)
ಬೆಂಗಳೂರು : ಈ ಪೋಟೋದಲ್ಲಿ ಮುದ್ದಾಗಿ ಕಾಣುವ ಈ ಯುವತಿಯ ಹೆಸರು ವತ್ಸಲ ಇನ್ನೂ 19 ವರ್ಷ. ಬೆಂಗಳೂರು ಹೊರವಲಯ ಹೆಸರುಘಟ್ಟ ರಸ್ತೆಯ ಆಚಾರ್ಯ ಕಾಲೇಜು ವಿಧ್ಯಾರ್ಥಿನಿ, ಪಿಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ನಡೆದಿದೆ.
ಹಾಸನ ಮೂಲದ ಯುವತಿ ಮೃತ ವತ್ಸಲ ಸೋಲದೇವನಹಳ್ಳಿಯ ಆಚಾರ್ಯ ಕಾಲೇಜಿನಲ್ಲಿ ಬಿ ಫಾರ್ಮ್ ಫೈನಲ್ ಇಯರ್ ವ್ಯಾಸಾಂಗ ಮಾಡುತ್ತಿದ್ದರು. ಇನ್ನೂ ಪಿಜಿಯ ಮೂರನೇ ಮಹಡಿಯ ರೂಮ್ ನಲ್ಲಿ ವತ್ಸಲ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನೂ ವತ್ಸಲ ಸೋಲದೇವನಹಳ್ಳಿಯ ಪೆಟಲ್ಸ್ ಗರ್ಲ್ಸ್ ಪಿಜಿಯಲ್ಲಿದ್ದು ಬೆಳಿಗ್ಗೆಯಿಂದ 8 ಪುಟಗಳ ಡೆತ್ ನೋಟ್ ಬರೆದಿದ್ದಾಳೆ. ಡೆತ್ ನೋಟ್ ನಲ್ಲಿ ನನಗೆ ನಿಮ್ಮ ಪ್ರೀತಿಗೆ ಅರ್ಹಳಲ್ಲ ಅಪ್ಪ.. ನೀವು ಕೊಟ್ಟಿರು ಪ್ರೀತಿ ಇನ್ಯಾರಿಂದಲೂ ಕೊಡಲು ಸಾಧ್ಯವಿಲ್ಲ.. ಕೇಳಿದ್ದನ್ನೆಲ್ಲಾ ಕೊಡಿಸಿದ್ದೀರಿ.. ಅಪ್ಪ ನಿಮ್ಮ ಮರ್ಯಾದೆ ತೆಗೆಯುವ ಕೆಲಸ ನಾನು ಮಾಡಿಲ್ಲ.. ಅಪ್ಪ ನಿಮ್ಮ ಪ್ರೀತಿ ಉಳಿಸಿಕೊಳ್ಳುವ ಭಾಗ್ಯ ನನಗಿಲ್ಲ.. ಎಂಬ ಸಾಲುಗಳೊಂದಿಗೆ ಪ್ರಾರಂಭಿಸಿ ನಾನು ಪ್ರೀತಿಸಿದ ಹುಡುಗನಿಗೂ ಮೋಸ ಮಾಡಲು ನನಗೆ ಇಷ್ಟವಾಗುತ್ತಿಲ್ಲ ಹೀಗಾಗಿ ನಾನು ಸಾವಿಗೆ ಶರಣಾಗುತ್ತಿದ್ದೇನೆ ಎಂದು 8 ಪುಟ ಗಳ ಡೆತ್ ನೋಟ್ ಬರೆದಿಟ್ಟು ಇಂದು ಮದ್ಯಾಹ್ನ 2:30ಕ್ಕೆ ಯುವತಿ ಫ್ಯಾನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಮಡಿದ್ದಾಳೆ.
ಒಟ್ಟಾರೆ ಉನ್ನತ ವಿದ್ಯಾಭ್ಯಾಸಕ್ಕೆ ಹಾಸನದಿಂದ ಬೆಂಗಳೂರಿಗೆ ಬಂದು ಪಿಜಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ದುರಂತವೇ ಸರಿ.. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಿಸಿಕೊಂಡು.. ಮೃತದೇಹ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆರವಾನಿಸಿದ್ದಾರೆ.