ತುಮಕೂರು: ಇದು ಹಣದಾಸೆಗೆ ಪಕ್ಕದ ಮನೆ ಅಜ್ಜಿಯನ್ನೆ ಕೊಲೆಗೈದ ಪ್ರಕರಣ, ಒಂದೇ ಒಂದು ತೊಟ್ಟು ರಕ್ತದ ಹನಿ ಈ ಪ್ರಕರಣದ ದಿಕ್ಕನ್ನೇ ಬದಲಿಸಿಬಿಟ್ಟಿದೆ..ಅನ್ ನ್ಯಾಚುರಲ್ ಡೆತ್ ಕೇಸ್ ಮುಗ್ದೇ ಹೋಯ್ತು ಫೈಲ್ ಕ್ಲೋಸ್ ಮಾಡ್ಬೇಕು ಅನ್ನುವಾಗ್ಲೇ ಪೊಲೀಸರಿಗೆ ಆ ಒಂದು ತೊಟ್ಟು ರಕ್ತದ ಹನಿ. ಸೈಲೆಂಟಾಗಿ ನಡೆದ ಕೊಲೆಯ ರಹಸ್ಯವನ್ನ ತೆರೆದಿಟ್ಟಿದೆ. ಕೊಲೆ ಮಾಡಿ ದೋಚಿದ ಹಣದಲ್ಲಿ ಮೊಬೈಲ್, ಹೆಣ್ಣು, ಹೆಂಡ ಅಂತ ಮಜಾ ಮಾಡ್ತಿದ್ದವ ಈಗ ತನ್ನ ತಾಯಿಯೇ ತೋಡಿದ ಖೆಡ್ಡಾದಲ್ಲಿ ತಗ್ಲಾಕ್ಕೊಂಡಿದ್ದಾನೆ.. ಏನಿದು ಘಟನೆ ಅಂದ್ಕೊಂಡ್ರಾ ಸ್ಟೋರಿ ನೋಡಿ.
ಹಣಕ್ಕಾಗಿ ಕಿರಾತಕರು ಏನೆಲ್ಲ ಮಾಡ್ತಾರೆ ಅನ್ನೋದಕ್ಕೆ ಇದು ಒಂದು ಉದಾಹರಣೆ ಎಂದರೆ ತಪ್ಪಾಗಲಾರದು ಕಣ್ರಿ, ಹಂತಕ ಎಷ್ಟೇ ಬುದ್ದಿ ಉಪಯೋಗಿಸಿ ಕ್ರೈಂ ಮಾಡಿದ್ರೂ ಒಂದಲ್ಲಾ ಒಂದು ಎವಿಡೆನ್ಸ್ ಬಿಟ್ಟೋಗಿರ್ತಾನೆ ಎಂಬುದಕ್ಕೆ ಇದೊಂದು ಘಟನೆ ಸಾಕ್ಷಿ.. ಹೌದು ಈ ಫೋಟೋದಲ್ಲಿ ಕಾಣುತ್ತಿರುವ ವೃದ್ಧೆಯ ಹೆಸರು ಪುಟ್ಟೀರಮ್ಮ ಅಂತ ತುಮಕೂರು ಜಿಲ್ಲೆ, ಶಿರಾ ತಾಲೂಕಿನ ದೊಡ್ಡ ಬಾಣಗೆರೆಯ ನಿವಾಸಿ. ಗ್ರಾಮದಲ್ಲಿ ಒಬ್ಬಂಟಿಯಾಗಿಯೇ ಜೀವನ ನಡೆಸುತ್ತಿದ್ರು. ಆದ್ರೆ ಅಕ್ಟೋಬರ್ 21 ರಂದು ಸಾವನ್ನಪ್ಪಿದ್ರು. ಮೊದಲೇ ವೃದ್ಧೆ ಮನೆಯಲ್ಲಿ ಬೇರೆ ಯಾರು ಇಲ್ಲ, ಹಾಗಾಗಿ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿರ್ಬೇಕು ಅಂತ ಊರಿನವರು ಅಕ್ಕಪಕ್ಕದ ಮನೆಯವರು ಸುಮ್ಮನಾಗಿದ್ರು.
