)
ಮಂಗಳೂರು: ಧರ್ಮಸ್ಥಳದ ಸುತ್ತ ನಡೆದಿದೆ ಎನ್ನಲಾದ ಅಸಹಜ ಸಾವಿನ ಆರೋಪ ಪ್ರಕರಣದ ಎಸ್ ಐಟಿ ತನಿಖೆ ಚುರುಕುಗೊಂಡಿದೆ. ಸತತ ಎರಡನೇ ಸಲ 13ನೇ ಸ್ಪಾಟ್ ನಲ್ಲಿ ಶೋಧ ನಡೆಸಿದ್ದು ಏನಾದ್ರೂ ಸಿಕ್ತಾ ಎಂಬುದು ಕುತೂಹಲ ಮೂಡಿಸಿದೆ. ಆ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಧರ್ಮಸ್ಥಳದ ಸುತ್ತ ಅನೇಕ ಮೃತದೇಹಗಳನ್ನು ಕಾನೂನುಬಾಹಿರವಾಗಿ ಹೂಳಲಾಗಿದೆ ಎಂಬ ಆರೋಪದ ಕುರಿತು ಎಸ್ ಐಟಿ ತನಿಖೆ ಚುರುಕುಗೊಂಡಿದೆ. ಬುಧವಾರವೂ ಶೋಧ ಕಾರ್ಯಾಚರಣೆ ನಡೀತು. ಸಾಕ್ಷಿ ದೂರುದಾರ ತೋರಿಸಿದ 13ನೆಯ ಗುರುತಿನಲ್ಲಿ ಬುಧವಾರ ಅಗೆಯುವ ಕಾರ್ಯಾಚರಣೆ ನಡೆಯಿತು. ಭಾರೀ ಮಳೆಯಿಂದಾಗಿ ಕಾರ್ಯಾಚರಣೆ ನಿಧಾನವಾಗಿ ನಡೆಯಿತು.
13ನೆಯ ಸ್ಥಳದಲ್ಲಿ ಮಂಗಳವಾರ ಅಗೆಯುವ ಕಾರ್ಯ ನಡೆಸಿದ್ದ ಸ್ಥಳದ ಪಕ್ಕದಲ್ಲಿಯೇ ಬುಧವಾರ ಸಾಕ್ಷಿ ದೂರುದಾರ ಮತ್ತೊಂದು ಸ್ಥಳವನ್ನು ಗುರುತಿಸುವ ಕಾರ್ಯವನ್ನು ಮಾಡಿದ್ದು ಅಲ್ಲಿ ಎರಡು ಹಿಟಾಚಿಗಳನ್ನು ಉಪಯೋಗಿಸಿ ಅಗೆಯುವ ಕಾರ್ಯ ಮಾಡಲಾಯಿತು.
ಇಂದಿನ ಕಾರ್ಯಾಚರಣೆ ಅತ್ಯಂತ ಮಹತ್ವದ್ದಾಗಿತ್ತು.
ಆದ್ರೆ ಇಂದು ಯಾವುದೇ ಕುರುಹುಗಳು ಪತ್ತೆಯಾಗಲಿಲ್ಲ. ಈ ಮಧ್ಯೆ ಎಸ್ ಐಟಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ ಎನ್ನಲಾಗಿದೆ.
ಇನ್ನು ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಘಟನೆಯ ಬಗ್ಗೆ ಇಬ್ಬರು ಹೊಸ ದೂರುದಾರರು ಎಸ್.ಐ ಟಿ ಕಚೇರಿಗೆ ಆಗಮಿಸಿದ್ರು.
ಈ ಹಿಂದೆಯೇ ದೂರು ನೀಡಿದ್ದ ಧರ್ಮಸ್ಥಳ ಗ್ರಾಮದ ನಿವಾಸಿಗಳಾದ ಪುರಂದರ ಗೌಡ ಹಾಗೂ ತುಲಾರಾಮ ಗೌಡ ಅವರು ಇಂದು ಮತ್ತೆ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದರು. ಇನ್ನು ಇಂದು ಅವಶೇಷಗಳು ಸಿಗದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅಗೆಯುವ ಕಾರ್ಯಾಚರಣೆಯನ್ನು ನಿಲ್ಲಿಸಿ ತನಿಖೆಯನ್ನು ಬೇರೆ ರೀತಿಯಲ್ಲಿ ನಡೆಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಧರ್ಮಸ್ಥಳದ ಕೇಸ್ ಕುರಿತು ಎಸ್ ಐಟಿ ನಡೆಸ್ತಿರೋ ಶೋಧ ದಿನಕ್ಕೊಂದು ತಿರುವು ಪಡಿತಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.