)
Gadag Crime: ಬಿಯರ್ ಬಾಟಲ್, ಚಾಕುವಿನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗದಗ ನಗರದ ಮುಳಗುಂದ ನಾಕಾ ಬಳಿಯ ದುರ್ಗಾ ಬಾರ್ ಬಳಿ ನಡೆದಿದೆ. ಮುಷ್ತಾಕ್ ಹುಸೇನಸಾಬ ಮೂಲಿಮನಿ (24), ಅಭಿಷೇಕ ಚಂದ್ರಕಾಂತ ಹರ್ಲಾಪುರ (20), ಸಾಹಿಲ್ ಹುಸೇನಸಾಬ ಹಣಗಿ -(20) ಗಲಾಟೆ ಮಾಡಿಕೊಂಡ ಯುವಕರು. ಅರುಣ ಕೊಟ್ನೇಕಲ್ (28) ಗಾಯಗೊಂಡ ಯುವಕ ಎಂದು ತಿಳಿದುಬಂದಿದೆ.
ಸಿನಿಮೀಯ ರೀತಿಯಲ್ಲಿ ಮೂವರು ಪುಡಿ ರೌಡಿಗಳು ಯುವಕನ ಮೇಲೆ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಹತ್ತಾರು ಜನರ ಎದುರಲ್ಲೇ ತಲ್ವಾರ್, ಚಾ*ಕು, ಬಿಯರ್ ಬಾಟಲನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಘಟನೆಯ ಭಯಾನಕ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಹಳೇ ದ್ವೇಷದ ಹಿನ್ನಲೆಯಲ್ಲಿ ಅರುಣಕುಮಾರ್ ಹೋಟೆಲ್ವೊಂದರಲ್ಲಿ ಊಟಕ್ಕೆ ಕುಳಿತಿದ್ದಾಗ ಏಕಾಏಕಿ ಹೋಟೆಲ್ಗೆ ನುಗ್ಗಿದ ಆರೋಪಿಗಳು ಅರುಣ್ ಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ. ಯುವಕನ ಮೇಲೆ ಅಟ್ಯಾಕ್ ಮಾಡಿರುವ ಮೂವರು ಆತನ ಮೇಲೆ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು, ಹಲ್ಲೆ ಮಾಡಿದ್ದಾರೆ. ಯುವಕನ ಕತ್ತು, ಮುಖ, ತಲೆ, ಹೊಟ್ಟೆ, ಎದೆ, ಕೈ ಸೇರಿ ದೇಹದ ಹಲವು ಭಾಗಕ್ಕೆ ಚಾ*ಕು ಇರಿಯಲಾಗಿದೆ. ಸದ್ಯ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ ಅರುಣಕುಮಾರ್ನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ.
ಅಭಿಷೇಕ್, ಸಾಯಿಲ್ ಹಾಗೂ ಮುಸ್ತಾಕ್ ಎಂಬ ಯುವಕರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಇದನ್ನೂ ಓದಿ- ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಡ್ರಗ್ಸ್ ಕಿಂಗ್ ಪಿನ್..!
ಘಟನಾ ಸ್ಥಳಕ್ಕೆ ಗದಗ ಡಿವೈಎಸ್ಪಿ ಮುರ್ತುಜ್ ಖಾದ್ರಿ, ಸಿಪಿಐ ಜೂಲಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.