)
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರೋ ದರ್ಶನ್ ನನ್ನ ಪರಪ್ಪನ ಅಗ್ರಹಾರದಿಂದ ಶಿಫ್ಟ್ ಮಾಡುವಂತೆ ಸಲಿಸಿದ್ದ ಅರ್ಜಿ ವಿಚಾರಣೆ ನಡೆಯುತ್ತಿದ್ದು, ದರ್ಶನ್ ನನ್ನ ಬಳ್ಳಾರಿಗೆ ಶಿಫ್ಟ್ ಮಾಡುತ್ತಾರಾ ಎನ್ನುವ ವಿಚಾರ ತೀವ್ರ ಕುತೂಹಲ ಮೂಡಿಸಿದೆ. ಇಂದು ಕೋರ್ಟ್ ನಲ್ಲಿ ಈ ಬಗ್ಗೆ ಏನೆಲ್ಲಾ ವಿಚಾರಣೆ ನಡೀತು ಅನ್ನುವ ಬಗೆಗಿನ ಸಂಪೂರ್ಣ ವರದಿ ಇಲ್ಲಿದೆ.
ಬಳ್ಳಾರಿ ಜೈಲು ಸೇರ್ತಾರ ನಟ ದರ್ಶನ್ :
ಎಸ್ ಭದ್ರತೆ ಹಾಗೂ ಆಡಳಿತ ಹಿತದೃಷ್ಟಿಯಿಂದ ದರ್ಶನ್ ನನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಜೈಲಿನಾಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ. ಇಂದು 64 ನೇ ಸಿಸಿಹೆಚ್ ಕೋರ್ಟ್ ನ ನ್ಯಾಯಧೀಶರು ವಿಚಾರಣೆ ನಡೆಸಿದ್ದು ಸೆಪ್ಟೆಂಬರ್ ಒಂಬತ್ತರ ವರೆಗೂ ಆದೇಶ ಕಾಯ್ದಿರಿಸಿದ್ದಾರೆ. ಅಂದು ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಉಳಿದುಕೊಳ್ಳುತ್ತಾರಾ ಅಥವಾ ಬಳ್ಳಾರಿಗೆ ಶಿಫ್ಟ್ ಆಗುತ್ತಾರಾ ಅನ್ನೋದರ ಬಗ್ಗೆ ತೀರ್ಪು ಬರಲಿದೆ.
ಇಂದು ದರ್ಶನ್ ಪರ ವಕೀಲ ಸುನೀಲ್ ಕುಮಾರ್ ವಾದ ಮಂಡಿಸಿದ್ದು 2024 ರಲ್ಲಿ ಶಿಫ್ಟ್ ಮಾಡಲು ಅಂದು ಬೆಳಕಿಗೆ ಬಂದ ರಾಜತಿಥ್ಯ ಕಾರಣವಾಗಿತ್ತು. ರೌಡಿಶೀಟರ್ ಗಳ ಜೊತೆ ಸೇರಿದ್ದರು ಎನ್ನುವ ಕಾರಣಕ್ಕೆ ಶಿಫ್ಟ್ ಮಾಡಲಾಗಿತ್ತು. ಈ ಸಮಯದಲ್ಲಿ ಕೇವಲ ಆರೋಪಿಗಳ ಮೇಲೆ ಮಾತ್ರ ಕೇಸ್ ಆಗಿಲ್ಲ. ಜೈಲಾಧಿಕಾರಿಗಳ ಮೇಲೆಯೂ ಕೇಸ್ ಆಗಿತ್ತು. 23.8.2024 ರಲ್ಲಿ ಸಿಸಿಬಿ ರೇಡ್ ಮಾಡಿತ್ತು. ಆಗ ಜೈಲಿನ ಅಧಿಕಾರಿಗಳೇ ಕೆಲ ವಸ್ತುಗಳನ್ನ ಒಳಗೆ ಸಪ್ಲೈ ಮಾಡಿರೋದು ಬೆಳಕಿಗೆ ಬಂದಿತ್ತು. ಈ ಆರೋಪದಲ್ಲಿ ಕೆಲ ಜೈಲಾಧಿಕಾರಿಗಳು ಅಮಾನತು ಆಗಿದ್ದಾರೆ. ದರ್ಶನ್ ಜೊತೆ ಕಾಣಿಸಿಕೊಂಡವರ ಕೇಸ್ ಗೆ ಹೈಕೋರ್ಟ್ ಸ್ಟೇ ಕೊಟ್ಟಿದೆ ಎಂದು ವಾದ ಮಾಡಿದರು.
