)
kcet 2026 offline document verification: ಸಿಇಟಿ 2026 ಫಲಿತಾಂಶ ಇನ್ನೇನೂ ಕೆಲವೇ ದಿನ ಗಳಲ್ಲಿ ಪ್ರಕಟವಾಗಲಿದೆ. ಅರ್ಜಿಯಲ್ಲಿ ಅರ್ಹತಾ ಕಂಡಿಕೆ ಬಿ, ಸಿ, ಡಿ, ಇ, ಎಫ್, ಜಿ, ಹೆಚ್, ಐ, ಜೆ, ಕೆ, ಎಲ್, ಎಂ, ಎನ್ ಮತ್ತು ಒ ಗಳನ್ನು ಕ್ಲೇಮ್ ಮಾಡಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಫ್ಲೈನ್ ಮೂಲಕ ದಾಖಲೆಗಳ ಪರಿಶೀಲನೆ ಮಾಡುತ್ತದೆ. ಇದಕ್ಕಾಗಿ ಪ್ರತ್ಯೇಕ ವೇಳಾಪಟ್ಟಿಯನ್ನು ಸಹ ಪ್ರಾಧಿಕಾರ ಬಿಡುಗಡೆ ಮಾಡಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿ, 18ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು ಇಲ್ಲಿ ದಾಖಲೆಗಳ ಪರಿಶೀಲನೆಗೆ ಅಭ್ಯರ್ಥಿಯು ಖುದ್ದಾಗಿ ಹಾಜರಾಗಬೇಕು. ಆಫ್ಲೈನ್ ದಾಖಲಾತಿ ಪರಿಶೀಲನೆಯನ್ನು ಪ್ರಾಧಿಕಾರ ರ್ಯಾಂಕ್ ಪ್ರಕಾರ ನಡೆಸುತ್ತದೆ. ದಿನಕ್ಕೆ 20,000 ಕ್ಕಿಂತ ಹೆಚ್ಚಿನ ಅಭ್ಯರ್ಥಿಗಳಿಗೆ ರ್ಯಾಂಕ್ ಆಧಾರದ ಮೇಲೆ ದಾಖಲಾತಿ ಪರಿಶೀಲನೆಯನ್ನು ನಡೆಸಲಾಗುತ್ತದೆ.
ಸಿಇಟಿ 2026 ರ ಪ್ರವೇಶ ಪತ್ರ, ಅಂತಿಮವಾಗಿ ಅರ್ಜಿ ಪ್ರಿಂಟ್ ಮಾಡಿದ ಪ್ರತಿ, 10ನೇ ತರಗತಿ ಮತ್ತು 12ನೇ ತರಗತಿ ಅಂಕಪಟ್ಟಿ ಮತ್ತು ವಿವಿಧ ವ್ಯಾಸಂಗ ಪ್ರಮಾಣ ಪತ್ರ ಸೇರಿದಂತೆ ಅಭ್ಯರ್ಥಿಗಳು ತಮ್ಮ ಅರ್ಹತಾ ಕಂಡಿಕೆಗೆ ಅನುಸಾರವಾಗಿ ಅವಶ್ಯವಿರುವ ಎಲ್ಲಾ ಮೂಲ ದಾಖಲೆ ಗಳನ್ನು ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿ ಗಳನ್ನು ದಾಖಲಾತಿ ಪರಿಶೀಲನೆಗೆ ಸಲ್ಲಿಸ ಬೇಕಿರುತ್ತದೆ.
ಸಿಇಟಿ 2026 ಆಫ್ಲೈನ್ ದಾಖಲಾತಿ ಪರಿಶೀಲನೆಗೆ ಅಭ್ಯರ್ಥಿಗಳು ಸಲ್ಲಿಸಬೇಕಾದ ದಾಖಲೆಗಳ ಪಟ್ಟಿ ಇಲ್ಲಿದೆ
ಸಿಇಟಿ 2026 ಕ್ಕೆ ಭರ್ತಿ ಮಾಡಿ ಅಂತಮವಾಗಿ ಸಲ್ಲಿಸಿರುವ ಪ್ರತಿ.
ಸಿಇಟಿ 2026 ರ ಮೂಲ ಪ್ರವೇಶ ಪತ್ರ.
ಎಸ್ಎಸ್ಎಲ್ಸಿ/ 10 ನೇ ತರಗತಿ ಅಂಕಪಟ್ಟಿ.
ದ್ವಿತೀಯ ಪಿಯುಸಿ / 12 ನೇ ತರಗತಿ ಅಂಕಪಟ್ಟಿ.
ಬಿಇಓ/ ಡಿಡಿಪಿಯು ಅವರಿಂದ ಮೇಲು ರುಜು ಮಾಡಿರುವ 1 ರಿಂದ 12ನೇ ತರಗತಿಯವರೆಗೆ ಅಧ್ಯಯನ ಮಾಡಿದ ಏಳು ವರ್ಷದ ವ್ಯಾಸಂಗ ಪ್ರಮಾಣ ಪತ್ರ.
ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ- 1 ರಿಂದ 10 ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದಲ್ಲಿ.
ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ- 1 ರಿಂದ 10 ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದಲ್ಲಿ.
ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರ.
ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರ.
