ಬೆಂಗಳೂರು : ಈ ಪ್ರೀತಿ ಅಂದ್ರೆನೇ ಹೀಗೆ. ಒಬ್ಬರನ್ನು ಟ್ರೂ ಲವ್ ಮಾಡಿದ್ರೆ ಅವರ ಜೊತೆನೆ ಜೀವನ ಮಾಡಬೇಕು ಎಂಬ ಗುಂಗು ಹಿಡಿಸಿಬಿಡುತ್ತೆ. ಹೀಗೆ ವಿದೇಶದಲ್ಲಿ ಕೆಲಸ ಮಾಡ್ಕೊಂಡು ಕೊಲೀಗ್ ಒಬ್ಬನನ್ನು ಪ್ರೀತಿಸಿದ್ದ ಯುವತಿ ಆತನನ್ನೇ ಮದುವೆಯಾಗಬೇಕು ಅಂತಾ ನಿರ್ಧರಿಸಿದ್ದಳು. ಇದಕ್ಕಾಗಿ ಮನೆಯವರನ್ನೆಲ್ಲಾ ಒಪ್ಪಿಸಿ ಮದುವೆ ಸಹ ಫಿಕ್ಸ್ ಆಗಿತ್ತು. ಆದರೆ ಪ್ರೀತಿಸಿದ ಯುವಕ ಮಾತ್ರ ಮದುವೆ ದಿನವೇ ಯುವತಿಯ ಕನಸಿಗೆ ಕೊಳ್ಳಿ ಇಟ್ಟುಬಿಟ್ಟಿದ್ದಾನೆ.
ಯೆಸ್.. ಈ ಫೋಟೋದಲ್ಲಿ ಕಾಣಿಸ್ತಿದ್ದನಲ್ಲ ಈತನ ಹೆಸರು ಪ್ರೇಮ್ ಚಂದ್ ಪವಾನಿ ಅಂತಾ. ಈತನೇ ಮದುವೆ ಮನೆಯಿಂದ ಎಸ್ಕೇಪ್ ಆಗಿರುವ ಮಹಾಶಯ. ಮೈಸೂರಿನಲ್ಲಿ ಎಂಎಸ್ ಓದುತ್ತಿದ್ದಾಗ ಯುವತಿಯ ಜೊತೆ ಈತನಿಗೆ ಸ್ನೇಹ ಬೆಳಸಿದ್ದ. ಓದು ಮುಗಿದ ಮೇಲೆ ಮುಂದೆ ಪ್ಯಾರಿಸ್ ನಲ್ಲಿ ಯುವತಿ ಜೊತೆ ಕೆಲಸ ಮಾಡ್ತಿದ್ದಾಗ ಪ್ರಪೋಸ್ ಮಾಡಿದ್ದ. ಯುವತಿ ಒಪ್ಪಿದ್ದರಿಂದ ಲವ್ ಬರ್ಡ್ಸ್ ಗಳಂತೆ ಒಡಾಡಿಕೊಂಡಿದ್ರುಮ ಲವ್ ಮದುವೆ ಹಂತಕ್ಕೆ ಬಂದಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ರೆ 3 ದಿನಗಳ ಹಿಂದೆ ಅಂದ್ರೆ 2 ತಾರೀಖು ಪ್ರೇಮ್ ಚಂದ್ ಗೂ ಯುವತಿಗೂ ಮದುವೆಯಾಗಬೇಕಿತ್ತು. ಆದರೆ ವರದಕ್ಷಿಣೆ ಎಂಬ ಪೆಡಂಭೂತವನ್ನು ತಲೆಗೆ ಏರಿಸಿಕೊಂಡು ಈ ಭೂಪ, ಮನೆಯವರ ಮಾತು ಕೇಳಿ ತಾಳಿ ಕಟ್ಟುವ ದಿನವೇ ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಯುವತಿಗೆ ಕೈಕೊಟ್ಟು ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ:ಹೊಸದಾಗಿ ಮದುವೆಯಾದ ಯುವಕ ವಿಧಿಯಾಟಕ್ಕೆ ಬಲಿ
ಹೌದು... ಮಗಳ ಮದುವೆಗೆ ಒಪ್ಪಿಗೆ ಸೂಚಿಸಿದ್ದ ತಂದೆ ಅದ್ಧೂರಿಯಾಗಿ ಮದುವೆ ಮಾಡಲು ಗಾಂಧಿನಗರದ ನಂದಿ ಕ್ಲಬ್ ಎಂಬ ಚೌಟ್ರಿ ಬುಕ್ ಮಾಡಿದ್ದರು. ಆದರೆ ಮದುವೆ ಹಿಂದಿನ ದಿನ ಪ್ರೇಮ್ ಚಂದ್ ಕುಟುಂಬಸ್ಥರ ಡಿಮ್ಯಾಂಡ್ ಶುರುವಾಗಿಬಿಟ್ಟಿತ್ತು. ಯುವತಿ ತಂದೆ ಬಳಿ ಬಂದ ವರನ ತಂದೆ ಶಿವಕುಮಾರ್ ಪವಾನಿ, ತಾಯಿ ರಾಧ, ಸಂಬಂಧಿ ಮಂಜು, ಭರತ್ ಎಂಬುವವರು ವರದಕ್ಷಿಣೆಯಾಗಿ 50 ಲಕ್ಷ ನಗದು, ಅರ್ಧ ಕೆಜಿ ಚಿನ್ನ, ಬೆಂಜ್ ಕಾರು ಕೂಡುವಂತೆ ಕೇಳಿದ್ರು. ಆದರೆ ಯುವತಿಯ ತಂದೆ ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಅಷ್ಟು ಕೊಡಲು ಆಗಲ್ಲ. ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದಿದ್ರು. ಆದರೆ ಸುಮ್ಮನಾಗದ ಧನಪಿಶಾಚಿಗಳು ರಾತ್ರೋರಾತ್ರಿ ವರ ಪ್ರೇಮ್ ಚಂದ್ ನನ್ನು ಜೊತೆಗೆ ಕರೆದುಕೊಂಡು ಗಂಟುಮೂಟೆ ಕಟ್ಟಿಕೊಂಡು ಚೌಟ್ರಿಯಿಂದಲೇ ಎಸ್ಕೇಪ್ ಆಗಿದ್ದಾರೆ. ಬೆಳಗ್ಗೆ ಮದುವೆ ಶಾಸ್ತ್ರಕ್ಕೆ ವರನ ಕೊಠಡಿಗೆ ವರನ ಕರೆಯಲು ಹೋದಾಗ ವರನ ಜೊತೆ ಆತನ ಕುಟುಂಬಸ್ಥರು ಎಸ್ಕೇಪ್ ಆಗಿರೋದು ಗೊತ್ತಾಗಿದೆ.
ಇದರಿಂದ ಶಾಕ್ ಗೆ ಒಳಗಾದ ಯುವತಿ ತಂದೆ ವರದಕ್ಷಿಣೆಗೆ ಡಿಮ್ಯಾಂಡ್ ಮಾಡಿ ಮದುವೆ ಮನೆಯಿಂದ ಪರಾರಿಯಾಗಿರುವ ವರ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನೂ ಈ ಪ್ರೇಮ್ ಚಂದ್ ಯುವತಿಯನ್ನ ಮದುವೆಗೂ ಮುನ್ನ ಲೈಂಗಿಕವಾಗಿ ಬಳಸಿಕೊಂಡ ಆರೋಪ ಸಹ ಇದ್ದು, ಈ ಬಗ್ಗೆಯೂ ಯುವತಿ ತಂದೆ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಉಪ್ಪಾರಪೇಟೆ ಪೊಲೀಸರು ಕೇಸ್ ಸಂಬಂಧ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಅದೆನೇ ಹೇಳಿ, ವಯಸ್ಸಿಗೆ ಬಂದ ಮಗಳ ಮದುವೆ ಮಾಡೋದು ತಂದೆಯ ದೊಡ್ಡ ಕನಸು. ಜೀವಮಾನವಿಡೀ ಕಷ್ಟಪಟ್ಟು ದುಡಿದ ಹಣದಲ್ಲಿ ಅದ್ದೂರಿಯಾಗಿ ಮದುವೆ ಮಾಡಲು ಮುಂದಾಗಿದ್ದ ತಂದೆ ವರನ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಮತ್ತೊಂದು ಕಡೇ ಯುವತಿ ಪ್ರೀತಿಸಿದ ತಪ್ಪಿಗೆ ಮೋಸ ಹೋಗಿ ತನಗಾದ ಅನ್ಯಾಯ ನೆನೆದು ಸಾಕಷ್ಟು ನೋವಿನಲ್ಲಿದ್ದಾಳೆ. ಸದ್ಯ ಈ ರೀತಿ ಮೋಸ ಮಾಡಿ ಎಸ್ಕೇಪ್ ಆಗಿರುವ ವರ ಹಾಗೂ ಆತನ ಕುಟುಂಬಕ್ಕೆ ಕಠಿಣಾತಿಕಠಿಣ ಶಿಕ್ಷೆಯಾಗಬೇಕು ಎಂಬುದೇ ನಾಗರೀಕ ಸಮಾಜದ ಆಗ್ರಹವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









