)
SBI Specialist Officers Recruitment 2025: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶದಾದ್ಯಂತ ವಿವಿಧ ಶಾಖೆಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನ ಆಹ್ವಾನಿಸುವ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯಡಿ ಒಟ್ಟು 10 ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 28ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಹುದ್ದೆಗಳ ವಿವರಗಳು
* ಮ್ಯಾನೇಜರ್ ಹುದ್ದೆಗಳ ಸಂಖ್ಯೆ: 6
* ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳ ಸಂಖ್ಯೆ: 3
* ಸಹಾಯಕ ಜನರಲ್ ಮ್ಯಾನೇಜರ್ ಹುದ್ದೆಗಳ ಸಂಖ್ಯೆ: 1
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಪಿಜಿ, ಎಂಬಿಎ, ಪಿಜಿಡಿಬಿಎಂ ಉತ್ತೀರ್ಣರಾಗಿರಬೇಕು. ಅಧಿಸೂಚನೆಯಲ್ಲಿ ಸೂಚಿಸಿದಂತೆ ಅವರು ಸಂಬಂಧಿತ ಕೆಲಸದ ಅನುಭವ ಹೊಂದಿರಬೇಕು. ಅಭ್ಯರ್ಥಿಗಳ ವಯೋಮಿತಿ ಆಗಸ್ಟ್ 8, 2025 ರಂತೆ ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ 30 ವರ್ಷಗಳು, ಸಹಾಯಕ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ 35 ರಿಂದ 45 ವರ್ಷಗಳು ಮತ್ತು ಮ್ಯಾನೇಜರ್ ಹುದ್ದೆಗಳಿಗೆ 24 ರಿಂದ 36 ವರ್ಷಗಳು ಆಗಿರಬೇಕು. ಈ ಅರ್ಹತೆಗಳನ್ನ ಹೊಂದಿರುವವರು ಕೊನೆಯ ದಿನಾಂಕದೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು
ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ತಲಾ 750 ರೂ. ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. SC/ST, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಅಂತಿಮ ಆಯ್ಕೆಯು ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಕೇವಲ ಸಂದರ್ಶನವನ್ನ ಆಧರಿಸಿರುತ್ತದೆ. ಆಯ್ಕೆಯಾದವರಿಗೆ ತಿಂಗಳಿಗೆ 64,820 ರೂ.ನಿಂದ 1,35,020 ರೂ.ವರೆಗೆ ವೇತನ ನೀಡಲಾಗುತ್ತದೆ.