ಮಹಿಳೆಯರಿಗೆ ಮರು ಮದುವೆ ಆಸೆ ತೋರಿಸಿ ಪಂಗನಾಮ ಹಾಕಿದ್ದ ಆಸಾಮಿ ಅರೆಸ್ಟ್...

Marriage Proposal: ಮ್ಯಾಟ್ರಿಮೋನಿ ಸೈಟ್‌ನಲ್ಲಿ ಮರು ಮದುವೆಗೆ ನೊಂದಣಿಸಿದ್ದ ಮಹಿಳೆಯರಿಗೆ ಮದುವೆ ಆಸೆ ತೋರಿಸಿ ಪಂಗನಾಮ... 

Written by - Yashaswini V | Last Updated : May 10, 2025, 12:57 PM IST
  • ಮಹಿಳೆಯರಿಗೆ ಮದುವೆ ಭರವಸೆ ನೀಡಿ, ನಂಬಿಕೆ ಹುಟ್ಟಿಸುತ್ತಿದ್ದ ವ್ಯಕ್ತಿ
  • ನಂಬಿಕೆ ಗೆದ್ದು ಹಣ ಪಡೆದು, ಬ್ಲಾಕ್‌ಮೇಲ್
  • ವಿವಾಹ ನಂಬಿಕೆಯ ಹೆಸರಿನಲ್ಲಿ ವಂಚನೆ
ಮಹಿಳೆಯರಿಗೆ ಮರು ಮದುವೆ ಆಸೆ ತೋರಿಸಿ ಪಂಗನಾಮ ಹಾಕಿದ್ದ ಆಸಾಮಿ ಅರೆಸ್ಟ್...

Marriage Proposal: ಡೈವರ್ಸಿ ಮ್ಯಾಟ್ರಿಮೋನಿ ಸೈಟ್‌ನಲ್ಲಿ ಮರು ಮದುವೆಗೆ ನೊಂದಣಿ ಮಾಡಿಕೊಂಡಿದ್ದ ಮಹಿಳೆಯರನ್ನು ಮದುವೆ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ವೃದ್ಧನನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. 

Add Zee News as a Preferred Source

ಮದುವೆಗೆ ನೊಂದಣಿ ಮಾಡಿಕೊಂಡಿದ್ದ ಮಹಿಳೆಯರನ್ನು ಮದುವೆ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ್ದ ವೃದ್ಧನನ್ನು ಬಂಧಿಸಿರುವುದಾಗಿ ಚಿಕ್ಕಬಳ್ಳಾಪುರ ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಯನ್ನು ಸುರೇಶ್ ನಾಯ್ಡು ಎಂದು ಹೇಳಲಾಗಿದೆ. 

ಮಹಿಳೆಯರಿಗೆ ಮರು ಮದುವೆ ಆಸೆ ತೋರಿಸಿ ವಂಚಿಸಿದ್ದ 61 ವರ್ಷದ ಈ ಬಂಧಿತ ಆರೋಪಿ ಸುರೇಶ ನಾಯ್ಡು ಈಗಾಗಲೇ ಎರಡು ಮದುವೆ ಮಾಡಿಕೊಂಡಿದ್ದರೂ, ಮೂರನೇ ಮದುವೆಗೂ ಸೈಟ್‌ನಲ್ಲಿ ನೊಂದಾಯಿಸಿಕೊಂಡಿದ್ದ ಎನ್ನಲಾಗಿದೆ. 

ಇದನ್ನೂ ಓದಿ- ಪ್ರಿಯಕರನೊಂದಿಗೆ 5 ಮಕ್ಕಳ ತಾಯಿ ಜೂಟ್..! ತಾಯಿ ಪ್ರೀತಿಗೆ ಮಗು ಬ*ಲಿ... ಆರೋಪಿಗೆ ಜೀವಾವಧಿ ಶಿಕ್ಷೆ..! 

ಮಹಿಳೆಯರಿಗೆ ಮದುವೆ ಭರವಸೆ ನೀಡುತ್ತಿದ್ದ ಆರೋಪಿ ಸುರೇಶ ನಾಯ್ಡು, ನಂತರ ನಂಬಿಕೆ ಗೆದ್ದು ಹಣ ಪಡೆದು, ಬ್ಲಾಕ್‌ಮೇಲ್ ಕೂಡ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. 

ಚಿಕ್ಕಬಳ್ಳಾಪುರದ ಲೇಡಿ ನರ್ಸಿಂಗ್ ಆಫೀಸರ್ ಒಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯಿಂದ 2.80 ಲಕ್ಷ ರೂಪಾಯಿ ಪಡೆದಿದ್ದು, ಬಳಿಕ ಬೆದರಿಕೆ ಹಾಕಿದ್ದಾನೆ. ಮಹಿಳೆ ಈ ಕುರಿತು ಸೈಬರ್ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. 

ಇದನ್ನೂ ಓದಿ- ಯೂಟ್ಯೂಬ್‌ ನೋಡಿ ಸರಗಳ್ಳತನ ಮಾಡುತ್ತಿದ್ದವರ ಬಂಧನ

ವಿಚಾರಣೆ ವೇಳೆ ಬೆಂಗಳೂರಿನ ಯಶವಂತಪುರ, ಮಲೇಷ್ಯಾ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಸ್ಥಳಗಳ ಮಹಿಳೆಯರು ಈತನಿಂದ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಆರೋಪಿಯ ವಿರುದ್ಧ ಹೆಚ್ಚಿನ ತನಿಖೆ ಮುಂದುವರಿದಿದೆ.

ವಿವಾಹ ನಂಬಿಕೆಯ ಹೆಸರಿನಲ್ಲಿ ವಂಚನೆ ಎಸಗುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಪೊಲೀಸರ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News