)
Cocaine drugs seized: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(KIAL Airport)ದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು 40 ಕೋಟಿ ರೂ. ಮೌಲ್ಯದ 4 ಕೆಜಿಗೂ ಅಧಿಕ ಕೊಕೇನ್ ವಶಪಡಿಸಿಕೊಂಡಿದ್ದು, ಒಬ್ಬ ಪ್ರಯಾಣಿಕನನ್ನು ಬಂಧಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಜುಲೈ 18ರಂದು ಬೆಂಗಳೂರಿನ ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ಗೆ ದೋಹಾದಿಂದ ಆಗಮಿಸಿದ ಭಾರತೀಯ ಪ್ರಯಾಣಿಕನನ್ನ DRI ಬೆಂಗಳೂರು ವಲಯ ಘಟಕದ ಅಧಿಕಾರಿಗಳು ತಡೆದಿದ್ದರು. ಈ ವೇಳೆ ಪರಿಶೀಲಿಸಿದ ಅಧಿಕಾರಿಗಳು, ವಿದೇಶದಿಂದ ಬೆಂಗಳೂರಿಗೆ ಸರಬರಾಜಾಗಿದ್ದ ಡ್ರಗ್ಸ್ ಅನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ಗುರುದ್ವಾರಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ
ದೋಹಾದಿಂದ ಬೆಂಗಳೂರಿಗೆ ಬಂದಿದ್ದ ಭಾರತ ಮೂಲದ ಪ್ರಯಾಣಿಕ ಬ್ಯಾಗೇಜ್ಗಳನ್ನ ಡಿಆರ್ಐ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಭಾರವಾದ ಎರಡು ಸೂಪರ್ಹೀರೋ ಕಾಮಿಕ್ಸ್/ಮ್ಯಾಗಜೀನ್ಸ್ ಪತ್ತೆಯಾಗಿದ್ದವು. ಬಳಕೆ ಮಾಡದ ಎರಡು ಮ್ಯಾಗಜೀನ್ಸ್ ಕವರ್ ಮೇಲೆ ಸೀಲ್ ಮಾಡಿದ ರೀತಿಯಲ್ಲಿದ್ದ ಕೊಕೇನ್ ಪೌಡರ್ ಪತ್ತೆಯಾಗಿದೆ. ನಂತರ ಡಿಆರ್ಐ ಅಧಿಕಾರಿಳು ಬಿಳಿ ಬಣ್ಣದ ಪೌಡರ್ಅನ್ನ ಪರೀಕ್ಷೆಗೊಳಪಡಿಸಿದ್ದಾರೆ.
ಈ ಬಿಳಿ ಪುಡಿಯಲ್ಲಿ ಕೊಕೇನ್ ಇರುವುದು ಪರೀಕ್ಷೆಯ ವೇಳೆ ಪತ್ತೆಯಾಗಿತ್ತು. ವಶಪಡಿಸಿಕೊಂಡ ಕೊಕೇನ್ ಸುಮಾರು 4,006 ಗ್ರಾಂ (4 ಕೆಜಿಗಿಂತ ಹೆಚ್ಚು) ತೂಕವಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು 40 ಕೋಟಿ ರೂ. ಇದೆ. NDPS ಕಾಯ್ದೆಯ ನಿಬಂಧನೆಗಳಡಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಅಲ್ಲದೇ ಪ್ರಯಾಣಿಕನನ್ನು NDPS ಕಾಯ್ದೆ, 1985ರ ನಿಬಂಧನೆಗಳಡಿ ಬಂಧಿಸಿ ಜುಲೈ 18ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಹೂವಿನ ವ್ಯಾಪಾರಿಗೂ ೫೨ ಲಕ್ಷ ಟ್ಯಾಕ್ಸ್ ಬರೆ