ಸೆಂಟ್ರಲ್ ಜೈಲಲ್ಲಿ ಸಾವಿರಾರು ಕೈದಿಗಳಿದ್ದಾರೆ. ಅವರ ವರ್ಗಾವಣೆ ಕೋರಿಲ್ಲ. ಜೈಲು ಅಥಾರಿಟಿ ಸರಿಯಾಗಿ ಇದ್ದರೆ ಈ ಸಮಸ್ಯೆ ಯಾಕೆ ಬರುತ್ತದೆ? ಯಾರನ್ನೂ ವರ್ಗಾವಣೆ ಕೋರದೆ ಕೇವಲ ದರ್ಶನ್ ವರ್ಗಾವಣೆ ಮಾತ್ರ ಕೊರಿದ್ದಾರೆ. ಬೇರೆ ಜೈಲಿನವರೂ ದರ್ಶನ್ ನಮಗೆ ಬೇಡ ಅಂತ್ತಿದ್ದಾರೆ. ಈ ಹಿಂದೆ ಪೊಲೀಸ್ ಕಮಿಷನರ್ ಆಗಿದ್ದ ದಯಾನಂದ್ ಅವರೇ ಈಗ ಕಾರಾಗೃಹ ಇಲಾಖೆ ಡಿಜಿ ಆಗಿದ್ದಾರೆ. ಅವರ ಸೂಚನೆ ಮೇರೆಗೆ ಶಿಫ್ಟ್ ಗೆ ಅರ್ಜಿ ಹಾಕಲಾಗಿದೆ. ಜೈಲಿಂದ ಹೊರಗಡೆ ಬರೋಕೆ ಬಿಡ್ತಿಲ್ಲ. ಹೀಗಿರುವಾಗ ಮನವಿ ಕೊಡಲು ಹೇಗೆ ಸಾಧ್ಯ ದರ್ಶನ್ ಗೆ ಯಾಕೆ ಈ ಶಿಕ್ಷೆ ಎಂದು ಪ್ರಶ್ನಿಸಿದ್ದಾರೆ.
ಜೀವಾವಧಿ ಶಿಕ್ಷೆ ಆದ ಕೈದಿಗಳಿಗೆ ಎಲ್ಲಾ ಸೌಲಭ್ಯ ಕೊಡುತ್ತಿದ್ದಾರೆ . ಆದರೆ, ದರ್ಶನ್ ವಿಚಾರದಲ್ಲಿ ತಾರತಮ್ಯ ಏಕೆ ಎಂದು ವಾದ ಮಾಡಿದ್ದಾರೆ.
