50 ವರ್ಷದ ಅಂಕಲ್‌ ಜೊತೆ 18 ವರ್ಷದ ಯುವತಿ ಪರಾರಿ; ಮಗಳು ಬೇಕೆಂದು ಕಣ್ಣೀರಿಡುತ್ತಿರುವ ಪೋಷಕರು!!

Strange love story: ಹುಬ್ಬಳ್ಳಿಯಿಂದ ಕೊಲ್ಲಾಪುರದ ಅಜ್ಜಿ ಮನೆಗೆ ಹೋಗುವುದಾಗಿ ಹೇಳಿ ಹೋದ 18 ವರ್ಷದ ತಮ್ಮ ಪುತ್ರಿ 50 ವರ್ಷದ ಅಂಕಲ್‌ನೊಂದಿಗೆ ಪರಾರಿಯಾಗಿದ್ದಾಳೆ ಅಂತಾ ಆರೋಪಿಸಿ ಯುವತಿ ಮನೆಯವರು ಕಣ್ಣೀರು ಹಾಕಿದ್ದಾರೆ.

Written by - Puttaraj K Alur | Last Updated : Feb 13, 2025, 07:42 PM IST
  • 50 ವರ್ಷದ ಅಂಕಲ್‌ ಜೊತೆಗೆ 18 ವರ್ಷದ ಯುವತಿ ಎಸ್ಕೇಪ್‌
  • ತಮ್ಮ ಮಗಳನ್ನು ಹುಡುಕಿಕೊಡುವಂತೆ ಆಕೆಯ ಪೋಷಕರು ಕಣ್ಣೀರು
  • ಕೊಲ್ಲಾಪುರದ ಅಜ್ಜಿ ಮನೆಗೆ ಹೋಗಿದ್ದ ಹುಡುಗಿ ದಿಢೀರ್ ನಾಪತ್ತೆ
50 ವರ್ಷದ ಅಂಕಲ್‌ ಜೊತೆ 18 ವರ್ಷದ ಯುವತಿ ಪರಾರಿ; ಮಗಳು ಬೇಕೆಂದು ಕಣ್ಣೀರಿಡುತ್ತಿರುವ ಪೋಷಕರು!!
ಅಂಕಲ್‌ ಜೊತೆ ಯುವತಿ ಎಸ್ಕೇಪ್!

Girl Escape with Uncle: 50 ವರ್ಷದ ಅಂಕಲ್‌ ಜೊತೆ 18 ವರ್ಷದ ಯುವತಿಯೊಬ್ಬಳು ಎಸ್ಕೇಪ್‌ ಆಗಿರುವ ಘಟನೆ ನಡೆದಿದೆ. ಇದು ಹುಬ್ಬಳ್ಳಿಯಲ್ಲಿ ನಡೆದಿರುವಂತಹ ವಿಚಿತ್ರ ಪ್ರೇಮ್ ಕಹಾನಿ. ಹುಬ್ಬಳ್ಳಿಯಿಂದ ಕೊಲ್ಲಾಪುರದ ಅಜ್ಜಿ ಮನೆಗೆ ಹೋಗುವುದುಆಗಿ ಹೇಳಿ ಹೋದ ತಮ್ಮ ಪುತ್ರಿ 50 ವರ್ಷದ ಅಂಕಲ್‌ನೊಂದಿಗೆ ಪರಾರಿಯಾಗಿದ್ದಾಳೆ ಅಂತಾ ಆರೋಪಿಸಿ ಆಕೆಯ ಪೋಷಕರು ಕಣ್ಣೀರು ಹಾಕಿದ್ದಾರೆ. 

Add Zee News as a Preferred Source

ಎರಡು ಮಕ್ಕಳ ತಂದೆಯ ಜೊತೆಗೆ 18 ವರ್ಷ ಯುವತಿಯ 'ಪ್ರೇಮ ಪುರಾಣ' ಬಹಿರಂಗವಾಗಿದೆ. ಅಜ್ಜಿ ಮನೆಗೆ ಹೋಗಿದ್ದ ಹುಡುಗಿ ದಿಢೀರ್ ನಾಪತ್ತೆ ಆಗಿದ್ದಾಳೆ. ತಮ್ಮ ಮಗಳಿಗೆ ಬಣ್ಣ ಬಣ್ಣದ ಮಾತುಗಳಿಗೆ ತಲೆ ಕೆಡೆಸಿ ಕರೆದುಕೊಂಡು ಹೋಗಿದ್ದಾನೆ ಅಂತಾ ಅಂಕಲ್‌ ವಿರುದ್ಧ ಆಕೆಯ ಮನೆಯವರು ದೂರು ನೀಡಿದ್ದಾರೆ. ನಾಪತ್ತೆಯಾಗಿರೋ ತಮ್ಮ ಮಗಳನ್ನು ಹುಡುಕಿಕೊಡುವಂತೆ ಆಕೆಯ ಪೋಷಕರು ಕಣ್ಣೀರು ಹಾಕಿದ್ದಾರೆ. ಮಗಳ ಪೋಟೋವನ್ನು ಹಿಡಿದು ಹುಡುಕಿಕೊಡುವಂತೆ ಪೊಲೀಸರು ಸೇರಿದಂತೆ ಕಂಡ ಕಂಡವರ ಮುಂದೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣ ದರ ಇಳಿಕೆಗೆ CM ಸಿದ್ದರಾಮಯ್ಯ ಸೂಚನೆ

ಏನಿದು ಘಟನೆ?

