)
ಬೆಂಗಳೂರು: ಅವರಿಬ್ಬರು ಕುಚಿಕು ಗೆಳೆಯರು, ಒಟ್ಟಿಗೆ ಬೆಳೆದು, ಜೊತೆಯಲ್ಲೆ ಕೆಲಸ ಅರಸಿ ಸಿಲಿಕಾನ್ ಸಿಟಿಗೆ ಬಂದಿದ್ದರು. ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತ ಬದುಕು ಕಟ್ಟಿಕೊಂಡಿದ್ದರು. ಆದ್ರೆ 20 ರೂಪಾಯಿಯ ವಿಮಲ್ ಪಾನ್ ಗೋಸ್ಕರ ಜೊತೆಗಿದ್ದವನೇ ಕೊಲೆ ಮಾಡಿಬಿಟ್ಟಿದ್ದಾನೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಈ ಫೋಟೊದಲ್ಲಿರುವ ಇಬ್ಬರು ವ್ಯಕ್ತಿಗಳ ಹೆಸರು ಜಿತೇಂದ್ರ ಪಾಂಡೆ ಅಲಿಯಾಸ್ ಬಬ್ಲು ಮತ್ತು ಸೀತಾರಾಮ್ ಪಾಂಡೆ. ಇಬ್ಬರು ಬಿಹಾರ ಮೂಲದ ಕಾರ್ಮಿಕರಾಗಿದ್ದು, ಕೆಲಸ ಹುಡುಕಿಕೊಂಡು ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದರು. ಇಬ್ಬರು ಕೂಡ ಆತ್ಮೀಯ ಸ್ನೇಹಿತರಾಗಿದ್ದು, ಒಟ್ಟಿಗೆ ಬೆಳೆದು, ಉಂಡು ತಿಂದು ಜೊತೆಯಲ್ಲೆ ಇರ್ತಾ ಇದ್ರು. ಆದ್ರೆ ಇಪ್ಪತ್ತು ರೂಪಾಯಿಯ ಒಂದು ಪಾನ್ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಜಿತೇಂದ್ರ ಅಲಿಯಾಸ್ ಬಬ್ಲುವಿನ ಕೊಲೆಯಲ್ಲಿ ಅಂತ್ಯವಾಗಿದೆ.
ಆರೋಪಿ ಸೀತಾರಾಮ್ ಪಾಂಡೆ ಮತ್ತು ಕೊಲೆಯಾದ ಜಿತೇಂದ್ರ ಬಬ್ಲು ಇಬ್ಬರು ಕೂಡ ವೈಟ್ ಫೀಲ್ಡ್ ನ ರಾಮಗೊಂಡನಹಳ್ಳಿಯ ಖಾಸಗಿ ಶಾಲೆಯಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದರು. ಜುಲೈ 28 ರಂದು ರಾತ್ರಿ ಇಬ್ಬರು ಕಂಠಪೂರ್ತಿ ಎಣ್ಣೆ ಕುಡಿದು ಪಾರ್ಟಿ ಮಾಡಿದ್ದಾರೆ.
ಎಣ್ಣೆ ಹೊಡೆದ ಮೇಲೆ ಜಿತೇಂದ್ರ ಬಬ್ಲು 20 ರೂಪಾಯಿಯ ವಿಮಲ್ ಪಾನ್ ತರುವಂತೆ ಆರೋಪಿ ಸೀತಾರಾಮ್ ಪಾಂಡೆಗೆ ಹೇಳಿದ್ದನಂತೆ. ಇದಕ್ಕೆ ಕೋಪಗೊಂಡ ಸೀತಾರಾಮ್ ಪಾಂಡೆ ವಯಸ್ಸಿನಲ್ಲಿ ನನಗಿಂತ ಚಿಕ್ಕವನು ನೀನು, ನನಗೆ ಗುಟ್ಕಾ ತರಲು ಹೇಳ್ತಿಯಾ ಅಂತಾ ರೊಚ್ಚಿಗೆದ್ದಿದ್ದ. ಕುಡಿದ ನಶೆಯಲ್ಲಿದ್ದ ಜಿತೇಂದ್ರ ನಿದ್ದೆಗೆ ಜಾರುತ್ತಿದ್ದಂತೆ ಸೀತಾರಾಮ್ ಸುತ್ತಿಗೆಯಿಂದ ತಲೆಗೆ ಹೊಡೆದಿದ್ದ. ಹಲ್ಲೆಯಿಂದ ಗಂಭೀರ ಗಾಯಗೊಂಡ ಜಿತೇಂದ್ರ ಬಬ್ಲು ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ಕೊಲೆ ಬಳಿಕ ಆರೋಪಿ ಸೀತಾರಾಮ್ ಪಾಂಡೆ ನಾಪತ್ತೆಯಾಗಿದ್ದ. ಜುಲೈ 29 ರಂದು ಉಳಿದ ಕೆಲಸಗಾರರು ಕೆಲಸಕ್ಕೆ ಬಂದು ನೋಡಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನ ಸದ್ಯ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅದೇನೆ ಇರಲಿ, 20 ರೂಪಾಯಿಯ ಪಾನ್ ಆತ್ಮೀಯ ಸ್ನೇಹಿತನ ಕೊಲೆಗೆ ಕಾರಣವಾಗಿದ್ದು, ವಿಪರ್ಯಾಸವೇ ಸರಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.