ಬೆಂಗಳೂರು: ನೀವು ನಿತ್ಯ ರಸ್ತೆಯಲ್ಲಿ ಸಂಚರಿಸುವಾಗ  ಸಿಗ್ನಲ್ ಗಳಲ್ಲಿ ಎಳೆ ಮಕ್ಕಳನ್ನ ಹೊತ್ತುಕೊಂಡು ಕೆಲವು ಹೆಂಗಸರು ಭಿಕ್ಷೆ ಬೇಡುತ್ತಿರುವುದನ್ನು ನೀವು ನೋಡಿರಬಹುದು. ಇದನ್ನ ನೋಡಿ ಎಲ್ಲರಿಗೂ ಬೇಸರವಾಗಿ ಕರಳು ಕಿತ್ತು ಬರುತ್ತೆ. ಕಷ್ಟದಲ್ಲಿದ್ದಾರೆ ಅಂತಾ ಆ ತಾಯಿ ಮಗುಗೆ ಸಹಾಯ ಮಾಡಲು ಒಂದಷ್ಟು ಹಣ ಕೊಟ್ಟು ಸಹಾಯ ಮಾಡುತ್ತೀರಾ. ಆದರೆ ಈ ಸ್ಟೋರಿ ಓದಿದ ಮೇಲೆ ಇನ್ನು ಯಾವತ್ತಿಗೂ ನೀವು ಈ ರೀತಿ ತಾಯಿ ಮಗುಗೆ ಭಿಕ್ಷೆ ನೀಡಲ್ಲ. ಏಕೆಂದರೆ ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರು ಪೊಲೀಸರು ಹಾಗೂ ಸಿಸಿಬಿ ಅಧಿಕಾರಿಗಳ ವಿಶೇಷ ಕಾರ್ಯಾಚರಣೆಯಲ್ಲಿ ನಾವೆಲ್ಲರೂ ಬೆಚ್ಚಿ ಬೀಳಿಸುವ ಬಹು ದೊಡ್ಡ ಮಾಫೀಯಾದ ಕರಾಳತೆ ತೆರೆದುಕೊಂಡಿದೆ.


COMMERCIAL BREAK
SCROLL TO CONTINUE READING

ಜನರ ಅನುಕಂಪವನ್ನು ಬಂಡವಾಳ ಮಾಡಿಕೊಂಡು ರಾಜಧಾನಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಮಕ್ಕಳು ಹಾಗೂ ಮಹಿಳೆಯರು ಸೇರಿ ಒಟ್ಟು 31 ಜನರನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿ ಮಹಿಳಾ ಹಾಗೂ ಮಕ್ಕಳ ಪಾಲನಾ ಮಂದಿರಕ್ಕೆ ಒಪ್ಪಿಸಿದ್ದಾರೆ. ಗಮನಿಸಬೇಕಾದ ಹಾಗೂ ಅಪಾಯಕಾರಿ ಅಂಶವೆಂದರೆ ಪತ್ತೆಯಾದ ಮಕ್ಕಳಲ್ಲಿ ಬಹುತೇಕ ಮಕ್ಕಳ ತಾಯಂದಿರು ಭಿಕ್ಷೆ ಬೇಡುವವರಲ್ಲ. 


ಇದನ್ನೂ ಓದಿ- ಶಿಕ್ಷಕಿ ಬೈದಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಸೂಸೈಡ್


ತನಿಖೆ ವೇಳೆ ಈ ಮಕ್ಕಳನ್ನ ನೆರೆ ರಾಜ್ಯಗಳು, ಬಾಲಮಂದಿರ ಹಾಗೂ ಆಸ್ಪತ್ರೆಯಲ್ಲಿ  ಮಕ್ಕಳನ್ನ ಕದ್ದು ತಂದಿರುವ ಅನುಮಾನ ವ್ಯಕ್ತವಾಗಿದೆ‌. ಇನ್ನು ಭಿಕ್ಷೆ ಬೇಡುವಾಗ ಯಾವ ಮಕ್ಕಳು ಅಳುವುದಿಲ್ಲ ಮಂಪರು ಸ್ಥಿತಿಯಲ್ಲಿರುತ್ತವೆ. ಇದಕ್ಕೆ ಕಾರಣವೇನೂ ಗೊತ್ತಾ.. ಈ ರೀತಿ ಮಂಪರು ಸ್ಥಿತಿಯಲ್ಲಿರುವುದಕ್ಕೆ ಮಕ್ಕಳಿಗೆ  ಅಲ್ಕೊಹಾಲ್ ನೀಡಲಾಗುತ್ತಿದೆ. ಭಿಕ್ಷೆಗೆ ಬರುವ ಮುನ್ನ ಬೆಳ್ಳಂ ಬೆಳಿಗ್ಗೆ ಚೀಪ್  ಅಲ್ಕೊಹಾಲ್ ಕುಡಿಸಿ ಮಲಗಿಸುತ್ತಾರೆ‌. ಯಾಕೆಂದರೆ ಯಾವುದೋ ತಾಯಿ ಹೆತ್ತ ಮಕ್ಕಳು ಅಲ್ವಾ. ತಾನೇ ಹೆತ್ತು ಹೊತ್ತು ಸಾಕಿದರೆ ಈ ರೀತಿ ಮಾಡುತ್ತಿರಲಿಲ್ಲವೇನೋ...


ಇದನ್ನೂ ಓದಿ- Skeleton found in Salman house: ಸಲ್ಮಾನ್ ಮನೆಯಲ್ಲಿ ಪತ್ತೆಯಾಯ್ತು ಅಸ್ಥಿಪಂಜರ: ಕೊಲೆಯ ತಪ್ಪೊಪ್ಪಿಗೆ ವಿಡಿಯೋ ವೈರಲ್!


ಸದ್ಯ ಬೆಂಗಳೂರು ಪೊಲೀಸರು ಈ ಜಾಲವನ್ನ ಬೇಧಿಸಿದ್ದು, 10 ಮಂದಿ ಮಹಿಳೆಯರು ಹಾಗೂ 21 ಮಕ್ಕಳು ಸೇರಿ ಒಟ್ಟು 31 ಮಂದಿಯನ್ನು ವಶಕ್ಕೆ ಪಡೆದ್ದಾರೆ. ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಯಲ್ಲಿರುವ ಮಕ್ಕಳ ವಿಚಾರಣೆ ನಡೆಸಲಾಗುತ್ತಿದೆ. ತನಿಖಾ ವರದಿ ಕೈಗೆ ಬಂದ ನಂತರ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಾಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ಆದಾಗ್ಯೂ, ತನಿಖೆಯಿಂದ ಈ ಮಾಫಿಯಾ ಹಿಂದಿನ ಅಸಲಿ ಸತ್ಯ ಹೊರಬೇಕಿದೆ. ಅದೆನೇ ಇರ್ಲಿ  ಮುಂದೆ ನೀವು ಸಿಗ್ನಲ್ ನಲ್ಲಿ ಭಿಕ್ಷೆ ನೀಡುವ ಮುನ್ನ ಸ್ವಲ್ಪ ಯೋಚನೆ ಮಾಡಿದರೆ ಉತ್ತಮ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.