ಈ ನಡುವೆ ಸ್ಥಳಕ್ಕೆ ಬಂದಿದ್ದ ಪಟ್ಟನಾಯಕನಹಳ್ಳಿ ಪೊಲೀಸರು ಕ್ರೈಂ ಸೀನನ್ನ ಡೀಟೇಲಾಗಿ ನೋಡಿದ್ರು ಎಲ್ಲೂ ಯಾವ ಹೇಳಿಕೊಳ್ಳುವಂತ ಕ್ರೈಂ ಎವಿಡೆನ್ಸ್ ಸಿಕ್ಕಿರ್ಲಿಲ್ಲ, ಇದೊಂದು ಯುಡಿಆರ್ ಕೇಸ್ ಎಂದು ಫೈಲ್ ಕ್ಲೋಸ್ ಮಾಡೋಕೆ ಮುಂದಾದ ಪೊಲೀಸ್ರಿಗೆ ಅದ್ಯಾಕೋ ಬಾಡಿಯನ್ನ ರಿ ಇನ್ವೆಸ್ಟಗೇಟ್ ಮಾಡ್ಬೇಕು ಅನ್ನಿಸಿತ್ತು.ಅಲ್ಲಿಯವರೆಗೂ ಯುಡಿಆರ್ ಎನ್ನುತ್ತಿದ್ದ ಪೊಲೀಸರು ಅದೊಂದು ರಕ್ತದ ಹನಿ ಹಾಗೂ ಆ ಹನಿ ಇದ್ದ ಜಾಗವನ್ನ ನೋಡಿ ಇದು ಪಕ್ಕ ಮರ್ಡರ್ ಎಂಬ ನಿರ್ಧಾಕ್ಕೆ ಬಂದ್ದರು..ಯಾಕಂದ್ರೆ ಆ ವೃದ್ಧೆಯ ಕಿವಿಯಲ್ಲಿ ರಕ್ತದ ಹನಿ ಇತ್ತು. ಸಾಮಾನ್ಯವಾಗಿ ಮೃತ ಪಟ್ಟ ವ್ಯಕ್ತಿಯ ಕಿವಿ, ಬಾಯಿ ಅಥವಾ ಮೂಗಿನಲ್ಲಿ ರಕ್ತ ಬಂದಿದ್ದರೆ ಉಸಿರು ಕಟ್ಟಿ ಸತ್ತಿದ್ದಾರೆ ಅಂತ ಅಥವಾ ಯಾರೋ ಉಸಿರು ನಿಲ್ಲಿಸಿದ್ದಾರೆ ಎಂಬ ನಿರ್ಧಾರಕ್ಕೆ ಪೊಲೀಸರು ಬರ್ತಾರೆ. ಈ ಅನುಮಾನದಲ್ಲೇ ಹೊರಟ ಪೊಲೀಸರಿಗೆ ಅಜ್ಜಿದು ಕೊಲೆ ಎಂಬುದು ಗೊತ್ತಾಗಿತ್ತು. ಆದ್ರೆ ಕೊಲೆ ಮಾಡಿದವರು ಯಾರು ಎಂಬುದೇ ಗೊತ್ತಾಗಿರ್ಲಿಲ್ಲ.ಆದರೂ ಇಂತಹ ಜೀರೋ ಲೀಡ್ಸ್ ನಲ್ಲಿ ತನಿಖೆಗೆ ಇಳಿದ ಪೋಲೀಸರಿಗೆ ಫಸ್ಟ್ ಸಸ್ಪೆಕ್ಟಾಗಿ ಇದೇ ಶ್ರೀಧರ ಸಿಕ್ಕಿದ್ದ, ಈ ಶ್ರೀಧರ ಪುಟ್ಟೀರಮ್ಮನ ದೂರದ ಸಂಬಂಧಿ, ಜೊತೆಗೆ ಪಕ್ಕದ ಮನೆಯವನೇ ಆಗಿದ್ದ.
