Amruthali Murder : ಅವರೆಲ್ಲಾ ಸದಾ ಜೊತೆಯಲ್ಲೆ ಇರುತ್ತಿದ್ದ ಗೆಳೆಯರು. ಒಟ್ಟಿಗೆ ಕೆಲಸ ಮಾಡುತ್ತಾ ಸಂಜೆಯಾದ್ರೆ ಪಾರ್ಟಿ ಮಾಡಿ ಜೀವನ ಕಳೆಯುತ್ತಿದ್ರು. ಅದ್ರೆ ಅದ್ಯಾವುದೊ ಸಣ್ಣ ವಿಚಾರಕ್ಕೆ ಅವರವರ ನಡುವೆ ಗಲಾಟೆಯಾಗಿ ಓರ್ವನ ಹತ್ಯೆಯಲ್ಲಿ ಕೊನೆಯಾಗಿದೆ. ಹಾಗಾದ್ರೆ ಆ ಗೆಳೆಯರ ನಡುವೆ ಆಗಿದ್ದೇನು ಅಂತೀರಾ ಈ ಸ್ಟೋರಿ ನೋಡಿ.

ಬೆಂಗಳೂರು : ಎಣ್ಣೆ ಒಳಗೆ ಹೋಯ್ತು ಅಂದ್ರೆ ಸ್ನೇಹಿತ ಕೂಡ ದುಷ್ಮನ್ ಆಗಿ ಬಿಡ್ತಾನೆ. ಮದ್ಯದ ನಶೆಯಲ್ಲಿ ಬಾಯಿ ಚಪಲ ತೀರಿಸಿಕೊಳ್ಳೊ ಕೆಲ ಅಸಾಮಿಗಳು ನಂತರ ಗಲಾಟೆ ಮಾಡ್ಕೊಂಡು ಹೊಡೆದಾಡಿಕೊಳ್ತಿರ್ತಾರೆ. ಹೀಗೆ ಕುಡಿದ ಅಮಲಿನಲ್ಲಿ ಎದುರಿಗಿದ್ದ ಪರಿಚಿತ ವ್ಯಕ್ತಿಯ ಮೇಲೆ ಗಲಾಟೆ ಮಾಡಿದ ಸ್ನೇಹಿತರು ನಂತರ ಆತನ ತಲೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹೀಗೆ ಪರಿಚಿತ ವ್ಯಕ್ತಿಗಳಿಂದ ಕೊಲೆಯಾದ ವ್ಯಕ್ತಿ ಈತನೇ 35 ವರ್ಷದ ಆಂಜಿನಪ್ಪ.
ಇದೇ ಜೂನ್ 23 ರಂದು ಆಂಜನೇಯ ಕೆಲಸ ಮುಗಿಸಿ ಬರ್ತಿದ್ದ ಈ ವೇಳೆ ಪರಿಚಿತ ವ್ಯಕ್ತಿಗಳಾದ ದರ್ಶನ್ ಮತ್ತು ಪ್ರೇಮ್ ಹಾಗೂ ಓರ್ವ ಅಪ್ರಾಪ್ತ ಬಾಲಕ ಕಣ್ಣಿಗೆ ಕಂಡಿದ್ದಾರೆ. ನಂತರ ಮೂವರು ಸ್ನೇಹಿತರು ಎಣ್ಣೆ ಹೊಡೆದು ಮನೆ ಕಡೆ ಹೊರಡಲು ತಯಾರಿ ನಡೆಸಿದ್ದಾರೆ. ಈ ವೇಳೆ ಆರೋಪಿ ದರ್ಶನ್ ಗೆ ಈ ಹಿಂದೆ ಆಂಜಿನಪ್ಪ ಗಲಾಟೆ ಮಾಡಿದ ಹಳೇ ನೆನಪು ಬಂದಿದೆ. ಈ ವೇಳೆ ಕಿರಿಕ್ ತೆಗೆದ ದರ್ಶನ್ ಮತ್ತು ಸ್ನೇಹಿತರು ದೊಣ್ಣೆಯಿಂದ ಆಂಜಿನಪ್ಪನ ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ.
ಹಲ್ಲೆ ಬಳಿಕ ಆಂಜಿನಪ್ಪ ಮನೆಗೆ ಹೊರಟಿದ್ದು, ಮಾರ್ಗ ಮಧ್ಯೆ ಖಾಲಿ ಜಾಗದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಬಳಿಕ ಅಲ್ಲಿದ್ದ ಕೆಲವು ವ್ಯಕ್ತಿಗಳು ಅಪರಿಚಿತ ವ್ಯಕ್ತಿ ಶವ ಇದೆ ಅಂತಾ ಪೊಲೀಸರಿಗೆ ಪೋನ್ ಮಾಡಿದ್ದಾರೆ. ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿ ಅಸಹಜ ಸಾವು ಅಂತಾ ಕೇಸ್ ದಾಖಲಿಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಭೀಕರ ಹಲ್ಲೆ ಬಗ್ಗೆ ಗೊತ್ತಾಗಿದೆ. ಕೂಡಲೇ ಸುತ್ತಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ, ಸ್ಥಳೀಯರ ವಿಚಾರಣೆ ಮಾಡಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.
ಕೊಲೆ ಬಗ್ಗೆ ತನಿಖೆ ನಡೆಸಿದ ಅಮೃತಹಳ್ಳಿ ಪೊಲೀಸರು ಓರ್ವ ಅಪ್ರಾಪ್ತ ಸೇರಿದಂತೆ ದರ್ಶನ್ ಮತ್ತು ಪ್ರೇಮ್ ಎಂಬುವರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅದೇನೇ ಇರಲಿ ಮದ್ಯದ ಅಮಲು ತಲೆಗೆ ಏರಿದ್ರೆ ಪರಿಚಿತ ಆಗಲಿ, ಸ್ನೇಹಿತನೇ ಆಗಲಿ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