು ವಿತರಣಾ ಸೇವೆಯನ್ನು ಸುಧಾರಿಸಿವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

2020 ರಲ್ಲಿ ಭಾರತದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದ ನಂತರ, ಕಂಪನಿಯು ಸಾಕಷ್ಟು ಕೆಲಸ ಮಾಡಿದೆ ಎಂದು Amazon ಹೇಳಿದೆ. ಇ-ಕಾಮರ್ಸ್, ವಿತರಣೆ, ಉತ್ಪಾದನೆ ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಸುಮಾರು 14 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಕಂಪನಿ ಹೇಳಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News