)
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ)ಯು ಶೈಕ್ಷಣಿಕೇತರ ಉದ್ಯೋಗ (Non-Academic) ಗಳನ್ನು ಭರ್ತಿ ಮಾಡುತ್ತಿದ್ದು ಈ ಸಂಬಂಧ ಅರ್ಹ ಹಾಗೂ ಆಸಕ್ತಿ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಉದ್ಯೋಗೆ ತಕ್ಕಂತೆ ವಯೋಮಿತಿ ಕೇಳಲಾಗಿದ್ದು ಗರಿಷ್ಠ 50 ವರ್ಷದ ಒಳಗಿನವರಿಗೂ ಅವಕಾಶ ನೀಡಲಾಗಿದೆ.
ಎನ್ಸಿಇಆರ್ಟಿ ಒಟ್ಟು 173 ಶೈಕ್ಷಣಿಕೇತರ ಉದ್ಯೋಗಗಳನ್ನು ತುಂಬುತ್ತಿದೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಸರ್ಕಾರಿ ಕೆಲಸ ಬೇಕು ಎನ್ನುವರು ಇವುಗಳಿಗೆ ಪ್ರಯತ್ನ ಮಾಡಬಹುದು. ಈ ಹುದ್ದೆಗಳು ಕರ್ನಾಟಕದ ಮೈಸೂರು ಹಾಗೂ ಬೆಂಗಳೂರು ಸೇರಿದಂತೆ ವಿವಿಧ ರಾಜ್ಯದ ಜಿಲ್ಲೆಗಳಲ್ಲಿ ಇವೆ. ಇವುಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದರೆ 10ನೇ ತರಗತಿಯಿಂದ ಪದವಿ, ಸ್ನಾತಕೋತ್ತರ ಡಿಪ್ಲೊಮಾ, ಬಿಇ, ಬಿಟೆಕ್, ಎಂಇ, ಎಂಟೆಕ್ ಸೇರಿದಂತೆ ವಿವಿಧ ಕೋರ್ಸ್ ಪಡೆದವರು ಇವುಗಳಿಗ ಅರ್ಹರು ಆಗಿರುತ್ತಾರೆ.
ಉದ್ಯೋಗಕ್ಕೆ ಆಯ್ಕೆ ಆದ ಅಭ್ಯರ್ಥಿಗಳಿಗೆ 5,200 ದಿಂದ 39,100 ರೂಪಾಯಿವರಗೆ ತಿಂಗಳ ಸಂಬಳ ನೀಡಲಾಗುತ್ತದೆ. ಸ್ಯಾಲರಿಯು ಆಯಾ ಆಯಾ ಉದ್ಯೋಗಕ್ಕೆ ತಕ್ಕಂತೆ ನಿಗದಿ ಮಾಡಲಾಗಿದೆ. ಸೂಪರಿಂಟೆಂಡಿಂಗ್ ಎಂಜಿನಿಯರ್, ಸೀನಿಯರ್ ಪ್ರೂಫ್ ರೀಡರ್, ಅಂಗಡಿ ಪಾಲಕ, ಕಂಪ್ಯೂಟರ್ ಆಪರೇಟರ್, ಮಹಡಿ ಸಹಾಯಕ, ಚಲನಚಿತ್ರ ಸಹಾಯಕ, ಗ್ರಾಫಿಕ್ ಸಹಾಯಕ ಗ್ರೇಡ್-೨, ಪ್ರಯೋಗಾಲಯ ಸಹಾಯಕ ಸೇರಿ ಇನ್ನು ವಿವಿಧ ಉದ್ಯೋಗಗಳು ಇವೆ.
ಆಯ್ಕೆ ಪ್ರಕ್ರಿಯೆಯು ಮೂರು ಮಾದರಿಯಲ್ಲಿ ನಡೆಯುತ್ತದೆ. ಒಂದು ಲಿಖಿತ ಪರೀಕ್ಷೆ ಇನ್ನೊಂದು ಕೌಶಲ್ಯ ಪರೀಕ್ಷೆ ಮತ್ತೊಂದು ಸಂದರ್ಶನ ಮೂಲಕ ಆಯ್ಕೆ ಆಗಿದೆ. ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯು ಡಿಸೆಂಬರ್ 27 ರಿಂದ ಆರಂಭವಾಗಿದ್ದು 2026ರ ಜನವರಿ 16ರ ಒಳಗಾಗಿ ಅಪ್ಲೇ ಮಾಡಬಹುದು. ಅರ್ಜಿ ಸಲ್ಲಿಕೆ ಮಾಡುವರು ಸರಿಯಾದ ಇಮೇಲ್, ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗಿ ತಿಳಿಸಲಾಗಿದೆ.