ಮತ್ತೊಂದು ಅಮಾನುಷ ಕೃತ್ಯ; 14 ವರ್ಷದ ಬಾಲಕಿಯ ಕಿಡ್ನಾಪ್‌, ನಿರಂತರ ಸಾಮೂಹಿಕ ಅತ್ಯಾಚಾರ

Uttar Pradesh Rape Case: ಜನವರಿ 2ರಂದು ಕಾಣೆಯಾಗಿದ್ದ ಸಂತ್ರಸ್ತೆ ಕೆಲವು ದಿನಗಳ ಹಿಂದೆ ಮನೆಗೆ ಮರಳಿದ್ದಳು. ಆರೋಪಿಗಳು ಆಕೆಯನ್ನ ಸುಮಾರು ಎರಡು ತಿಂಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈ ಅವಧಿಯಲ್ಲಿ ಆಕೆಯ ಮೇಲೆ ಹಲವಾರು ಬಾರಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಬಲವಂತವಾಗಿ ಆಕೆಗೆ ಮಾಂಸ ತಿನ್ನಿಸಲಾಗಿದ್ದು, ಆಕೆಯ ಕೈಯಲ್ಲಿರುವ ಓಂ ಹಚ್ಚೆಯನ್ನು ಸಹ ಆಸಿಡ್‌ನಿಂದ ಅಳಿಸಲಾಗಿದೆ.

Written by - Puttaraj K Alur | Last Updated : Mar 6, 2025, 07:38 PM IST
  • ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನುಷ ಕೃತ್ಯ ನಡೆದಿದೆ
  • ಮೊರಾದಾಬಾದ್‌ನಲ್ಲಿ 14 ವರ್ಷದ ದಲಿತ ಬಾಲಕಿಯ ಕಿಡ್ನಾಪ್‌
  • ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳು
ಮತ್ತೊಂದು ಅಮಾನುಷ ಕೃತ್ಯ; 14 ವರ್ಷದ ಬಾಲಕಿಯ ಕಿಡ್ನಾಪ್‌, ನಿರಂತರ ಸಾಮೂಹಿಕ ಅತ್ಯಾಚಾರ
ಮತ್ತೊಂದು ಅಮಾನುಷ ಕೃತ್ಯ!

UP Rape Case: ಅತ್ಯಾಚಾರಗಳ ರಾಜಧಾನಿ ಎಂದೇ ಕುಖ್ಯಾತಿ ಪಡೆದಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನುಷ ಕೃತ್ಯ ನಡೆದಿದೆ. 14 ವರ್ಷದ ದಲಿತ ಬಾಲಕಿಯನ್ನ ಕಿಡ್ನಾಪ್‌ ಮಾಡಿ ನಂತರ ಆಕೆಯ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ದುಷ್ಕರ್ಮಿಯೊಬ್ಬನನ್ನ ಬಂಧಿಸಿದ್ದಾರೆ. 

Add Zee News as a Preferred Source

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಎರಡು ತಿಂಗಳ ಹಿಂದೆ ಬಾಲಕಿಯೊಬ್ಬಳು ಕಾಣೆಯಾಗಿದ್ದಳು. ಆಕೆಯನ್ನ ಕಿಡ್ನಾಪ್‌ ಮಾಡಿದ್ದ ದುಷ್ಕರ್ಮಿಗಳು 2 ತಿಂಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಹಲವಾರು ಬಾರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಮನೆಗೆ ಮರಳಿದ ಬಳಿಕ ಆಕೆ ತನ್ನ ಮೇಲಾದ ಅಮಾನುಷ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ಬುಧವಾರ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: DA Hike: ತುಟ್ಟಿಭತ್ಯೆ ವಿಚಾರವಾಗಿ ಸರ್ಕಾರಿ ನೌಕರರಿಗೆ ಆಘಾತ ನೀಡಿದ ಸರ್ಕಾರ..!

