ಈ ಕಾಲೇಜಿನಲ್ಲಿ MBBS ಫೀಸ್ ಕೇವಲ 70,000 ರೂ.!ಬಡ ವಿದ್ಯಾರ್ಥಿಗಳ ಡಾಕ್ಟರ್ ಆಗುವ ಕನಸು ನನಸಾಗಿಸುವ ಸಂಸ್ಥೆ!

Lowest MBBS Fees :ಅಗ್ಗದ ಬೆಲೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡುವ ಸಂಸ್ಥೆ ಒಂದಿದೆ. ಇಲ್ಲಿ  MBBS ಫೀಸ್ ಕೇವಲ 60 ಸಾವಿರ ರೂಪಾಯಿ .

Written by - Ranjitha R K | Last Updated : Mar 17, 2025, 06:27 PM IST
  • NEET UG ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಎಂಟ್ರಿ ಗೇಟ್.
  • ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯುತ್ತಾರೆ.
  • ವೈದ್ಯಕೀಯ ಅಧ್ಯಯನ ಮಾಡಬೇಕೆಂದರೆ ದುಬಾರಿ ಶುಲ್ಕ ತೆರಬೇಕು.
ಈ ಕಾಲೇಜಿನಲ್ಲಿ MBBS ಫೀಸ್ ಕೇವಲ 70,000 ರೂ.!ಬಡ ವಿದ್ಯಾರ್ಥಿಗಳ ಡಾಕ್ಟರ್ ಆಗುವ ಕನಸು ನನಸಾಗಿಸುವ ಸಂಸ್ಥೆ!

Lowest MBBS Fees : NEET UG ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಎಂಟ್ರಿ ಗೇಟ್.  ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಉದ್ದೇಶದಿಂದ ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯುತ್ತಾರೆ. ವೈದ್ಯಕೀಯ ಅಧ್ಯಯನ ಮಾಡಬೇಕೆಂದರೆ ದುಬಾರಿ ಶುಲ್ಕ ತೆರಬೇಕು. ಖಾಸಗಿ ಕಾಲೇಜುಗಳ ಶುಲ್ಕಗಳು ತುಂಬಾ ಹೆಚ್ಚಾಗಿದ್ದು, ಸಾಮಾನ್ಯ ಜನರು ಅತ್ತ ಮುಖ ಮಾಡುವುದು ಕೂಡಾ ಅಸಾಧ್ಯ. ಆದರೆ ಅಗ್ಗದ ಬೆಲೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡುವ ಸಂಸ್ಥೆ ಒಂದಿದೆ. ಇಲ್ಲಿ  MBBS ಫೀಸ್ ಕೇವಲ 60 ಸಾವಿರ ರೂಪಾಯಿ .

Add Zee News as a Preferred Source

ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು (AFMC) :
1948ರಲ್ಲಿ ಪ್ರಾರಂಭವಾದ ಈ ಕಾಲೇಜು, ದೇಶದ ಸಶಸ್ತ್ರ ಪಡೆಗಳಿಗೆ ಹೆಚ್ಚಿನ ವೈದ್ಯಕೀಯ ಸಿಬ್ಬಂದಿಯನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ. ಸರ್ಕಾರಿ ಸಂಸ್ಥೆಯಾಗಿರುವುದರಿಂದ ಇಲ್ಲಿ ಎಂಬಿಬಿಎಸ್ ಶುಲ್ಕ ಕಡಿಮೆ. ಇಲ್ಲಿ ಎಂಬಿಬಿಎಸ್ ಶುಲ್ಕ ವಾರ್ಷಿಕ 60,000 ರಿಂದ 70,000 ರೂ.ಗಳವರೆಗೆ ಮಾತ್ರ. ಇದು ಪುಣೆ ಕಂಟೋನ್ಮೆಂಟ್‌ನಲ್ಲಿದೆ. ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು ಸಂಪೂರ್ಣ ವಸತಿ ಕ್ಯಾಂಪಸ್ . NIRF 2024 ರ ವೈದ್ಯಕೀಯ ಕಾಲೇಜು 30ನೇ ಶ್ರೇಯಾಂಕದೊಂದಿಗೆ,  ಭಾರತದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉನ್ನತ ಆಯ್ಕೆಯಾಗಿದೆ. ಎಂಡಿ ಮತ್ತು ಎಂಎಸ್‌ನಂತಹ ಪಿಜಿ ಕಾರ್ಯಕ್ರಮಗಳಿಗೆ ಶುಲ್ಕಗಳು ಸಾಮಾನ್ಯವಾಗಿ ಹೆಚ್ಚಿರುತ್ತವೆ.