371 (ಜೆ) ಹೈದರಾಬಾದ್ - ಕರ್ನಾಟಕ ಪ್ರದೇಶ ಮೀಸಲಾತಿ ಪ್ರಮಾಣ ಪತ್ರ.
ಸಂಖ್ಯಾಧಿಕ ಕೋಟಾ ( supernumerary Quota).
ಈ ಮೇಲಿನ ಎಲ್ಲ ದಾಖಲೆಗಳು ಸಿಇಟಿ 2023 ಆಫ್ಲೈನ್ ದಾಖಲಾತಿ ಪರಿಶೀಲನೆಗೆ ಅವಶ್ಯಕವಾಗಿವೆ. ಪ್ರತಿ ವರ್ಷವೂ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಇಂಜಿನಿಯರಿಂಗ್, ಆಯುರ್ವೇದ, ಹೋಮಿಯೋಪತಿ ಮತ್ತು ಫಾರ್ಮಸಿ, ಬಿಎಸ್ಸಿ ನರ್ಸಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಯುಜಿಸಿಇಟಿ (UGCET 2026) ರ ಫಲಿತಾಂಶವನ್ನು ಶೀಘ್ರದಕ್ಕೇ ಪ್ರಕಟಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೌಲ್ಯಮಾಪನ ಕಾರ್ಯ ಶುರುವಾಗಿದೆ. ಪ್ರಸ್ತುತ ಸಿಇಟಿ ಅಂಕ ಮತ್ತು ದ್ವಿತೀಯ ಪಿಯುಸಿ ಅಂಕಗಳನ್ನು ಆಧರಿಸಿ ರ್ಯಾಂಕ್ ಪಟ್ಟಿಯನ್ನು ನೀಡಲಾಗುತ್ತದೆ. ರ್ಯಾಂಕ್ ಪಟ್ಟಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಈ ಕಾರ್ಯ ಪೂರ್ಣವಾದ ಮೇಲೆ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ಕೆಸಿಇಟಿ ಪರೀಕ್ಷೆಯನ್ನು ಏಪ್ರಿಲ್ 23 ಮತ್ತು ಏಪ್ರಿಲ್ 24 ರಂದು ನಡೆಸಲಾಯಿತು. ಕನ್ನಡ ಭಾಷಾ ಪತ್ರಿಕೆಯನ್ನು ಏಪ್ರಿಲ್ 22 ರಂದು ನಡೆಸಲಾಯಿತು.
ಸಿಇಟಿ-2026 ರ ಫಲಿತಾಂಶಗಳ ಆಧಾರದ ಮೇಲೆ ಪರೀಕ್ಷಾ ಪ್ರಾಧಿಕಾರವು ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಕಟ್ ಆಫ್ ಅಂಕಗಳು ಕರ್ನಾಟಕ ರಾಜ್ಯದ ಕಾಲೇಜುಗಳಿಗೆ ಪ್ರವೇಶವನ್ನು ಒದಗಿಸಲು ಪರಿಗಣಿಸಲಾಗುವ ಕನಿಷ್ಠ ಅಂಕಗಳು ಎಲ್ಲವನ್ನೂ ಒದಗಿಸುತ್ತದೆ. ಇದು ವಿವಿಧ ಕಾಲೇಜುಗಳಲ್ಲಿ ಬೇರೆ ಬೇರೆಯಾಗಿರುತ್ತದೆ. ಯುಜಿಸಿಇಟಿ ಕೌನ್ಸಿಲಿಂಗ್ ಆನ್ಲೈನ್ ಮೂಲಕ ನಡೆಯಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶೀಘ್ರದಲ್ಲೇ ಅಧಿಕೃತ ವೆಬ್ಸೈಟ್ನಲ್ಲಿ KCET 2026 ಕೌನ್ಸೆಲಿಂಗ್ ಅನ್ನು ಪ್ರಾರಂಭಿಸಲಿದೆ. KCET ಫಲಿತಾಂಶಗಳ ಘೋಷಣೆಯ ನಂತರ ಕೌನ್ಸೆಲಿಂಗ್ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಅರ್ಹತೆ ಪಡೆದ ಅರ್ಜಿದಾರರನ್ನು KCET ಕೌನ್ಸೆಲಿಂಗ್ 2026 ಕ್ಕೆ ಕರೆಯಲಾಗುವುದು. ಅರ್ಜಿದಾರರು ಮೊದಲು KCET ಕೌನ್ಸೆಲಿಂಗ್ ನೋಂದಣಿಯನ್ನು ಪೂರ್ಣಗೊಳಿಸಬೇಕು, ನಂತರ ಆಯ್ಕೆ ಭರ್ತಿ ಮತ್ತು ಸೀಟ್ ಲಾಕ್ ಮಾಡಬೇಕು. ಅಭ್ಯರ್ಥಿಗಳು ಭರ್ತಿ ಮಾಡಿದ ಆಯ್ಕೆಗಳ ಆಧಾರದ ಮೇಲೆ KEA KCET ಸೀಟು ಹಂಚಿಕೆ ಫಲಿತಾಂಶವನ್ನು ಬಿಡುಗಡೆ ಮಾಡುತ್ತದೆ.