ಇದನ್ನೂ ಓದಿ: ಡೇಟಿಂಗ್ ಆ್ಯಪ್ ಬಳಸುವ ಮುನ್ನ ಎಚ್ಚರ... ಎಚ್ಚರ..! ವ್ಯಕ್ತಿಗೆ ಬರೋಬ್ಬರಿ ₹1.29 ಕೋಟಿ ವಂಚನೆ
ಹಾಗಾಗಿ ಅಕ್ಕ ಪಕ್ಕದ ಮನೆಯಲ್ಲಿದ ಈತ ಕಾಣೆಯಾಗಿದ್ದನ್ನು ಗಮನಿಸಿ, ನಗರದಲ್ಲಿ ಕೊನೆಗೆ ಸಿಸಿ ಕ್ಯಾಮೆರಾ ನೋಡಿದ್ದ ಪೋಲೀಸರು ಶ್ರೀಧರನ ಚಲನವನಗಳನ್ನ ಗಮನಸಿದ್ರು. ಶ್ರೀಧರ ಪಕ್ಕದ ಮನೆಯವನೇ ಆಗಿದ್ರಿಂದ ಸಿಸಿ ಕ್ಯಾಮೆರದ ದೃಶ್ಯಗಳು ಅಷ್ಟೋಂದು ಇಂಪಾರ್ಟೆಂಟ್ ಅನ್ನಿಸಿರ್ಲಿಲ್ಲ ಪೊಲೀಸರಿಗೆ. ಆದ್ರೆ, ಘಟನೆ ನಡೆದ ದಿನ ಶ್ರೀಧರ ಊರಲ್ಲಿ ಇಲ್ಲದೇ ಇದ್ದದ್ದು ಪೊಲೀಸರಿಗೆ ಪಕ್ಕಾ ಡೌಟ್ ಬಂದಿತ್ತು. ಅಷ್ಟೊತ್ತಿಗೆ ಊರು ಬಿಟ್ಟಿದ್ದ ಶ್ರೀಧರ ಅಜ್ಜಿಯ ಕೊರಳಲ್ಲಿದ್ದ 55 ಗ್ರಾಂ ತೂಕದ ಚಿನ್ನ ಮಾರಿ 90 ಸಾವಿರದ ಮೊಬೈಲ್ ಖರೀದಿಸಿ, ಹೆಣ್ಣು ಹೆಂಡ ಅಂತ ತಿಂದು ತೇಗಿದ್ದ. ಇನ್ನು ಇವನನ್ನ ಹಿಡಿಯಲೇಬೇಕಂತ ಹೊರಟ ಪೊಲೀಸರು ಶ್ರೀಧರನ ತಾಯಿಯಿಂದಲೇ ಕರೆ ಮಾಡಿಸಿ ಅವನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಒಟ್ಟಾರೆ ಚಾಣಾಕ್ಷ ಪೊಲೀಸರ ಸಣ್ಣ ಅನುಮಾನದಿಂದ ಕೊಲೆ ಮಾಡಿ ಹಾಯಾಗಿ ಹೆಣ್ಣು ಹೆಂಡ ಅಂತೆಲ್ಲಾ ಮಜಾ ಮಾಡುತ್ತಿದ್ದ ಕಿಲ್ಲರ್ ಶ್ರೀಧರ ಅರೆಸ್ಟ್ ಆಗಿದ್ದಾನೆ. ಅಲ್ಲದೇ, ಇವನು ಈಗಾಗಲೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾಮನ್ ಗಿರಾಕಿಯಾಗಿದ್ದಾನೆ ಎಂಬುದ ಗೊತ್ತಾಗಿದೆ. ಅದೇನೆ ಇರಲಿ ಎಣ್ಣೆ ಹೆಂಡ ವೇಶ್ಯೆಯರ ಸಹವಾಸ ಅಂತ ಹೋಗಿ ಮೊಮ್ಮಗನ ಪ್ರೀತಿ ತೋರಿದ ಅಜ್ಜಿಯನ್ನೇ ಕೊಂದವನಿಗೆ ಈಗ ಜೈಲು ವಾಸ ಅನುಭವಿಸುವಂತಾಗಿದೆ.
ವರದಿ: ಮಂಜುನಾಥ್ ಜೀ಼ ಕನ್ನಡ ನ್ಯೂಸ್
ತುಮಕೂರು