ಅಂದಹಾಗೆ ಯುವತಿ ಕರೀಷ್ಮಾ ಎಂಬಾಕೆ ಅಪ್ರಾಪ್ತೆ ಇದ್ದಾಗಲೇ ಪ್ರೀತಿ-ಪ್ರೇಮ ಅಂತಾ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿರುವ ಪ್ರಕಾಶ್‌ ಗೋಪಿ ಎಂಬಾತನ ಜೊತೆಗೆ ಸುತ್ತಾಡಿದ್ದಳಂತೆ. ಆಗ ಪ್ರಕಾಶ್‌ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್‌ ದಾಖಲಿಸಿ ವಾರ್ನಿಂಗ್‌ ಮಾಡಲಾಗಿತ್ತು. ಆದರೆ ಯುವತಿ ಅಂಕಲ್‌ ಪ್ರೀತಿಗೆ ಮರುಳಾಗಿದ್ದಳು. ಇದೀಗ ತನಗೆ 18 ವರ್ಷ ತುಂಬುತ್ತಿದ್ದಂತೆ ತಾನು ಮೇಜರ್ ಅಂತಾ ತಿಳಿದು ಪ್ರಕಾಶ್‌ ಜೊತೆಗೆ ಓಡಿ ಹೋಗಿರಬಹುದು. 

ಹುಬ್ಬಳ್ಳಿಯ ಚಾಲುಕ್ಯ ನಗರದಲ್ಲಿ ಕರಿಷ್ಮಾ ಮನೆಯಿದ್ದರೆ, ಕೊಂಚ ದೂರದಲ್ಲೇ ಪ್ರಕಾಶ್‌ ವಾಸಿಸುತ್ತಿದ್ದರಂತೆ. ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಆತ ಕಳೆದ ಮೂರು ವರ್ಷದಿಂದ ಕರೀಷ್ಮಾಳ ಹಿಂದೆ ಬಿದ್ದಿದ್ದನಂತೆ. ಹೀಗಾಗಿ ಆತನ ವಿರುದ್ಧ ಆಕೆಯ ಪೋಷಕರು ಪೊಲೀಸ್‌ ಠಾಣೆಗೆ ದೂರು ಸಹ ನೀಡಿದ್ದರಂತೆ. ಇದಾಗ ಬಳಿಕ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಅಜ್ಜಿಯ ಮನೆಗೆ ಕರೀಷ್ಮಾಳನ್ನು ಕಳುಹಿಸಿದ್ದರಂತೆ. ಇದೀಗ ಆಕೆ ಅಜ್ಜಿ ಮನೆಯಿಂದಲೇ ನಾಪತ್ತೆಯಾಗಿದ್ದಾಳಂತೆ. 

ಇದನ್ನೂ ಓದಿಶಿವರಾತ್ರಿಯವರೆಗೂ ಮಹಾಕುಂಭಮೇಳ ದರ್ಶನಕ್ಕೆ ಅವಕಾಶ

ಜನವರಿ 2ರಂದು ಕರೀಷ್ಮಾ ಮನೆಯಿಂದ ಓಡಿ ಹೋಗಿದ್ದು, ಇದುವರೆಗೂ ಪತ್ತೆಯಾಗಿಲ್ಲ. ಇದೇ ವೇಳೆ ಪ್ರಕಾಶ್‌ ಕೂಡ ಹುಬ್ಬಳ್ಳಿಯ ಚಾಲುಕ್ಯ ನಗರದಿಂದ ನಾಪತ್ತೆಯಾಗಿದ್ದಾನೆ. ಹೀಗಾಗಿ ಅಜ್ಜಿ ಮನೆಯಿಂದಲೇ ಆಕೆ ಪ್ರಕಾಶ್‌ ಜೊತೆಗೆ ನಾಪತ್ತೆಯಾಗಿದ್ದಾಳೆ ಅಂತಾ ಯುವತಿ ಮನೆಯವರು ಆರೋಪ ಮಾಡಿದ್ದಾರೆ. 40 ದಿನವಾದರೂ ತಮ್ಮ ಪುತ್ರಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ತಮ್ಮ ಪುತ್ರಿಯನ್ನು ಹುಡುಕಿಕೊಡುವಂತೆ ಆಕೆಯ ಪೋಷಕರು ಪೊಲೀಸರಿಗೆ ಮನವಿ ಮಾಡಿದ್ದು, ಕಣ್ಣೀರು ಹಾಕುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

About the Author

Puttaraj K Alur

ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser) ನ್ಯೂಸ್‌, ಒಪೊಯಿ‌ (Opoyi) ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. ...Read More

Trending News