)
ತುಮಕೂರು : ಅವಳಿನ್ನೂ ಒಂಬತ್ತನೇ ತರಗತಿ ಬಾಲಕಿ.. ಕಡುಬಡತನದ ನಡುವೆಯೂ ಚೆನ್ನಾಗಿ ಓದಿಸಬೇಕು ಅಂತ ಹತ್ತವರು ಶಾಲೆಗೆ ಕಳುಸ್ತಿದ್ರು. ಆದ್ರೆ, ಕೊರಟಗೆರೆ ತಾಲೂಕಿನ ಅದೇ ಊರಿನ ಪೃಥ್ವಿರಾಜ್ ಎಂಬ ಕಿರಾತಕನೊಬ್ಬ ಆ ಬಾಲಕಿಯ ಹಿಂದೆ ಬಿದ್ದಿದ್ದ.. ನಿನ್ನನ್ನ ಲವ್ ಮಾಡ್ತಾ ಇದ್ದಿನಿ ನೀನು ನನ್ನನ್ನ ಪ್ರೀತಿಸು ಅಂತ ಇಲ್ಲ ಅಂದ್ರೆ ಪರಿಣಾಮ ನೆಟ್ಟಗಿರಲ್ಲ ಅಂತೆಲ್ಲಾ ಹೆದರಿಸೋಕೆ ಶುರು ಮಾಡಿದ್ದ.
ಯಾವಾಗ ಪೃಥ್ವಿರಾಜ್ ನ ಈತರಹದ ಕೀಟಲೆಗಳು ಜಾಸ್ತಿ ಆಗಿದ್ವೋ, ಆ ಬಾಲಕಿ ತುಂಬಾ ಭಯಭೀತಳಾಗಿದ್ಲು, ಶಾಲೆಗೆ ಹೋಗೋದೆ ಇಲ್ಲ ಅಂತ ಹಠ ಮಾಡುತ್ತಿದ್ಲು.. ಯಾಕೆ ಅಂತ ಕೇಳಿದ್ದ ತಂದೆಗೆ ಆ ಬಾಲಕಿ ಪೃಥ್ವಿರಾಜ್ ನಿತ್ಯ ಕೊಡುತ್ತಿರುವ ಕಿರುಕುಳದ ಬಗ್ಗೆ ಹೇಳಿದ್ಲು.. ಅಷ್ಟೊತ್ತಿಗೆ ಮನೆಯವರನ್ನ ಕರೆತಂದ ಪೃಥ್ವಿರಾಜ್ ನಿನ್ನ ಮಗಳನ್ನ ನನಗೆ ಮದುವೆ ಮಾಡಿಕೊಡು ಅಂತ ಅವಾಜ್ ಹಾಕಿ ಮನೆಗೆ ತೆರಳಿದ್ದ..
ಒಂಬತ್ತನೆ ತರಗತಿ ಓದುವ ಹುಡುಗಿಯನ್ನ ನಾನೇಗೆ ಮದುವೆ ಮಾಡಿಕೊಡ್ಲಿ ಅಂತ ಬಾಲಕಿಯ ತಂದೆ ತಕರಾರು ತೆಗೆದಿದ್ದರು ಅಷ್ಟೇ.. ಇಷ್ಟಕ್ಕೆ ರೊಚ್ಚಿಗೆದ್ದ ಪೃಥ್ವಿರಾಜ್ ಆತನ ತಂದೆ ಹನುಮಂತರಾಯಪ್ಪ ಮತ್ತೊಬ್ಬ ಆರೋಪಿ ತಿಮ್ಮರಾಜು ಏಕಾಏಕಿ ಬಾಲಕಿಯ ತಂದೆಗೆ ಚಾಕುವಿನಿಂದ ಇರಿದು ಕೊಲೆಯನ್ನೇ ಮಾಡೋಕೆ ಮುಂದಾಗಿದ್ದ.. ಹೊಟ್ಟೆ ಹಾಗೂ ಎದೆಗೆ ಚಾಕು ಇರಿದಿಂದ ತಂದೆ ಸ್ಥಳದಲ್ಲೇ ಕುಸಿದು ಬಿದ್ದಿದ್ರು..
ಇತ್ತ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯ ತಂದೆಯನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.. ಸಧ್ಯ ತಕ್ಷಣ ಅವರನ್ನ ಆಸ್ಪತ್ರೆಗೆ ಸೇರಿಸಿದ್ರಿಂದ ವ್ಯಕ್ತಿ ಬದುಕುಳಿದಿದ್ದಾರೆ.. ಇತ್ತ ಚಾಕುವಿನಿಂದ ಇರಿದು ಪಾರಾರಿಯಾಗಿದ್ದ ಪೃಥ್ವಿರಾಜ್ ಆತನ ತಂದೆ ಹನುಮಂತಾರಾಯಪ್ಪ, ಮತ್ತೊಬ್ಬ ಆರೋಪಿ ತಿಮ್ನರಾಜುನನ್ನ ಕೊರಟಗೆರೆಪೊಲೀಸರು ಪೋಕ್ಸೋ ಆಕ್ಟ್ ನಡಿ ಬಂಧಿಸಿ ಜೈಲಿಗಟ್ಟಿದ್ದಾರೆ..