ಬೆಂಗಳೂರು : ದಿನದಿಂದ ದಿನಕ್ಕೆ ಸೈಬರ್ ಚೋರರ ಹಾವಳಿ ಜೋರಾಗುತ್ತಿದೆ. ಹೊಸ ಹೊಸ ತಂತ್ರಗಳನ್ನು ಬಳಸಿ ಅಮಾಯಕರನ್ನು ವಂಚಿಸುತ್ತಿದ್ದಾರೆ. ಇನ್ಮುಂದೆ ನೀವೇನಾದ್ರೂ ಪರಿಶೀಲಿಸಿ ಕಳುಹಿಸಿರುವ ಕೊರಿಯರ್ ಬಗ್ಗೆ ಆಕ್ಷೇಪಣೆ ಹೇಳಿಕೊಂಡು ಯಾರಾದರೂ ಕರೆ ಮಾಡಿದರೆ, ನಂಬುವ ಮುನ್ನ ಎಚ್ಚರವಿರಲಿ. ವಿದೇಶಕ್ಕೆ ಕಳುಹಿಸಿದ್ದ ಕೊರಿಯರ್ ನಲ್ಲಿ ಮಾದಕ ಪದಾರ್ಥ ಪತ್ತೆಯಾಗಿದೆ ಎಂದು ಬೆದರಿಸುವ ಸೈಬರ್ ವಂಚಕರು ಮುಂಬೈ ಪೊಲೀಸರ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ.
ಈ ಬಗ್ಗೆ ಬೆಂಗಳೂರು ಪೂರ್ವ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಕೋಮಲ್ ಎಂಬುವವರಿಗೆ ಜನವರಿ 6ರಂದು ಕರೆ ಮಾಡಿದ್ದ ಸೈಬರ್ ವಂಚಕರು ತಾವು ಕೊರಿಯರ್ ಕಂಪನಿಯವರು,ನೀವು ತೈವಾನ್ ಗೆ ಕಳಿಸಿದ್ದ ಕೊರಿಯರ್ ನಲ್ಲಿ ಗಾಂಜಾ, ಹಾಗೂ ಹಣ ಪತ್ತೆಯಾಗಿದೆ ಎಂದು ಬೆದರಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ತಾವು ಮುಂಬೈ ಪೊಲೀಸರೆಂದು ಹೇಳಿಕೊಂಡು ಕರೆ ಮಾಡಿದ್ದ ಅದೇ ಖದೀಮರು ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದೆ.
ಇದನ್ನೂ ಓದಿ: Online Fraud: ಆನ್ಲೈನ್ ನಲ್ಲಿ ಟೀ ಶರ್ಟ್ ಬುಕ್ ಮಾಡಿದ್ದ ಮಹಿಳೆ ಕಳೆದುಕೊಂಡಿದ್ದು ಬರೋಬ್ಬರಿ 10 ಲಕ್ಷ ರೂ..!
ಇಲ್ಲವಾದಲ್ಲಿ ಹಣ ಪಾವತಿಸಬೇಕು ಎಂದು ಬೆದರಿಸಿ 1.50 ಲಕ್ಷ ರೂಗಳನ್ನ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಇದೇ ಮಾದರಿಯಲ್ಲಿ ಡಿಸೆಂಬರ್ 15ರಂದು ಪೂಜಾ ಎಂಬಾಕೆಗೆ ಕರೆ ಮಾಡಿದ್ದ ಆರೋಪಿಗಳು, ಬೆದರಿಸಿ 67 ಸಾವಿರ ವರ್ಗಾಯಿಸಿಕೊಂಡಿರುವುದು ಸಹ ಬೆಳಕಿಗೆ ಬಂದಿದೆ. ಸದ್ಯ ಪೂರ್ವ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ಈ ಎರಡೂ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇನ್ಮುಂದೆಯಾದ್ರೂ ಜನ ಇಂತಹ ವಂಚಕರ ಜಾಲಕ್ಕೆ ಸಿಗದೇ ಯಾವುದಾದರೂ ಕರೆ ಮೆಸೇಜ್ ಗಳು ಬಂದರೆ ಎಚ್ಚರಿಕೆಯಿಂದ ಇದ್ದೂ, ಪೊಲೀಸರಿಗೆ ಮಾಹಿತಿ ನೀಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.