)
Bengaluru Crime News: ಪತ್ನಿಯಿಂದ ಕಿರಕುಳ ತಾಳಲಾರದೇ ಬ್ಯಾಂಕ್ ಉದ್ಯೋಗಿಯೊಬ್ಬರು ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. ಗಗನ್ ರಾವ್ ನೇಣಿಗೆ ಶರಣಾದ ಪತಿ.
8 ತಿಂಗಳ ಹಿಂದಷ್ಟೇ ಮೇಘನಾ ಜಾದವ್ ಎಂಬುವರೊಂದಿಗೆ ಗಗನ್ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದ ಗಗನ್ ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಗನ್ ಮೇಲೆ ಮೇಘನಾ ಅನುಮಾನ ಪಡುತ್ತಿದ್ದಳಂತೆ. ಯಾರ ಜೊತೆ ಮಾತನಾಡಿದರೂ ಜಗಳ ಮಾಡುತ್ತಿದ್ದಳಂತೆ. ಇದೇ ವಿಚಾರಕ್ಕೆ ಮನೆಯಲ್ಲಿ ಹಲವು ಬಾರಿ ಗಲಾಟೆ ಆಗಿತ್ತು. ಬಳಿಕ ಕೋಪಿಸಿಕೊಂಡು ತವರಿಗೆ ಹೋಗಿದ್ದ ಮೇಘನಾ ಇತ್ತೀಚೆಗಷ್ಟೇ ಗಂಡನ ಮನೆಗೆ ವಾಪಸ್ ಬಂದಿದ್ದಳು. ಈ ವೇಳೆ ಮನೆಯಲ್ಲಿ ನಿಂಬೆಹಣ್ಣು ಇಟ್ಟಿದ್ದರಂತೆ. ಹೀಗಾಗಿ ವಾಮಚಾರ ಮಾಡಿಸಿ ಕಿರುಕುಳ ನೀಡುತ್ತಿದ್ದಳೆಂಬ ಆರೋಪ ಮಾಡಲಾಗಿದೆ.
ಒಮ್ಮೆ ಪೋನ್ನಲ್ಲಿ ಮಾತನಾಡುವಾಗ ಗಂಡನ ಕೈಗೆ ಸಿಕ್ಕಿಬಿದ್ದಿದ್ದಳಂತೆ. ಗಗನ್ ಆಫೀಸ್ ಬಳಿ ಬಂದು ಸಾಕಷ್ಟು ಗಲಾಟೆ ಮಾಡಿ ಹಲ್ಲೆ ಕೂಡ ಮಾಡಿದ್ದಳಂತೆ. ಭಾನುವಾರ (ನವೆಂಬರ್ 10) ರಾತ್ರಿ ಮತ್ತೆ ಗಲಾಟೆ ನಡೆದಿದೆ. ಇದರಿಂದ ಬೇಸತ್ತ ಗಗನ್ ನೇಣಿಗೆ ಶರಣಾಗಿದ್ದಾರೆ. ಸದ್ಯ ಮೃತ ಗಗನ್ ಕುಟುಂಬಸ್ಥರು, ಮೇಘನಾ ವಿರುದ್ಧ ಮಾಟ ಮಂತ್ರ ಮಾಡಿ ಕಿರುಕುಳ ನೀಡಿರುವ ಆರೋಪ ಮಾಡಿದ್ದಾರೆ. ಈ ಬಗ್ಗೆ ಮೃತನ ತಂಗಿ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮೂರು ಮರಿ ಜೊತೆ ತಾಯಿ ಹುಲಿ ಸೆರೆ