)
ಬೆಂಗಳೂರು : ಸುಟ್ಟು ಕರಕಲಾಗಿರುವ ಖಾಸಗಿ ಶಾಲಾ ಬಸ್. ಅರೆಬೆಂದ ಸ್ಥಿತಿಯಲ್ಲಿ ಇರುವ ಸೀಟ್ ಗಳು ಅಲ್ಲಲ್ಲಿ ಬಿದ್ದಿರುವ ಮದ್ಯದ ಬಾಟಲ್ ಗಳು, ಹಳೆಯ ಬಟ್ಟೆಗಳು ಇದರ ಜೊತೆಗೆ ಅಪರಿಚಿತ ವ್ಯಕ್ತಿಯ ಮೃತದೇಹ ಇವೆಲ್ಲಾ ಕಂಡು ಬಂದಿದ್ದು ನಿನ್ನೆ ನಡೆದ ಬೆಂಕಿ ಅನಾಹುತದಲ್ಲಿ.
ಯೆಸ್.. ಇದು ಬಾಣಸವಾಡಿಯ ಓಎಂಬಿಆರ್ ಲೇಔಟ್. ಇಲ್ಲಿ ಕಳೆದ ಎರಡು ತಿಂಗಳಿನಿಂದ ಖಾಸಗಿ ಶಾಲಾ ಬಸ್ಸೊಂದನ್ನು ಮಾರಾಟ ಮಾಡಲು ಮಾಲೀಕರೊಬ್ಬರು ನಿಲ್ಲಿಸಿದ್ರಂತೆ. ಇದರೊಳಗೆ ಪ್ರತಿ ನಿತ್ಯ ಪುಂಡ ಪೋಕರಿಗಳು ಒಳಗಡೆ ಹೋಗಿ ಎಣ್ಣೆ ಹೊಡೆಯೋದು, ಗಾಂಜಾ ಸೇದೋದು, ಪಾರ್ಟಿ ಮಾಡೋದು ರಸ್ತೆಯಲ್ಲಿ ಓಡಾಡೋರನ್ನ ಚುಡಾಯಿಸೋದು ಮಾಡ್ತಿದ್ರಂತೆ. ಇದನ್ನ ಗಮಿಸಿದ ಮಾಲೀಕರು ಕೆಲವು ಸಾರಿ ಬಸ್ ನ ಡೋರ್ ಲಾಕ್ ಮಾಡಿದ್ರಂತೆ. ಆದರೂ ಕೂಡ ಡೋರ್ ಲಾಕ್ ಬ್ರೇಕ್ ಮಾಡಿ ಒಳಗಡೆ ಹೊಗ್ತಿದ್ರಂತೆ.
ನಿನ್ನೆ ರಾತ್ರಿ ಸುಮಾರು 10.30 ರ ಸುಮಾರಿಗೆ ಇದೆ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯರು ಬಾಣಸವಾಡಿಯ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಹತೋಟಿಗೆ ತಂದಿದ್ದಾರೆ. ನಂತರ ಒಳಗಡೆ ನೋಡಿದಾಗ ವ್ಯಕ್ತಿ ವೊಬ್ಬನ ಮೃತದೇಹ ಬೆಂದ ಸ್ಥಿತಿಯಲ್ಲಿ ಕಂಡು ಬಂದಿದೆ. ಇನ್ನೂ ಪಕ್ಕದಲ್ಲಿ ಕೆಲವು ಗೋಡೌನ್ ಗಳಿದ್ದು ಬೆಂಕಿಯು ದೊಡ್ಡ ಪ್ರಮಾಣದಲ್ಲಿ ಹೊತ್ತಿಕೊಂಡಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿತ್ತಂತೆ ಅಲ್ಲದೆ ಬಸ್ ನಿಲ್ಲಿಸಿದ್ದ ಎದುರುಗಡೆ ಖಾಲಿ ಕಾಂಪೌಂಡ್ ಇದ್ದು ಇದರೊಳಗಡೆ ಕೂಡ ಗಾಂಜಾ ಸೇದದೋದು ಅಕ್ರಮ ಚಟುವಟಿಕೆಗಳನ್ನು ಮಾಡ್ತಿದ್ದಾರಂತೆ.
ಇನ್ನೂ ಪುಂಡರು ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡು ಕೊಲೆ ಮಾಡಿದ್ದಾರಾ ಅನ್ನೊ ಅನುಮಾನ ಇದ್ದು, ಸದ್ಯ ಘಟನೆ ಬಗ್ಗೆ ರಾಮಮೂರ್ತಿ ನಗರ ಪೋಲಿಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಡಿಜೆ ಹಳ್ಳಿಯ ವಿಶ್ವೇಶ್ವರಯ್ಯ ಬಡಾವಣೆಯ ಮುತ್ತು ಮಾರಿಯಮ್ಮ ದೇವಾಲಯ ಬಳಿ ಗೋಪಿ ಅನ್ನೋರಿಗೆ ಸೇರಿದ ಬೈಕ್ ಗೆ ಅಪರಿಚಿತ ವ್ಯಕ್ತಿಯೊಬ್ಬ ಮಧ್ಯರಾತ್ರಿ ಕೈಯಲ್ಲಿ ಎರಡು ಬಾಟಲ್ ನಲ್ಲಿ ಪೆಟ್ರೋಲ್ ತಂದು ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಎರಡು ಬೈಕ್ ಗಳು ಸುಟ್ಟು ಕರಕಲಾಗಿದೆ. ಈ ಎಲ್ಲಾ ದೃಶ್ಯ ಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ದೇವಾಲಯದ ನವಗ್ರಹಗಳನ್ನ ತೆರೆವು ಮಾಡಿದ್ರಂತೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಗೋಪಿ ಅವರ ಬೈಕ್ ಗೆ ಬೆಂಕಿ ಹಚ್ಚಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಘಟನೆ ಸಂಬಂಧ ಡಿಕೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.