ಸಹಕೈದಿಗಳ ಮೇಲೆ ನಟ ದರ್ಶನ್ ಹಲ್ಲೆ ವಿಚಾರಕ್ಕೆ ಬಿಗ್ ಟ್ವಿಸ್ಟ್..! ತನಿಖೆ ವೇಳೆ ಅಚ್ಚರಿ ವಿಚಾರ ಬಹಿರಂಗ

Darshan jail controversy : ನಟ ದರ್ಶನ್ ನಿಂದ ಬ್ಯಾರಕ್ ನಲ್ಲಿದ್ದವರ ಮೇಲೆ ಹಲ್ಲೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದರ್ಶನ್ ಕಾಲಿಂದ ಒದ್ದಿದ್ದಾರಾ ಇಲ್ವಾ ಅಂತಾ ಪ್ರಾಥಮಿಕ ತನಿಖೆಯನ್ನೇ ನಡೆಸಲಾಗಿತ್ತು. ಮೂರು ಪಾಳಿಯಲ್ಲಿದ್ದ ಭದ್ರತಾ ಸಿಬ್ಬಂದಿಯನ್ನೂ ವಿಚಾರಣೆ ಮಾಡಲಾಗಿತ್ರು. ಆದ್ರೀಗ ವಿಚಾರಣೆ ವೇಳೆ ಸಿಬ್ಬಂದಿ ಕೊಟ್ಟ ಹೇಳಿಕೆ ಬೇರೆಯಾಗಿದೆ. ಇದರ ಜೊತೆಗೆ ಜೈಲಿನ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಧನ್ವೀರ್ ಮೊಬೈಲ್ ವರದಿ ಬಂದಿದ್ದು, ಅದ್ರಲ್ಲಿ ಏನೇನಿದೆ ಅನ್ನೋದ್ರ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

Written by - Krishna N K | Last Updated : Dec 10, 2025, 07:46 PM IST
    • ಗಲಾಟೆ ನಡೆದಿಲ್ಲ ಎಂದು ರಿಪೋರ್ಟ್ ಕೊಟ್ಟ ಅಂಶುಕುಮಾರ್
    • ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪ್ರಕರಣ
    • ಪೊಲೀಸರ ಕೈ ಸೇರಿದ ಧನ್ವೀರ್ ಮೊಬೈಲ್ ರಿಟ್ರೀವ್ ವರದಿ
ಸಹಕೈದಿಗಳ ಮೇಲೆ ನಟ ದರ್ಶನ್ ಹಲ್ಲೆ ವಿಚಾರಕ್ಕೆ ಬಿಗ್ ಟ್ವಿಸ್ಟ್..! ತನಿಖೆ ವೇಳೆ ಅಚ್ಚರಿ ವಿಚಾರ ಬಹಿರಂಗ

Actor Darshan case : ಸೆಂಟ್ರಲ್‌ಜೈಲ್ ಪರಪ್ಪನ ಅಗ್ರಹಾರದಲ್ಲಿರೋ ನಟ ದರ್ಶನ್ ಒಂದಿಲ್ಲೊಂದು ಘಟನೆಗಳಿಂದ ಸುದ್ದಿಯಾಗುತ್ತಲೇ ಇದ್ದಾರೆ. ಈ ನಡುವೆ ಸಹ ಕೈದಿಗಳಿಗೆ ನಟ ದರ್ಶನ್ ಒದ್ದು, ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಿರುವಾಗ ಜೈಲಿನ ಸೂಪರ್ಡೆಂಟ್ ಎಸ್ ಪಿ ಅಂಶುಕುಮಾರ್ ಘಟನೆಯ ಸತ್ಯಾಸತ್ಯತೆ ಬಗ್ಗೆ ತಿಳಿಯಲು ತನಿಖೆ ನಡೆಸಿದ್ದರು. ಸದ್ಯ ತನಿಖಾ ಪ್ರಾಥಮಿಕ ರಿಪೋರ್ಟ್ ಕಾರಾಗೃಹ ಇಲಾಖೆ ಮುಖ್ಯಸ್ಥ ದಯಾನಂದ್ ರಿಗೆ ಸಲ್ಲಿಕೆ ಮಾಡಿದ್ದಾರೆ.