ಇದನ್ನೂ ಓದಿ : Computer Scienceನಲ್ಲಿ ಎಂಜಿನಿಯರಿಂಗ್ ಮಾಡಬೇಕಾದರೆ ಇವೇ ನೋಡಿ ದೇಶದ ಟಾಪ್ ಎಂಜಿನಿಯರಿಂಗ್ ಕಾಲೇಜುಗಳು !ಇಲ್ಲಿ ಎಂಟ್ರಿ ಸಿಕ್ಕರೆ ಸಾಕು ಲೈಫ್ ಸೆಟಲ್

AFMC ಪುಣೆಯಲ್ಲಿ ಜನರಲ್/ಇಡಬ್ಲ್ಯೂಎಸ್ ವಿಭಾಗದ NEET UG 2024 ರ ಕಟ್-ಆಫ್ ಶ್ರೇಣಿ 720 ಮತ್ತು 164 ರ ನಡುವೆ ಇತ್ತು.ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು ಪುಣೆಯ ವಾನೋವ್ರಿಯಲ್ಲಿದೆ. ಕಾಲೇಜಿನಿಂದ ಯಾವುದೇ ಮಾಹಿತಿ ಬೇಕಾದರೆ, 020-26333572, 020-26334209 ಈ ಸಂಖ್ಯೆಗಳಿಗೆ ಕರೆ ಮಾಡಬಹುದು ಅಥವಾ www.afmc.nic.in ಗೆ ಭೇಟಿ ನೀಡಬಹುದು.

ಇದಲ್ಲದೆ,  ಉತ್ತಮ ಶ್ರೇಯಾಂಕ ಹೊಂದಿರುವ ಇನ್ನೊಂದು ಕಾಲೇಜು ಇದೆ. ಆದ್ರೆ ಇಲ್ಲಿ ಶುಲ್ಕ ಕಡಿಮೆಯೇನಿಲ್ಲ. ಅದು ದತ್ತ ಮೇಘೆ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ. ದತ್ತ ಮೇಘೆ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು ಹಿಂದೆ ದತ್ತ ಮೇಘೆ ವೈದ್ಯಕೀಯ ವಿಜ್ಞಾನ ಸಂಸ್ಥೆ (DMIMS) ಎಂದು ಕರೆಯಲಾಗುತ್ತಿತ್ತು. ಈ ಡೀಮ್ಡ್-ಟು-ಬಿ ಯುನಿವರ್ಸಿಟಿ ಎರಡು ವೈದ್ಯಕೀಯ ಕಾಲೇಜುಗಳನ್ನು ಹೊಂದಿದೆ.ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು, ವಾರ್ಧಾ ಮತ್ತು ದತ್ತ ಮೇಘೆ ವೈದ್ಯಕೀಯ ಕಾಲೇಜು ಆಫ್ ಕ್ಯಾಂಪಸ್, ವನಡೋಂಗ್ರಿ, ನಾಗ್ಪುರ.

ಇದನ್ನೂ ಓದಿ : Job Updates: ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಅಹ್ವಾನ

NIRF 2024 ರ ಪ್ರಕಾರ, ಇದು ಒಟ್ಟಾರೆ ವಿಭಾಗದಲ್ಲಿ 71 ನೇ ಶ್ರೇಣಿಯನ್ನು ಹೊಂದಿದೆ. ಇದು ವಿಶ್ವವಿದ್ಯಾಲಯ ವಿಭಾಗದಲ್ಲಿ 42 ನೇ ಸ್ಥಾನದಲ್ಲಿದೆ ಮತ್ತು ದಂತ ಕಾಲೇಜುಗಳ ವಿಭಾಗದಲ್ಲಿ 24 ನೇ ಸ್ಥಾನದಲ್ಲಿದೆ. ಶುಲ್ಕದ ಬಗ್ಗೆ ಹೇಳುವುದಾದರೆ, ಇಲ್ಲಿ MBBS ಶುಲ್ಕ ವಾರ್ಷಿಕ 20,75,000 ರೂ. NEET UG ಕಟ್-ಆಫ್ ನೋಡುವುದಾದರೆ ದತ್ತ ಮೇಘೆ ಸಂಸ್ಥೆಯ NEET UG 2024 ರ ಕಟ್-ಆಫ್ ಅನ್ನು ಸಾಮಾನ್ಯ AI ವಿಭಾಗದಲ್ಲಿ 4ನೇ ಸುತ್ತಿನ ಸೀಟು ಹಂಚಿಕೆಯಲ್ಲಿ 1,05,591 ಕ್ಕೆ ನಿಗದಿಪಡಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News