)
ಹಾಸನ: ಪತ್ನಿ ಕೌಟುಂಬಿಕ ಕಲಹದಿಂದಾಗಿ ಗಂಡನ ಬಿಟ್ಟು ಫಾರಂ ಹೌಸ್ ನಲ್ಲಿದ್ಲು, ಆದರೆ ಕಳೆದ ಎರಡು ತಿಂಗಳಿನಿಂದ ಒಟ್ಟಿಗೆ ಬದುಕೋಣ ಅಂತಾ ಜೊತೆಗೆ ಓಡಾಡ್ತಿದ್ರು..ಅದ್ರೆ ರಾತ್ರಿ ಮತ್ತದೇ ಶುರುವಾದ ಗಲಾಟೆ ಅಂತ್ಯವಾಗಿದ್ದು ಕೊಲೆಯಲ್ಲಿ..ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಪತಿ.
ಮಹಿಳೆಯ ಹೆಸ್ರು ತನುಜಾ..ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವಾರ ಸಮೀಪದವ್ಳು.. ಗಂಡನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾಳೆ.ಕಳೆದ ಏಳುವರೆ ವರ್ಷದ ಹಿಂದೆ ಅಜ್ಜಂಪುರ ತಾಲೂಕಿನ ಹಿರೇಕನಾವಂಗಲದ ರಮೇಶ್ ಅನ್ನೋರ ಜೊತೆ ವಿವಾಹವಾಗಿತ್ತು.ಒಂದು ಮಗು ಇದೆ..ಅದ್ರೆ ಕಳೆದ ಮೂರು ವರ್ಷದ ಹಿಂದೆ ಶುರುವಾಗಿದ್ದು ಗಲಾಟೆ..ಅಡಿಕೆ ವಿಚಾರ ಆಂತಾ ಪೋಷಕರು ಹೇಳ್ತಿದ್ದಾರೆ..ಅಲ್ಲಿಂದ ಪತಿಯನ್ನ ಬಿಟ್ಟು ಫಾರಂ ಹೌಸ್ ನಲ್ಲಿ ವಾಸವಾಗಿದ್ರು ತನುಜಾ.ನ್ಯಾಯಲಯದಿಂದ ನಾಲ್ಕು ಸಾವಿರ ಹಣ ನೀಡುವಂತೆಯೂ ರಮೇಶ್ ಗೆ ಅದೇಶವಾಗಿತ್ತಂತೆ.
ಇನ್ನೂ ಕಳೆದ ಮೂರು ವರ್ಷದಿಂದ ಪತಿಗೆ ಸೇರಿದ ಫಾರಂ ಹೌಸ್ ನಲ್ಲಿದ್ದ ತನುಜಾ.ನ್ಯಾಯಲಯದಿಂದ ನೀಡಿದ ಅದೇಶದಂತೆ ನಾಲ್ಕು ಸಾವಿರ ಹಣವನ್ನು ನೀಡಿಲ್ಲ ಅನ್ನೋ ಅರೋಪವೂ ಇದೆ..ಅದ್ರೆ ಕಳೆದ ಎರಡು ತಿಂಗಳ ಹಿಂದೆ ಮತ್ತೆ ಒಟ್ಟಿಗಿರೋಣ ಅಂತಾ ಹೇಳಿದ್ದ ರಮೇಶ್ ಅದ್ರಂತೆ ಪತ್ನಿಯನ್ನ ಕಡೂರು ಹಾಗೂ ಊರಿನಂದ ಬಂದಾಗ್ಲೆಲ್ಲ ಕರ್ಕೊಂಡು ಬರ್ತಿದ್ನಂತೆ..ನಿನ್ನೆ ತಡರಾತ್ರಿ ಮತ್ತದೇ ಗಲಾಟೆ ಶುರುವಾಗಿದೆ ಆಕೆಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಇಡೀ ಮನೆಯ ತುಂಬ ರಕ್ತ ಹರಿದಿದೆ.
ಇನ್ನೂ ಕೊಲೆ ಸಂಬಂಧ ಪತಿ ರಮೇಶ್, ರಮೇಶ್ ಪುಟ್ಟಪ್ಪ ತಾಯಿ ಲಲಿತಮ್ಮನ್ನ ಬಂಧಿಸಿದ್ದಾರೆ.9 ಜನ್ರ ವಿರುದ್ದ ಅಜ್ಜಂಪುರ ಠಾಣೆಗೆ ದೂರು ನೀಡಿದ್ದು ಇನ್ನೂಳಿದ ಆರು ಜನ್ರ ಪಾತ್ರವೇನು ಎಂಬ ತನಿಖೆಯನ್ನ ಪೊಲೀಸ್ರು ನಡೆಸ್ತಾ ಇದ್ದಾರೆ
ಮಧುಸೂಧನ್ ಜೀ ಕನ್ನಡ ನ್ಯೂಸ್ ಚಿಕ್ಕಮಗಳೂರು