ಕೇಂದ್ರ ಸರ್ಕಾರದ ಪಿಎಂ ಮಿನಿಸ್ಟರ್ ಇಂಟರ್ನ್‍ಶಿಪ್ ಯೋಜನೆಗೆ ಅರ್ಜಿ ಆಹ್ವಾನ..! ಮಾಸಿಕ 5000 ರೂ. ಶಿಷ್ಯವೇತನ

ಇಂಟರ್ನ್‌ಶಿಪ್ ಅವಧಿ 12 ತಿಂಗಳುಗಳಾಗಿದ್ದು, ಮಾಸಿಕ ರೂ. 5000 ಶಿಷ್ಯವೇತನ ನೀಡಲಾಗುವುದು. ಒಬ್ಬ ಅಭ್ಯರ್ಥಿಯು ಕನಿಷ್ಠ ಮೂರು ಇಂಟರ್ನ್‌ಶಿಪ್‌ಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಆಯ್ಕೆಯಾದ ಕಂಪೆನಿಗಳಲ್ಲಿ ತರಬೇತಿ ಪಡೆಯಬೇಕು. 

Written by - Manjunath Naragund | Last Updated : Mar 30, 2025, 09:41 PM IST
  • ಅರ್ಹತೆಗೆ ಸಂಬಂಧಿಸಿದಂತೆ, ಅಭ್ಯರ್ಥಿಯ ವಯಸ್ಸು 21 ರಿಂದ 24 ವರ್ಷಗಳ ನಡುವೆ ಇರಬೇಕು
  • ಶೈಕ್ಷಣಿಕ ಅರ್ಹತೆಯಾಗಿ ಪದವಿ, ಡಿಪ್ಲೊಮಾ, ಐಟಿಐ, 10ನೇ ತರಗತಿ ಅಥವಾ ಪಿಯುಸಿ ಪೂರ್ಣಗೊಳಿಸಿರಬೇಕು
  • ಕುಟುಂಬದ ವಾರ್ಷಿಕ ಆದಾಯ ರೂ. 8 ಲಕ್ಷಕ್ಕಿಂತ ಮೀರಿರಬಾರದು
ಕೇಂದ್ರ ಸರ್ಕಾರದ ಪಿಎಂ ಮಿನಿಸ್ಟರ್ ಇಂಟರ್ನ್‍ಶಿಪ್ ಯೋಜನೆಗೆ ಅರ್ಜಿ ಆಹ್ವಾನ..! ಮಾಸಿಕ 5000 ರೂ. ಶಿಷ್ಯವೇತನ

ಬೆಂಗಳೂರು: ಕೇಂದ್ರ ಸರ್ಕಾರದ ಪಿಎಂ ಮಿನಿಸ್ಟರ್ಸ್ ಇಂಟರ್ನ್‌ಶಿಪ್ ಯೋಜನೆಯು ಯುವಕ-ಯುವತಿಯರಿಗೆ ನವೀನ ಕೌಶಲ್ಯ ವೃದ್ಧಿಗೆ ವೇದಿಕೆ ಒದಗಿಸುತ್ತದೆ. ಈ ಯೋಜನೆಯ ಮೂಲಕ 5 ವರ್ಷಗಳಲ್ಲಿ 300ಕ್ಕೂ ಅಧಿಕ ಉನ್ನತ ಕಂಪೆನಿಗಳಲ್ಲಿ ಇಂಟರ್ನ್‌ಶಿಪ್ ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

Add Zee News as a Preferred Source

ಇಂಟರ್ನ್‌ಶಿಪ್ ಅವಧಿ 12 ತಿಂಗಳುಗಳಾಗಿದ್ದು, ಮಾಸಿಕ ರೂ. 5000 ಶಿಷ್ಯವೇತನ ನೀಡಲಾಗುವುದು. ಒಬ್ಬ ಅಭ್ಯರ್ಥಿಯು ಕನಿಷ್ಠ ಮೂರು ಇಂಟರ್ನ್‌ಶಿಪ್‌ಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಆಯ್ಕೆಯಾದ ಕಂಪೆನಿಗಳಲ್ಲಿ ತರಬೇತಿ ಪಡೆಯಬೇಕು. 

ಇದನ್ನೂ ಓದಿ: ಜಯದೇವ ಆಸ್ಪತ್ರೆ ಸಿಬ್ಬಂದಿಗಳ ರಕ್ಷಣೆಗೆ ರೆಡಿ ಆಯ್ತು ಆಪ್ :ಸೇಫ್ಟಿ ಆಪ್ ಕಂಡುಕೊಂಡ ಸರ್ಕಾರಿ ಸಾಮ್ಯದ ಮೊದಲ ಆಸ್ಪತ್ರೆ

ಅರ್ಹತೆಗೆ ಸಂಬಂಧಿಸಿದಂತೆ, ಅಭ್ಯರ್ಥಿಯ ವಯಸ್ಸು 21 ರಿಂದ 24 ವರ್ಷಗಳ ನಡುವೆ ಇರಬೇಕು. ಶೈಕ್ಷಣಿಕ ಅರ್ಹತೆಯಾಗಿ ಪದವಿ, ಡಿಪ್ಲೊಮಾ, ಐಟಿಐ, 10ನೇ ತರಗತಿ ಅಥವಾ ಪಿಯುಸಿ ಪೂರ್ಣಗೊಳಿಸಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ. 8 ಲಕ್ಷಕ್ಕಿಂತ ಮೀರಿರಬಾರದು ಮತ್ತು ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿರಬಾರದು. ಈ ಯೋಜನೆಯ ತರಬೇತಿ ಅವಧಿ 12 ತಿಂಗಳುಗಳಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಕಂಪೆನಿಗಳು ನಿಗದಿಪಡಿಸಿದ ಸ್ಥಳಗಳಲ್ಲಿ ತರಬೇತಿ ಪಡೆಯಬೇಕಾಗುತ್ತದೆ. 

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ವಿಶೇಷವಾಗಿ ಯುಗಾದಿ ಆಚರಣೆ: ದೇವಾಲಯಗಳಲ್ಲಿ ಪೂಜೆ

ಈ ಯೋಜನೆಯು ಯುವಜನರಿಗೆ ಉದ್ಯೋಗ ಕೌಶಲ್ಯಗಳನ್ನು ಹೆಚ್ಚಿಸಿ, ಉತ್ತಮ ವೃತ್ತಿಜೀವನದ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಆಸಕ್ತ ಅಭ್ಯರ್ಥಿಗಳು www.pminternship.mca.gov.in ಜಾಲತಾಣದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಯೋಜನೆಯು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಯುವಕರಿಗೆ ಸಹಾಯವಾಗಲಿದೆ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

 

About the Author

Trending News