15-minute delivery Service : ಅಮೆಜಾನ್ ಇಂಡಿಯಾ ಹೊಸ ಸೇವೆಯನ್ನು ಪ್ರಾರಂಭಿಸುವ ಬಗ್ಗೆ ಪ್ರಕಟಿಸಿದೆ. ಈ ಸೇವೆಯ ಅಡಿಯಲ್ಲಿ, ಗ್ರಾಹಕರು ಕೇವಲ 15 ನಿಮಿಷಗಳಲ್ಲಿ ಮನೆಯಲ್ಲಿ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಲು ಸಾಧ್ಯವಾಗುತ್ತದೆ. ಅಮೆಜಾನ್ ಇಂಡಿಯಾ ಕಂಟ್ರಿ ಮ್ಯಾನೇಜರ್ ಸಮೀರ್ ಕುಮಾರ್ ನವದೆಹಲಿಯಲ್ಲಿ ನಡೆದ ಸಮ್ಮೇಳನದಲ್ಲಿ ಈ ಘೋಷಣೆ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಕೆಲವು ನಗರಗಳಲ್ಲಿ ಮೊದಲ ಹಂತದಲ್ಲಿಯೇ ಸೇವೆ ಆರಂಭ : 
ಮೊದಲಿಗೆ, Tez ಅನ್ನು ಆಯ್ದ ಸ್ಥಳಗಳಲ್ಲಿ ಪ್ರಾರಂಭಿಸಲಾಗುವುದು. ನಂತರ ಈ ಸೇವೆಯನ್ನು ಹೆಚ್ಚಿನ ಸ್ಥಳಗಳಿಗೆ ವಿಸ್ತರಿಸಲಾಗುವುದು. Blinkit ಮತ್ತು Zepto ನಂತಹ ಕಂಪನಿಗಳಿಂದ Amazon ಮೇಲೆ ಒತ್ತಡ ಹೆಚ್ಚಿದೆ. ಈ ನಿಟ್ಟಿನಲ್ಲಿ ಕಂಪನಿಯ 15 ನಿಮಿಷಗಳ ಡೆಲಿವೆರಿ ಸೇವೆ ಮೂಲಕ ಮತ್ತೆ  ಈ ಫೀಲ್ಡ್ ನಲ್ಲಿ ಪಾರುಪಥ್ಯ ಸಾಧಿಸಲು ಸಹಾಯವಾಗಲಿದೆ ಎನ್ನುವುದು ಅಮೆಜಾನ್ ಆಶಯ. 


ಇದನ್ನೂ ಓದಿ : ಸ್ನಾನ ಮಾಡಿಸುವುದಕ್ಕೂ ಬಂದಿದೆ AI ಚಾಲಿತ ಮೆಷಿನ್ !ಇದರೊಳಗೆ ಕೂರುವುದಷ್ಟೇ ನಿಮ್ಮ ಕೆಲಸ !


ಮುಂಬರುವ ವಾರಗಳಲ್ಲಿ 15 ನಿಮಿಷಗಳಲ್ಲಿ ಬಳಕೆದಾರರಿಗೆ ಸರಕುಗಳು ಲಭ್ಯವಾಗುವಂತೆ ಮಾಡುವ ಅಗತ್ಯ ವಸ್ತುಗಳ ಡೆಲಿವೆರಿ ಸೇವೆಯನ್ನು ಆರಂಭಿಸುವುದಾಗಿ ಸಮೀರ್ ಕುಮಾರ್ ತಿಳಿಸಿದ್ದಾರೆ. Amazon Tez ಹೆಸರಿನ ಈ ಸೇವೆ ಈ ತಿಂಗಳಿನಿಂದಲೇ ಪ್ರಾರಂಭವಾಗಲಿದೆ. 


20 ಲಕ್ಷ ಜನರಿಗೆ ಉದ್ಯೋಗವಕಾಶ: 
2025ರ ವೇಳೆಗೆ ಭಾರತದಲ್ಲಿ 20 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಅಮೆಜಾನ್ ಸಮ್ಮೇಳನದಲ್ಲಿ ಹೇಳಿದೆ. ಕಂಪನಿಯು ತನ್ನ ವ್ಯಾಪಾರವನ್ನು ಹೆಚ್ಚಿಸಲು ಮತ್ತು ವಿತರಣಾ ಸೇವೆಯನ್ನು ಸುಧಾರಿಸಿವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


2020 ರಲ್ಲಿ ಭಾರತದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದ ನಂತರ, ಕಂಪನಿಯು ಸಾಕಷ್ಟು ಕೆಲಸ ಮಾಡಿದೆ ಎಂದು Amazon ಹೇಳಿದೆ. ಇ-ಕಾಮರ್ಸ್, ವಿತರಣೆ, ಉತ್ಪಾದನೆ ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಸುಮಾರು 14 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಕಂಪನಿ ಹೇಳಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.