Gadag Crime News: ಗದಗದ ಬೆಟಗೇರಿ ಪೊಲೀಸ್ ಠಾಣೆ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಬೇಧಿಸಿರುವ ಗದಗ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಭರ್ಜರಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಗದಗ ಪೊಲೀಸರು, ಆರೋಪಿಗಳಿಂದ ಸುಮಾರು 1300 ಗ್ರಾಂ ಗಾಂಜಾ ಹಾಗೂ 30 ಗ್ರಾಂ ಚಿನ್ನಾಭರಣ ಸೇರಿದಂತೆ 2500 ಗ್ರಾಂ ನಷ್ಟು ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕಳ್ಳರು ಕೃತ್ಯಕ್ಕೆ ಬಳಸಿದ್ದ ಒಂದು ಇನ್ನೊವಾ ಕಾರು ಸಹ ವಶಪಡಿಸಿಕೊಳ್ಳಲಾಗಿದೆ. ಇನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಜನ ಆರೋಪಿಗಳ ದಸ್ತಗೀರು ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ- ನೋಟಿನ ಮಳೆ ಸುರಿಸ್ತಿವಿ ಅಂತಾ ಜನರಿಗೆ ಉಂಡೇನಾಮ : ಕಳ್ಳ ಸ್ವಾಮಿಗಳು ಸೇರಿ ಹಲವರು ಅಂದರ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಹಾಗೂ ಡಿಎಸ್ಪಿ ಮುರ್ತುಜಾ ಖಾದ್ರಿ, ಹಾಗೂ ಮಹಾಂತೇಶ್ ಸಜ್ಜನ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಧೀರಜ್ ಶಿಂಧೆ ಹಾಗೂ ಸಿದ್ರಾಮೇಶ್ ಗಡಾದ ಪಿಎಸ್ಐ ಎಲ್ ಎಂ ಆರಿ ನೇತೃತ್ವದಲ್ಲಿ ತಂಡ ರಚಿಸಿಕೊಂಡು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ- ಬಡ್ಡಿ ಇಲ್ಲಾ ಅಂತಾ ನಿಮ್ಮ ಚಿನ್ನ ಅಡಮಾನ ಇಡುವ ಮುನ್ನ ಹುಷಾರ್!
ತನಿಖೆಯ ನಂತರ ಕೊನೆಗೂ ಕಾರ್ಯಚರಣೆಯಲ್ಲಿ ಕಳ್ಳರನ್ನು ಅಂದರ್ ಮಾಡಿ, ಕಳ್ಳತನ ಮಾಡಿದ ಚಿನ್ನಾಭರಣ ಹಾಗೂ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗಾಂಜಾ ವಶಕ್ಕೆ ಪಡೆದು ಗದಗ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಈ ವಿಶೇಷ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಪ್ರಕರಣ ಬೇಧಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಎಸ್ಪಿ ರೋಹನ್ ಜಗದೀಶ್ ಅಭಿನಂದಿಸಿ ಶ್ಲಾಘಿಸಿದ್ದಾರೆ.









