ಭಾರತೀಯ ರೈಲ್ವೆ ಇಲಾಖೆ ನೇಮಕಾತಿ; 9900ಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

RRB ALP Recruitment: ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಇಂದಿನಿಂದ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

Written by - Puttaraj K Alur | Last Updated : Apr 12, 2025, 07:39 PM IST
  • 9900ಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿ
  • ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದ ರೈಲ್ವೆ ನೇಮಕಾತಿ ಮಂಡಳಿ
  • ಈ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯು ಮೇ 11ರಂದು ಕೊನೆಗೊಳ್ಳುತ್ತದೆ
ಭಾರತೀಯ ರೈಲ್ವೆ ಇಲಾಖೆ ನೇಮಕಾತಿ; 9900ಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

RRB ALP Recruitment: ನೀವು ಭಾರತೀಯ ರೈಲ್ವೆ ಇಲಾಖೆಯಲ್ಲಿ ಸಹಾಯಕ ಲೋಕೋ ಪೈಲಟ್ ಆಗಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದರೆ ಈ ಸುದ್ದಿ ನಿಮಗೆ ತುಂಬಾ ಪ್ರಯೋಜನಕಾರಿ. ರೈಲ್ವೆ ನೇಮಕಾತಿ ಮಂಡಳಿಯು ರೈಲ್ವೆಯಲ್ಲಿ 9900ಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ. ಹೀಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಸಹಾಯಕ ಲೋಕೋ ಪೈಲಟ್ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯು ಮೇ 11ರಂದು ಕೊನೆಗೊಳ್ಳುತ್ತದೆ. ಆಸಕ್ತ ಅಭ್ಯರ್ಥಿಗಳು ಈ ದಿನಾಂಕದಂದು ಅಥವಾ ಅದಕ್ಕೂ ಮೊದಲು ಅರ್ಜಿ ಸಲ್ಲಿಸಬಹುದು.

Add Zee News as a Preferred Source

ಎಷ್ಟು ಹುದ್ದೆಗಳಿಗೆ ನೇಮಕಾತಿ?: ಈ ನೇಮಕಾತಿ ಅಭಿಯಾನವು ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 9970 ALP ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ?: ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು. ಅದೇ ರೀತಿ ಅಭ್ಯರ್ಥಿಗಳ ಗರಿಷ್ಠ ವಯಸ್ಸು 30 ವರ್ಷಗಳು ಆಗಿರಬೇಕು. ಸರಳ ಭಾಷೆಯಲ್ಲಿ ಹೇಳುವುದಾದರೆ ಅರ್ಜಿದಾರರ ವಯಸ್ಸು 18 ರಿಂದ 30 ವರ್ಷಗಳ ನಡುವೆ ಇರಬೇಕು (01-07-2025ರಂತೆ). ಅಭ್ಯರ್ಥಿಗಳು ಸಂಬಂಧಿತ ವಿಷಯದ ಕುರಿತು ಹೆಚ್ಚಿನ ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. 

ಇದನ್ನೂ ಓದಿ: ಪತ್ನಿಯ ಹೆಸರಲ್ಲಿ SBIನಲ್ಲಿ ₹2,00,000 FD ಮಾಡಿದ್ರೆ 2 ವರ್ಷಗಳ ನಂತರ ಎಷ್ಟು ಹಣ ಸಿಗುತ್ತದೆ?

ಅರ್ಜಿ ಸಲ್ಲಿಸುವುದು ಹೇಗೆ?

* ಮೊದಲನೆಯದಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. 
* ಇದರ ನಂತರ, ಅಭ್ಯರ್ಥಿಗಳು ಮುಖಪುಟದಲ್ಲಿರುವ ಸಂಬಂಧಿತ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. 
* ನಂತರ ಅಭ್ಯರ್ಥಿಯು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. 
* ಇದಾದ ನಂತರ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು Submit ಮಾಡಲು ಮುಂದುವರಿಯಬೇಕು. 
* ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ ಅಭ್ಯರ್ಥಿಗಳು ಅದನ್ನು Submit ಮಾಡಬೇಕು
* ಫಾರ್ಮ್ ಸಲ್ಲಿಸಿದ ನಂತರ ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸಬೇಕು. 
* ಇದಾದ ನಂತರ ಅಭ್ಯರ್ಥಿಗಳು ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್‌ಔಟ್ ತೆಗೆದುಕೊಳ್ಳಬೇಕು. 

ಅರ್ಜಿ ಶುಲ್ಕ : ಸಹಾಯಕ ಲೋಕೋ ಪೈಲಟ್ ನೇಮಕಾತಿಗೆ ಅರ್ಜಿ ಸಲ್ಲಿಸುವ SC/ST, ಮಾಜಿ ಸೈನಿಕರು, ಮಹಿಳೆಯರು, ಟ್ರಾನ್ಸ್‌ಜೆಂಡರ್, ಅಲ್ಪಸಂಖ್ಯಾತ ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗ (EBC) ಅಭ್ಯರ್ಥಿಗಳನ್ನು ಹೊರತುಪಡಿಸಿ, ಉಳಿದವರೆಲ್ಲರೂ ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕಾಗುತ್ತದೆ. ಅದೇ ರೀತಿ SC/ST, ಮಾಜಿ ಸೈನಿಕರು, ಮಹಿಳೆಯರು, ಟ್ರಾನ್ಸ್‌ಜೆಂಡರ್, ಅಲ್ಪಸಂಖ್ಯಾತ ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗ (EBC) ಅಭ್ಯರ್ಥಿಗಳು 250 ರೂ. ಪಾವತಿಸಬೇಕಾಗುತ್ತದೆ.  

ಇದನ್ನೂ ಓದಿ: ಕೊನೆಗೂ ಬಂದಾಯ್ತು ರತನ್ ಟಾಟಾ ಬದುಕು ಸವೆಸಿದ ಈ ಬಂಗಲೆಯ ವಾರಸುದಾರ !ಈ ಬಂಗಲೆಯ ಬೆಲೆ ಎಷ್ಟು ಗೊತ್ತಾ ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News