)
Haveri Brutal Murder Case: ಆತ ಸುಂದರ ಯುವಕ.. ನೋಡಿದರೆ ಸಿನಿಮಾ ನಟನಂತೆ ಕಾಣುವ ಸ್ಟೈಲ್... ಚಿತ್ರದುರ್ಗ ನಗರದ ಉದಯೋನ್ಮುಖ ಡ್ಯಾನ್ಸ್ ಮಾಸ್ಟರ್.. ಸ್ನೇಹಿತನ ಬರ್ತಡೇ ಇದೆ ಅಂತಾ ಹೇಳಿ ಮನೆಯಿಂದ ಹೊರ ನಡೆದಿದ್ದ. ಮನೆಯರು ಪೋನ್ ಮಾಡಿದಾಗ್ಲೂ ಲಾಂಗ್ ಡ್ರೈವ್ನಲ್ಲಿದ್ದೀನಿ ಆದಷ್ಟು ಬೇಗ ವಾಪಸ್ ಬರ್ತೀನಿ ಅಂತಾ ಹೇಳಿದ್ದ. ಆದರೆ ಅದು ಏನಾಯ್ತೋ ಇದಕ್ಕಿಂದ್ದಂತೆಯೇ ಹೆದ್ದಾರಿಯಲ್ಲೇ ಕತ್ತು ಸೀಳಿ ಕೊಲೆಯಾದ ಸ್ಥಿತಿಯಲ್ಲಿ ಡ್ಯಾನ್ಸ್ ಮಾಸ್ಟರ್ ದೇಹ ಪತ್ತೆಯಾಗಿದೆ.
ಹೌದು, ನೋಡುಗರೆಲ್ಲರನ್ನೂ ತನ್ನ ಡ್ಯಾನ್ಸ್ ಮೂಲಕವೇ ಸೈಕ್ ಮಾಡ್ತಿದ್ದ. 13 ವರ್ಷಗಳ ಡ್ಯಾನ್ಸ್ ಕೆರಿಯರ್ನಲ್ಲಿ ಆದಷ್ಟೋ ಡ್ಯಾನ್ಸ್ ಕೊರಿಯೋಗ್ರಾಫಿ ಮೂಲಕ ನೃತ್ಯ ಪ್ರೇಮಿಗಳಿಗೆ ಮಾಸ್ಟರ್ ಆಗಿದ್ದ. ಚಿತ್ರದುರ್ಗದಲ್ಲಿ ತನ್ನದೇಯಾದ ಒಂದು ಸ್ವತಃ ಡ್ಯಾನ್ಸ್ ಕ್ಲಾಸ್ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಡ್ಯಾನ್ಸ್ ಹೇಳಿಕೊಡ್ತಿದ್ದ. ಆದರೆ ಇದ್ದಕ್ಕಿದ್ದಂತೆ ಅದು ಏನಾಯ್ತೋ ಏನೋ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿಯ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರವಾಗಿ ಕೊಲೆಯಾಗಿದ್ದಾನೆ. ಈತನ ಹೆಸರು ಲಿಂಗೇಶ್.. ಚಿತ್ರದುರ್ಗ ನಗರದ ನಿವಾಸಿ.
ಲಿಂಗೇಶ್ ಚಿತ್ರದುರ್ಗದ ವಾಸವಿ ಮಾಲ್ ಬಳಿ ಡ್ಯಾನ್ಸ್ ಪ್ಲಸ್ ಕ್ರೂವ್ ಎಂಬ ಡ್ಯಾನ್ಸ್ ಕ್ಲಾಸ್ ನಡೆಸ್ತಿದ್ದ. ಆತನ ತಂದೆ ತೆಜಪ್ಪ ಪಂಚರ್ ಶಾಪ್ ನಡೆಸುತ್ತಿದ್ದು, ತಾಯಿ ಕವಿತಾ ಮನೆಯಲ್ಲಿ ಗೃಹಿಣಿ ಆಗಿದ್ದರು. ಒಬ್ಬನೇ ಗಂಡು ಮಗ ಆಗಿದ್ದರಿಂದ ಡ್ಯಾನ್ಸ್ ಕ್ಲಾಸ್ನಿಂದ ಬಂದ ಹಣದಿಂದಲೇ ಇಬ್ಬರು ಅಕ್ಕಂದಿರ ಮದುವೆ ಕೂಡ ಮಾಡಿಕೊಟ್ಟಿದ್ದ. ಹೀಗಿರುವಾಗ ಅದು ಏನಾಯ್ತೋ ಏನೋ ಎರಡ್ಮೂರು ದಿನಗಳಿಂದ ಮನೆಯಲ್ಲಿ ಮತ್ತು ಫ್ರೆಂಡ್ಸ್ ಜೊತೆ ಸೈಲೆಂಟ್ ಆಗಿರ್ತಿದ್ದ ಲಿಂಗೇಶ್ ಯಾರ ಬಳಿಯೂ ಯಾವ ವಿಚಾರವನ್ನೂ ಹೇಳಿಕೊಂಡಿರಲಿಲ್ಲ. ಆದರೆ ಸೋಮವಾರ ಸಂಜೆ ತನ್ನ KTM ಬೈಕ್ ತೆಗೆದುಕೊಂಡು ಹುಬ್ಬಳ್ಳಿ ಮಾರ್ಗವಾಗಿ ಫ್ರೆಂಡ್ ಬರ್ತಡೇ ಇದೆ ಅಂತಾ ಸುಳ್ಳು ಹೇಳಿ ಮನೆಯಿಂದ ಹೊರಟಿದ್ದ. ಇದಾದ ಕೆಲವೇ ಗಂಟೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ.
ಲಿಂಗೇಶ್ನ ಹೆತ್ತವರ ಹೇಳುವ ಪ್ರಕಾರ, ಈತನಿಗೆ ಯಾವುದೇ ರೀತಿಯ ಹಳೆಯ ದ್ವೇಷ ಆಗ್ಲಿ, ಶತ್ರುಗಳು ಇರಲಿಲ್ವಂತೆ.. ಆದರೆ ರಾತ್ರಿ ಪೋನ್ ಮಾಡಿದಾಗ ಲಾಂಗ್ ಡ್ರೈವ್ ಹೋಗಿ ಬರ್ತಿನಿ ಅಂದಿದ್ದನಂತೆ.. ಲಿಂಗೇಶ್ ಕೊಲೆಗೂ ಮುಂಚಿತವಾಗಿ ಹರಿಹರದಲ್ಲಿರೋ ತನ್ನ ಅಕ್ಕನಿಗೆ ಕಾಲ್ ಮಾಡಿ 500 ರೂ. ಪೋನ್ ಪೇ ಮಾಡು ಅಂದಿದ್ದನಂತೆ. ಕೊನೆಯದಾಗಿ ಸ್ನೇಹಿತ ವಿಕ್ಕಿಗೂ ಕರೆ ಮಾಡಿ 2 ಸಾವಿರ ಹಣ ಇದ್ರೆ ಹಾಕು ಅಂತಾ ಹೇಳಿದ್ದನಂತೆ. ಲಿಂಗೇಶ್ ಕೊಲೆಯಾದ ಸ್ಥಿತಿ ನೋಡಿದ್ರೆ ಎಂತವರನ್ನೂ ಬೆಚ್ಚಿಬೀಳಿಸುತ್ತದೆ. ಕತ್ತು ಸೀಳಿದ ಸ್ಥಿತಿಯಲ್ಲಿ ಹೆಣವನ್ನ ಕಂಡು ಪೊಲೀಸರು ಮತ್ತು ಪೋಷಕರು ಬೆಚ್ಚಿ ಬಿದ್ದಿದ್ದಾರೆ. ಮುಡಿಯಿಂದ ಅಡಿಯವರೆಗೆ ಬಟ್ಟೆಗಳು ರಕ್ತದಿಂದ ಮುಳುಗಿದ್ದವು. ಆತನ ಗೆಳೆಯರು ಮತ್ತು ಸ್ಟೂಡೆಂಟ್ಸ್ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಎಸ್ಸಿ ಒಳ ಮೀಸಲಾತಿ ಜಾರಿಗೆ ಸರ್ಕಾರ ಆದೇಶ
ಯಾಕಂದ್ರೆ ಲಿಂಗೇಶ್ ನೆಚ್ಚಿನ KTM ಬೈಕ್ಗೆ ಯಾವುದೇ ಅಪಘಾತದ ಗುರುತುಗಳಾಗಿಲ್ಲ. ಅಷ್ಟೇ ಅಲ್ಲದೆ ಆತನನ್ನ ಪ್ಲ್ಯಾನ್ ಮಾಡಿ ಕತ್ತು ಸೀಳಿ ಅತ್ಯಂತ ಭೀಕರವಾಗಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕತ್ತಿನಲ್ಲಿ ಸುಮಾರು 9 ಸೆಂಟಿಮೀಟರ್ ಡೀಪ್ ಆಗಿ ಕತ್ತು ಸೀಳಲಾಗಿದೆ. ಅಷ್ಟೇ ಅಲ್ಲದೆ ಆತನ ಪಕ್ಕದಲ್ಲೇ ಸಣ್ಣದಾದ ನೈಪ್ ಸಿಕ್ಕಿದೆ. ಇದೆಲ್ಲವೂ ಕಲೆಹಾಕಿರುವ FSL ಟೀಂ ಸ್ಥಳದಲ್ಲಿದ್ದ ಕೆಲವು ವಸ್ತುಗಳನ್ನ ವಶಕ್ಕೆ ತೆಗೆದುಕೊಂಡಿದೆ. ಆದರೆ ಲಿಂಗೇಶನ ಮೊಬೈಲ್ ಮಾತ್ರ ಪತ್ತೆಯಾಗಿಲ್ಲ. ಮನೆಗೆ ಆಧಾರವಾಗಿದ್ದವನನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ಸರ್ಕಾರ ಒಂದು ಕೋಟಿ ಪರಿಹಾರ ಮತ್ತು ಸ್ವಂತ ಸೂರು ಕೊಡಬೇಕೆಂದು ಲಿಂಗೇಶ್ ಗೆಳೆಯರು ಆಗ್ರಹಿಸಿದ್ದಾರೆ
ಹಾವೇರಿ ಪೊಲೀಸರು ಹಂತಕರ ಹೆಡೆಮುರಿ ಕಟ್ಟಲು ಪ್ರತ್ಯೇಕ ತಂಡಗಳನ್ನ ರಚಿಸಿ ಕಾರ್ಯಚರಣೆ ಇಳಿದಿದ್ದಾರೆ. ಲಿಂಗೇಶ್ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮನೆಯ ಜವಾಬ್ದಾರಿ ಹೊತ್ತ ಮಗನ ಕಳೆದುಕೊಂಡ ವೃದ್ಧ ಪೋಷಕರಿಗೆ ಆಕಾಶವೇ ತಲೆ ಮೇಲೆ ಕಳಚಿಬಿದ್ದಂತಾಗಿದೆ. ಸರ್ಕಾರ ವೃದ್ಧ ಪೋಷಕರ ನೆರವಿಗೆ ಬರಬೇಕು ಮತ್ತು ಪೊಲೀಸರು ಶೀಘ್ರವೇ ಕೊಲೆಗಾರರನ್ನ ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.