ಬೆಂಗಳೂರು : ಗೊಲ್ಡ್ ಸ್ಮಗ್ಲಿಂಗ್ ಪ್ರಕರಣವನ್ನು ಬಗೆದಷ್ಟು ಸ್ಟೋಟಕ ವಿಚಾರಗಳು ಹೊರಬೀಳುತ್ತಿವೆ. ತನಿಖೆಯಲ್ಲಿ ನಟಿ ರನ್ಯಾ ರಾವ್ ಹೇಳಿಕೆ ಅಧಿಕಾರಿಗಳಿಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಕೋಟಿ ಕೋಟಿ ಮೌಲ್ಯದ ಚಿನ್ನವನ್ನು ಗೌಪ್ಯವಾಗಿ ಇಟ್ಟುಕೊಂಡು ಬರುತ್ತಿದ್ದ ರನ್ಯಾಳನ್ನ ಮೂರು ದಿನಗಳ ಕಾಲ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ಧು ಹೆಚ್ಚಿನ ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
ನೂರಾರು ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆಕೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನ ಒಳಗಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮತ್ತೆ ಮೂರು ದಿವಸಗಳ ಕಾಲ ಡಿ ಆರ್ ಐ ಕಸ್ಟಡಿಗೆ ನೀಡಿ ಆರ್ಥಿಕ ಅಪರಾಧ ನ್ಯಾಯಾಲಯ ಆದೇಶ ಹೊರಡಿಸಿದೆ. ಬಂಧನದ ವೇಳೆ ನಟಿಯನ್ನು ತನಿಖೆ ನಡೆಸಿದ್ದ ಡಿ ಆರ್ ಓ ಅಧಿಕಾರಿಗಳಿಗೆ ಈ ವೇಳೆ ಸಾಕಷ್ಟು ಸ್ಪೋಟಕ ಮಾಹಿತಿ ತಿಳಿದು ಬಂದಿದೆ. ನಟಿ ಹೇಳಿಕೆ ಬಳಿಕ ಆಕೆಯ ಮನೆ ಮೇಲೆ ಡಿಆರ್ ಓ ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ಗೋಲ್ಡ್ ವಶಕ್ಕೆ ಪಡೆದಿದ್ದರು. ಈ ಬೆನ್ನಲ್ಲೇ ನಟಿ ರನ್ಯಾ ರಾವ್ ವಶಕ್ಕೆ ಪಡೆದು ವಿಚಾರಣೆ ನಡೆಸಲು ನ್ಯಾಯಾಲಯ ಮನವಿ ಸಲ್ಲಿಸಿದ್ದು, ಮನವಿಯನ್ನ ನ್ಯಾಯಾಲಯ ಪುರಸ್ಕರೀಸಿದೆ.
ಇದನ್ನೂ ಓದಿ : ಮತ್ತೊಂದು ಅಮಾನುಷ ಕೃತ್ಯ; 14 ವರ್ಷದ ಬಾಲಕಿಯ ಕಿಡ್ನಾಪ್, ನಿರಂತರ ಸಾಮೂಹಿಕ ಅತ್ಯಾಚಾರ
ದುಬೈಗೆ ನಿರಂತರವಾಗಿ ಪ್ರವಾಸ ಮಾಡುತ್ತಿದ್ದ ರನ್ಯಾ ರಾವ್ , ಈ ಒಂದು ವರ್ಷದಲ್ಲಿ ಸುಮಾರು 30 ಬಾರಿ ದುಬೈ ಪ್ರವಾಸ ಮಾಡಿ ಚಿನ್ನ ಸಾಗಾಟ ಮಾಡಿದ್ದಾರಂತೆ. ದುಬೈಗೆ ಹೋಗಿ ಬರುವಾಗ ಪ್ರತಿ ಬಾರಿ 14 ಕೆಜಿ ಚಿನ್ನವನ್ನು ತೆಗೆದುಕೊಂಡು ಬರುತ್ತಿದ್ದರಂತೆ. ಹೆಚ್ಚು ಕಡಿಮೆ ನೋಡಿದರೆ ಒಂದು ವರ್ಷಕ್ಕೆ 4 ಕ್ವಿಂಟಾಲ್ ಬಂಗಾರ ಅಂದರೆ ಸುಮಾರು 400 ಕೋಟಿ ಮೌಲ್ಯದ 420 ಕೆಜಿ ಚಿನ್ನ ಸ್ಮಗ್ಲಿಂಗ್ ನಡೆದಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಅಲ್ಲದೇ ದುಬೈನಿಂದ ಬರುವಾಗ ಚಿನ್ನವನ್ನು ಜಾಕೆಟ್ ಹಾಗೂ ಬೆಲ್ಟ್‌ನಲ್ಲೇ ಇಟ್ಟಕೊಂಡು ಬರುತ್ತಿದ್ದರಂತೆ. ಕಸ್ಟಮ್ಸ್ ಹಾಗೂ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸದಂತೆ ತನ್ನ ಮಲತಂದೆ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರಂತೆ. ಅಷ್ಟೇ, ಅಲ್ಲದೆ ಅನಧಿಕೃತವಾಗಿ ಪೊಲೀಸ್ ಎಸ್ಕಾರ್ಟ್‌ನ ಲ್ಲಿಯೇ ಮನೆಗೆ ತೆರಳುತ್ತಿದ್ದರಂತೆ. ಈ ಬಗ್ಗೆ ಅಧಿಕಾರಿಗಳು ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದಾರೆ. ಅಂದಹಾಗೆ ಚಿನ್ನ ಸಾಗಾಟಕ್ಕೆ ಸಾಥ್ ಕೊಟ್ಟವರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನಟಿ ರನ್ಯಾ ರಾವ್ 2 ವರ್ಷದ ಬ್ಯಾಂಕ್ ವಹಿವಾಟು, ಅಕೌಂಟ್‌ಗಳ ಪರಿಶೀಲನೆ ನಡೆಸುತ್ತಿದ್ದಾರೆ ಅಧಿಕಾರಿಗಳು.
ಇದನ್ನೂ ಓದಿ : ಮೆಹಂದಿ, ಹಳದಿ ಶಾಸ್ತ್ರ ಮುಗಿಸಿ ಮದುವೆ ದಿನ ವರ ಎಸ್ಕೇಪ್ : ವರದಕ್ಷಿಣೆ, ಕಾರು ಕೊಡಲಿಲ್ಲ ಅಂತಾ ