Ram Mandir Ayodhya: ಅಯೋಧ್ಯೆಯಲ್ಲಿ ಬೃಹತ್ ಸ್ಥಾವರಗಳ ಸ್ಥಾಪನೆ: ರಾಮಮಂದಿರ ಉದ್ಘಾಟನೆ ಬಳಿಕ ಲಕ್ಷಾಂತರ ಉದ್ಯೋಗ ಭರವಸೆ!
Ayodhya Ram Mandir: ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನವೇ ಇಲ್ಲಿ ದೊಡ್ಡ ದೊಡ್ಡ ಕಂಪನಿಗಳು ಸ್ಥಾವರಗಳನ್ನು ಸ್ಥಾಪಿಸಲು ಸಿದ್ಧತೆ ನಡೆಸಿದ್ದು, ಭವಿಷ್ಯದಲ್ಲಿ ಅಯೋಧ್ಯೆ ಉದ್ಯೋಗ ಕೇಂದ್ರವಾಗಲಿದೆ ಎಂದು ಹೇಳಲಾಗುತ್ತಿದೆ.
Employment Hub: ಆಯೋಧ್ಯೆಯಲ್ಲಿ ರಾಮಮಂದಿರ ಶಂಕು ಸ್ಥಾಪನೆಗೆ ದಿನಗಣನೆ ಆರಂಭವಾಗಿದೆ. 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಈ ಭವ್ಯವಾದ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ರಾಮ ಭಕ್ತರು ಬಹಳ ಉತ್ಸುಕತೆಯಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಅಯೋಧ್ಯೆಗೆ ಸಂಬಂಧಿಸಿದಂತೆ ಮತ್ತೊಂದು ಗುಡ್ ನ್ಯೂಸ್ ಲಭ್ಯವಾಗಿದ್ದು, ಮುಂಬರುವ ದಿನಗಳಲ್ಲಿ ಅಯೋಧ್ಯೆ ಉದ್ಯೋಗ ಕೇಂದ್ರವಾಗಲಿದೆ ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ, ಅಯೋಧ್ಯೆಯಲ್ಲಿ ಬಹುವರ್ಷಗಳ ಕನಸಾದ ರಾಮಮಂದಿರ ನಿರ್ಮಾಣದೊಂದಿಗೆ ಮುಂಬರುವ ದಿನಗಳಲ್ಲಿ ಅಯೋಧ್ಯೆಯಲ್ಲಿ ಅನೇಕ ದೊಡ್ಡ ಸ್ಥಾವರಗಳು ಸಹ ಸ್ಥಾಪನೆಯಾಗಲಿವೆ. ಇದರಿಂದಾಗಿ ಭವಿಷ್ಯದಲ್ಲಿ ಇಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ- KSET 2023 Admit Card: KSET 2023 ಅಡ್ಮಿಟ್ ಕಾರ್ಡ್ ಬಿಡುಗಡೆ: ಇಲ್ಲಿದೆ ಡೌನ್‌ಲೋಡ್ ಲಿಂಕ್
ರಾಮಮಂದಿರದ ಭವ್ಯತೆಯನ್ನು ಕಂಡು ದೊಡ್ಡ ದೊಡ್ಡ ಕಂಪನಿಗಳು ಅಯೋಧ್ಯೆಯಲ್ಲಿ ಸ್ಥಾವರಗಳನ್ನು ಸ್ಥಾಪಿಸಲು ಉತ್ಸುಕವಾಗಿವೆ. ಈ ದೊಡ್ಡ ಕಂಪನಿಗಳಲ್ಲಿ, FMCG ಮತ್ತು ಹಾಸ್ಪಿಟಾಲಿಟಿ ಕಂಪನಿಗಳು ಸೇರಿವೆ ಎನ್ನಲಾಗಿದೆ.
ಸದ್ಯ ಅಯೋಧ್ಯೆಯನ್ನು ಪ್ರಸಿದ್ಧ ಯಾತ್ರಾಸ್ಥಳವಾಗಿ ನೋಡಲಾಗುತ್ತಿದೆ. ಇಲ್ಲಿ ಆಗಮಿಸುವ ಪ್ರವಾಸಿಗರಿಗಾಗಿ ಅಯೋಧ್ಯೆಯಲ್ಲಿ ಅನೇಕ ಹೋಟೆಲ್‌ಗಳು ತಲೆ ಎತ್ತಲು ಸಜ್ಜಾಗಿವೆ. ಮುಂಬರುವ ದಿನಗಳಲ್ಲಿ, ಇದು ಧಾರ್ಮಿಕ ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಗೆ ದೊಡ್ಡ ಕೇಂದ್ರವಾಗಿ ಕಂಡುಬರುತ್ತದೆ. ಇದರಿಂದಾಗಿ ಅಯೋಧ್ಯೆಯ ಆರ್ಥಿಕತೆಯೂ ಸುಧಾರಿಸಬಹುದು. ಎಫ್‌ಎಂಸಿಜಿ ಕಂಪನಿಗಳು ಮತ್ತು ಆತಿಥ್ಯ ವಲಯಕ್ಕೆ ಸಂಬಂಧಿಸಿದ ಕಂಪನಿಗಳಿಗೆ ಅಯೋಧ್ಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲಾಗುವುದು ಅವಕಾಶಗಳು ಸೃಷ್ಟಿಯಾಗಳಿವೆ. ಹಾಗಾಗಿ, ಇಲ್ಲಿ ಉದ್ಯೋಗ ಸೃಷ್ಟಿ ಅವಕಾಶಗಳೂ ಸಾಕಷ್ಟಿವೆ.
ಇದನ್ನೂ ಓದಿ- ಗೃಹ ರಕ್ಷಕ ದಳದ ನೇಮಕಾತಿಗೆ ಅರ್ಜಿ ಆಹ್ವಾನ: SSLC ಪಾಸಾದವರು ಇಂದೇ ಅರ್ಜಿ ಸಲ್ಲಿಸಿ
ಖಾಸಗಿ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಎಫ್‌ಎಂಸಿಜಿ ಮತ್ತು ಹಾಸ್ಪಿಟಾಲಿಟಿ ಕಂಪನಿಗಳು ಇಲ್ಲಿ ಹೊಸ ಉದ್ಯಮವನ್ನು ಸೃಷ್ಟಿಸಲು ತಮ್ಮ ಸಿದ್ದತೆಗಳನ್ನು ತೀವ್ರಗೊಳಿಸಿವೆ. ಮಿನರಲ್ ವಾಟರ್ ಕಂಪನಿ ಬಿಸ್ಲೆರಿ ಇಂಟರ್‌ನ್ಯಾಶನಲ್ ಅಯೋಧ್ಯೆಯಲ್ಲಿ ಹೊಸ ಪ್ಲಾಂಟ್ ಸ್ಥಾಪಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಮೆಕ್‌ಡೊನಾಲ್ಡ್ ಮತ್ತು ಬರ್ಗರ್ ಸಿಂಗ್ ಅಯೋಧ್ಯೆ-ಲಕ್ನೋ ಹೆದ್ದಾರಿಯಲ್ಲಿ ಹೊಸ ಔಟ್‌ಲೆಟ್ ತೆರೆಯುತ್ತಿದ್ದಾರೆ ಎಂಬ ಮಾಹಿತಿಗಳು ಕೂಡ ಲಭ್ಯವಾಗಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