Add Zee News as a Preferred Source

ಮಾಧ್ಯಮಗಳಲ್ಲಿ ವರದಿ ಬಂದ ಬೆನ್ನಲ್ಲೇ ದರ್ಶನ್ ಬ್ಯಾರಕ್ ಬಳಿ ಭದ್ರತೆಗಿದ್ದವರ ವಿಚಾರಣೆ ನಡೆಸಲಾಗಿತ್ತು. ಮೂರು ಪಾಳಿಯಲ್ಲಿರೋ ಆರು ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗಿತ್ತು. ಈ ವೇಳೆ ಸಿಬ್ಬಂದಿ, ನಾವು ಭದ್ರತೆಗಿದ್ದ ವೇಳೆ ಯಾವುದೇ ಗಲಾಟೆ, ಹಲ್ಲೆ ಏನೂ ನಡೆದಿಲ್ಲ. ನಮ್ಮ ಗಮನಕ್ಕೂ ಇಲ್ಲ. ಗಲಾಟೆ ಆದ ಬಗ್ಗೆಯೂ ನಮಗೆ ಯಾವುದೇ ದೂರನ್ನ ಬ್ಯಾರಕ್ ನಲ್ಲಿದ್ದವ್ರು ಕೊಟ್ಟಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅಲ್ದೆ ದರ್ಶನ್ ಮತ್ತು ಟೀಂ ನಾರ್ಮಲ್ ರೀತಿಯೇ ಬ್ಯಾರಕ್ ನಲ್ಲಿ ಇದ್ದಾರೆ. 

ಇದನ್ನೂ ಓದಿ: ಐಷಾರಾಮಿ ಕಾರು, ಭವ್ಯ ಬಂಗಲೆ.. ಪ್ರೊಡಕ್ಷನ್‌ ಹೌಸ್ ಒಡತಿ.. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೆಸರ

ದರ್ಶನ್ ಬ್ಯಾರಕ್ ನಲ್ಲಿದ್ದ ಜೊತೆಗಾರರು ಸಹ ಸಿಬ್ಬಂದಿ ಬಳಿ ತುಟಿಕ್ ಪಿಟಿಕ್ ಅಂತಿಲ್ಲ. ಡೆವಿಲ್ ಸಿನಿಮಾ ಸಕ್ಸಸ್ ಬಗ್ಗೆ ತಮ್ಮ ಬಳಿಕ ದರ್ಶನ್ ಮಾತಾಡಿದ್ರು ಅಷ್ಟೇ ಎಂದು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಈ ಮೂಲಕ ಸಿಬ್ಬಂದಿ ಹೇಳಿಕೆ ಆಧರಿಸಿ ನಟ ದರ್ಶನ್ ಬ್ಯಾರಕ್ ನಲ್ಲಿ ಯಾವುದೇ ಗಲಾಟೆ ಆಗಿಲ್ಲ ಎಂದು ಎಡಿಜಿಪಿ ದಯಾನಂದ್ ರಿಗೆ ಅಂಶುಕುಮಾರ್ ಪ್ರಾಥಮಿಕ ವರದಿ ಕೊಟ್ಟಿದ್ದಾರೆ. ಮತ್ತೊಂದು ಕಡೆ ಕೋರ್ಟ್ ಆದೇಶದ ಹಿನ್ನೆಲೆ ದರ್ಶನ್ ಬ್ಯಾರಕ್ ನಲ್ಲಿ ಟಿವಿ ಹಾಗೂ ಸಿಸಿಟಿವಿ ಅಳವಡಿಸಲಾಗಿದೆ. ಹೀಗಾಗಿ ದಾಸ ಸಿಸಿಟಿವಿ ಕಣ್ಗಾವಲಿನಲ್ಲಿ ಡೆವಿಲ್ ಸಿನಿಮಾದ ಅಪ್ಡೇಟ್ ಗಳನ್ನು ನೋಡಬಹುದಾಗಿದೆ. 

