Neha Hiremath Murder Case: ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕನ ಜಾಮೀನು ಅರ್ಜಿಯ ಬಗ್ಗೆ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್ ಗೆ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ನೇಹಾ ಹಿರೇಮಠ ಕೊಲೆ ಆರೋಪಿ ಮನವಿ ಮಾಡಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಫಯಾಜ್ ಖೊಂಡೋನಾಯ್ಕ್ ನೇಹಾ ಹಿರೇಮಠ ಕೊಲೆ ಆರೋಪಿ.
ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ನೇಹಾ ಕೊಲೆ ಆರೋಪಿ ಫಯಾಜ್ ಜಾಮೀನು ಅರ್ಜಿ ವಿಚಾರಣೆ ತೀರ್ಪು ಇಂದು ಕಾಯ್ದಿರಿಸಲಾಗಿತ್ತು. 2024 ಏಪ್ರಿಲ್ 18 ರಂದು ಹುಬ್ಬಳ್ಳಿ ಬಿವಿಬಿ ಕಾಲೇಜಿನ ಆವರಣದಲ್ಲಿ ನಡೆದಿದ್ದ ಕೊಲೆ ಪ್ರಕರಣ ಇದಾಗಿದೆ.
ಕಾಲೇಜು ಕ್ಯಾಂಪಸ್ ನಲ್ಲಿಯೇ ನೇಹಾ ಹಿರೇಮಠ ಬರ್ಬರ ಕೊಲೆಯಾಗಿತ್ತು. ನೇಹಾ ಹಿರೇಮಠ ಹತ್ಯೆ ಮಾಡಿದ್ದ ಆರೋಪಿ ಫಯಾಜ್ ನ ಜಾಮೀನು ಅರ್ಜಿ ವಿಚಾರಣೆ ಮುಗಿದಿತ್ತು. ನೇಹಾ ಹಿರೇಮಠ ಪರ ಸ್ಪೆಷಲ್ ಪಬ್ಲಿಕ್ ಪ್ರಾಸೀಕ್ಟೂಟರ್ ಮಹೇಶ ವೈದ್ಯ, ವಕೀಲ ರಾಘವೇಂದ್ರ ಮುತ್ಗೀಕರ ವಾದ ಮಂಡನೆ ಮಾಡಿದ್ದರು. ಫಯಾಜ್ ಪರವಾಗಿ ಝಡ್ ಎಂ ಹತ್ತರಕಿ ವಾದ ಮಂಡಿಸಿದ್ದರು.
ನೇಹಾ ತಂದೆ ನಿರಂಜನ ಹಿರೇಮಠ ಭಾವುಕರಾಗಿದ್ದಾರೆ. ನೇಹಾ ಹಿರೇಮಠ ಹತ್ಯೆ ಆರೋಪಿ ಫೈಯಾಜ್ ಜಾಮೀನು ಅರ್ಜಿ ವಜಾ ಹಿನ್ನೆಲೆ ನೇಹಾ ತಂದೆ ನಿರಂಜನ ಹಿರೇಮಠ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಕೊಲೆ ಆರೋಪಿ ಫಯಾಜ್ ಜಾಮೀನು ಅರ್ಜಿ ವಜಾ ಆಗಿದೆ. ನಮಗೆ ಮೊದಲ ಜಯ ಸಿಕ್ಕಿದೆ. ನ್ಯಾಯಾಲಯ ಆತನ ಜಾಮೀನು ಅರ್ಜಿ ವಜಾ ಮಾಡಿದೆ. ನಮ್ಮ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ ಎಂದಿದ್ದಾರೆ.
ಆರೋಪಿ ವಾಮಮಾರ್ಗ ಮೂಲಕ ಜಾಮೀನು ಪಡೆಯಲು ಮುಂದಾಗಿದ್ದ. ಆ ಮೂಲಕ ಮತ್ತೆ ಯಾರ ಕೊಲೆ ಮಾಡಬೇಕು ಅಂತ ಸಂಚು ರೂಪಿಸಿದ್ದನೋ ಗೊತ್ತಿಲ್ಲಾ. ಎಲ್ಲರ ಹೋರಾಟಕ್ಕೆ ಮೊದಲ ಹಂತದಲ್ಲಿ ನ್ಯಾಯ ಸಿಕ್ಕಿದೆ. ನಮಗೆ ನ್ಯಾಯ ಸಿಗುತ್ತದೆ ಅನ್ನೋ ಭರವಸೆ ಮೂಡಿದೆ. ಆರೋಪಿಗೆ ಬೇಗನೆ ಗಲ್ಲುಶಿಕ್ಷೆಯಾಗಬೇಕು. ಅವರು ಹೈಕೋರ್ಟ್ ಗೆ ಹೋದ್ರೆ ನಾವು ಸಹ ಆಕ್ಷೇಪಣೆ ಅರ್ಜಿ ಸಲ್ಲಿಕೆ ಮಾಡುತ್ತೆವೆ ಎಂದಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.