ಈ ಬಗ್ಗೆ ಮಾತನಾಡಿರುವ ಭಗತ್‌ಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ (SHO) ಸಂಜಯ್ ಕುಮಾರ್ ಪಾಂಚಾಲ್, ʼಬಾಲಕಿಯ ಕುಟುಂಬ ಸದಸ್ಯರು ನೀಡಿದ ದೂರಿನ ಪ್ರಕಾರ, ಬಾಲಕಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಆರೋಪಿಗಳು ಆಕೆಯ ಕೈಯಲ್ಲಿದ್ದ 'ಓಂ' ಹಚ್ಚೆಯನ್ನು ಆಸಿಡ್‌ನಿಂದ ಸುಟ್ಟು ತೆಗೆದುಹಾಕಿದ್ದಾರೆ. ಆಕೆಗೆ ನಿರಂತರವಾಗಿ ಚಿತ್ರಹಿಂಸೆ ನೀಡಲಾಗಿದೆʼ ಎಂದು ಹೇಳಿದ್ದಾರೆ. 

ಜನವರಿ 2ರಂದು ಬಾಲಕಿಯ ಕಿಡ್ನಾಪ್

ದೂರಿನ ಆಧಾರದ ಮೇಲೆ ಸಲ್ಮಾನ್, ಜುಬೇರ್, ರಶೀದ್ ಮತ್ತು ಆರಿಫ್ ಎಂಬ ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ST/SC (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಜನವರಿ 2ರಂದು ಟೈಲರ್ ಶಾಪ್‌ಗೆ ಹೋಗುತ್ತಿದ್ದಾಗ ತಮ್ಮ ಮಗಳನ್ನು ಅಪಹರಿಸಲಾಗಿತ್ತು ಎಂದು ಆಕೆಯ ತಾಯಿ ಆರೋಪಿಸಿದ್ದಾರೆಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:  Unheard Love Story: ಕಿರಣ್ ಬೇಡಿಯ ಪತಿ ಯಾರು? ಅವರ ವೈವಾಹಿಕ ಜೀವನದ ಹಿಂದಿದೆ ರೋಚಕ ಪ್ರೇಮ ಕಥೆ..!

ಅಪ್ರಾಪ್ತೆಯ ಮೇಲೆ ದೌರ್ಜನ್ಯ

ದೂರನ್ನು ಉಲ್ಲೇಖಿಸಿ ಪೊಲೀಸರು, ʼಆರೋಪಿಗಳು ಬಾಲಕಿಯನ್ನ ಕಾರಿನಲ್ಲಿ ಅಪಹರಿಸಿ, ಮಾದಕ ದ್ರವ್ಯ ನೀಡಿ ಪ್ರಜ್ಞಾಹೀನಗೊಳಿಸಿದ್ದರು. ಅಪ್ರಾಪ್ತೆಯನ್ನ ಕೋಣೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡು ಹಲವಾರು ಬಾರಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಸಂತ್ರಸ್ತೆ ಮತ್ತು ಆಕೆಯ ಕುಟುಂಬವನ್ನು ಕೊಲ್ಲುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರಂತೆ. ನಂತರ ಆಕೆಯನ್ನು ಭೋಜ್‌ಪುರ ಪ್ರದೇಶಕ್ಕೆ ಕರೆದೊಯ್ದು ಮತ್ತೊಂದು ಕೋಣೆಯಲ್ಲಿ ಬಂಧಿಸಿ ಇಡಲಾಗಿತ್ತು. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಆಕೆ ಕೆಲವು ದಿನಗಳ ಹಿಂದೆ ತನ್ನ ಚಿಕ್ಕಮ್ಮನ ಮನೆಗೆ ಮರಳಿದ್ದಾಳೆಂದು ತಿಳಿಸಿದ್ದಾರೆ.  

ಪ್ರಕರಣ ಹಿಂಪಡೆಯುವಂತೆ ಬೆದರಿಕೆ  

ಆರೋಪಿಗಳು ಪ್ರಕರಣವನ್ನ ಹಿಂಪಡೆಯುವಂತೆ ಬೆದರಿಕೆ ಹಾಕುತ್ತಿದ್ದಾರೆಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ ಅಂತಾ ಪೊಲೀಸ್ ಅಧಿಕಾರಿ ಪಂಚಲ್ ಹೇಳಿದ್ದಾರೆ. ಭಗತ್‌ಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಕುನ್ವರ್ ಆಕಾಶ್ ಸಿಂಗ್ ದೃಢಪಡಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಪೈಕಿ ಸಲ್ಮಾನ್‌ನನ್ನು ಮಂಗಳವಾರ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News