ಮತ್ತೊಂದು ಕಡೆ  ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ವಿಡಿಯೋ ವೈರಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧನ್ವೀರ್ ಮೊಬೈಲ್ ರಿಟ್ರೀವ್ ವರದಿ ಪೊಲೀಸರ ಕೈ ಸೇರಿದೆ.  ಇದರಲ್ಲಿ ಡೇಟಾವೇ ಇಲ್ಲದ ಮೊಬೈಲ್ ಅನ್ನೂ ಕೊಟ್ಟು ನಟ ಧನ್ವೀರ್ ಯಾಮಾರಿಸಿದ್ದಾರೆ ಎನ್ನಲಾಗಿದೆ. ಸೈಬರ್ ಸೆಲ್ ರಿಪೋರ್ಟ್ ನಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಎಫ್ ಎಸ್ ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಇದನ್ನೂ ಓದಿ: ಸುಂದರಿಯಂತ ಹೆಂಡತಿಯಿದ್ದರೂ ಮಗಳ ವಯಸ್ಸಿನ ನಟಿಯ ಹಿಂದೆ ಬಿದ್ದಿದ್ದ ಧರ್ಮೇಂದ್ರ! ಗಂಡನ ರಹಸ್ಯ ತಿಳಿದ

ಇನ್ನೂ ಇದೇ ಪ್ರಕರಣದಲ್ಲಿ ವಿಲ್ಸನ್ ಗಾರ್ಡನ್ ನಾಗನ ವಿಚಾರಣೆಯನ್ನು ಸಹ ಪೊಲೀಸರು ನಡೆಸಿದ್ದಾರೆ. ವಿಡಿಯೋ ವೈರಲ್ ಮಾಡಿದ್ದ‌ ಕೋಳಿ‌ಮಂಜನ ವಿಚಾರಣೆಯಲ್ಲಿ ಆತ ವಿಲ್ಸನ್ ಗಾರ್ಡನ್ ನಾಗನ ಹೆಸರು ಹೇಳಿದ್ದ. ಈ ಕಾರಣಕ್ಕಾಗಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದ ವಿಲ್ಸನ್ ಗಾರ್ಡನ್ ನಾಗನನ್ನು ಅಲ್ಲಿಯೇ ಹೋಗಿ ಪರಪ್ಪನ ಅಗ್ರಹಾರ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಅಸಲಿಗೆ ವಿಡಿಯೋ ವೈರಲ್ ಮಾಡಿದವರು ಯಾರು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.  ಸದ್ಯ ಜೈಲಿನಿಂದ ಧನ್ವೀರ್ ಗೆ ವಿಡಿಯೋ ಬಂದಿದ್ದು ಧನ್ವೀರ್ ವೈರಲ್ ಮಾಡಿದ್ದಾರೆ ಎನ್ನುವುದು ಈ ವರೆಗಿನ ತನಿಖೆಯಿಂದ ತಿಳಿದುಬಂದಿದ್ದು,ತನಿಖೆಯನ್ನು ಮುಂದುವರೆದಿದೆ. ಅದೆನೇ ಹೇಳಿ, ಬಾಕ್ಸ್ ಆಫೀಸ್ ಸುಲ್ತಾನ ಎನ್ನಿಸಿಕೊಂಡಿದ್ದ ದರ್ಶನ್ ಜೈಲಲ್ಲಿ ತಮ್ಮ ಮೂವಿ ಅಪ್ಡೇಟ್ ನೋಡಕಬೇಕಾದ ಪರಿಸ್ಥಿತಿ ಬಂದಿದ್ದು ನಿಜವಾಗಿಯೂ ಶೋಚನೀಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News