ಇದನ್ನೂ ಓದಿ : ನಟ ದರ್ಶನ್ ಬಳ್ಳಾರಿಗೆ ಸ್ಥಳಾಂತರ ವಿಚಾರ ಅರ್ಜಿ ವಿಚಾರಣೆ
ಇನ್ನು ನಟ ದರ್ಶನ್ ಗೆ ಬಟ್ಟೆ , ದಿಂಬು, ಹಾಸಿಗೆ ಕೋರಿ ಅರ್ಜಿ ಸಲ್ಲಿಸಿದ್ದು ಬಟ್ಡೆ, ಪ್ಲೇಟು, ಚಪ್ಪಲಿ, ಸ್ಪೂನ್, ಸೇರಿ ಅಗತ್ಯ ವಸ್ತುಗಳನ್ನ ಪಡೆಯಲು ಅವಕಾಶವಿದೆ. ಜೈಲಿನ ಮ್ಯಾನ್ಯುಯಲ್ ಪ್ರಕಾರ ಸ್ವಂತ ಖರ್ಚಿನಲ್ಲಿ ಖರೀದಿಗೆ ಅವಕಾಶವಿದೆ. ವಿಚಾರಣಾಧಿನಾ ಕೈದಿ ಜೊತೆ ಶಿಕ್ಷಿತ ಅಪರಾಧಿ ಕೂಡಾ ಪಡೆಯಬಹುದು. ನಿನ್ನೆ ಜೈಲಾಧಿಕಾರಿಗಳು ಕರೆ ಮಾಡಿ ಅರ್ಜಿ ವಾಪಸ್ ಪಡೆಯಲು ಕೇಳಿಕೊಂಡರು. ಈ ಬಗ್ಗೆ ನಮ್ಮ ಬಳಿ ರೆಕಾರ್ಡ್ ಇದೆ. ಎನ್ಐಎ ಕೇಸ್ ನಲ್ಲಿ ವೈದ್ಯ ಜೈಲು ಸೇರಿದ್ದಾನೆ ಅಂತಹ ವೈದ್ಯನಿಗೆ ವಿಶೇಷ ಆತಿಥ್ಯ ಇದೆ. ಪ್ರಜ್ವಲ್ ರೇವಣ್ಣ ಕೂಡಾ ಜೈಲಲ್ಲಿದ್ದಾರೆ. ಆದರೆ ದರ್ಶನ್ ವಿಚಾರದಲ್ಲಿ ತಾರತಮ್ಯವೇಕೆ..? ದರ್ಶನ್ ಬ್ಯಾರಕ್ ಬಿಟ್ಟು ಹೊರಗೆ ಬರ್ಲಿಲ್ಲ. ಬಿಸಿಲು ಕೂಡಾ ನೋಡಿಲ್ಲ. ಈ ರೀತಿ ದರ್ಶನ್ ಗೆ ಟ್ರಿಟ್ ಯಾಕೆ?
ಒಂದು ತಿಂಗಳಾಗಿ ಬರ್ತಿದೆ. ಪೋನ್ ನಲ್ಲಿ ಕೂಡಾ ಮಾತಾಡೋಕೆ ಬಿಡ್ತಿಲ್ಲ ಎಂದು ದರ್ಶನ್ ಪರ ವಕೀಲರು ನ್ಯಾಯದಿಶರಿಗೆ ಇಂಚಿಚು ಮಾಹಿತಿ ನೀಡಿದರು.
ಅನಾಮಿಕ ವ್ಯಕ್ತಿ ಕೋರ್ಟ್ ಗೆ ಎಂಟ್ರಿ ..!
ವಾದ ಆಲಿಸಿದ ನ್ಯಾಯಧೀಶರು ಸೆಪ್ಟೆಂಬರ್ ಒಂಬಕ್ಕೆ ಆದೇಶ ಕಾಯ್ದಿರಿಸಿದ್ದಾರೆ. ಇದೇ ವೇಳೆ ಅನಾಮಿಕ ವ್ಯಕ್ತಿ ಕೋರ್ಟ್ ಗೆ ಎಂಟ್ರಿ ಕೊಟ್ಟಿದ್ದು, ಕೈನಲ್ಲಿ ಪತ್ರ ಹಿಡಿದು ದರ್ಶನ್ ಸೇರಿದಂತೆ 17 ಜನ ಆರೋಪಿಗಳಿಗೆ ಮರಣದಂಡನೆ ನೀಡಬೇಕು. ಬೇಲ್ ನೀಡಬಾರದು ಎಂದು ಮನವಿ ಮಾಡಿದ್ದಾರೆ. ಏನೇ ಇದ್ದರೂ ಸರ್ಕಾರದ ಮುಖಾಂತರ ಬರುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.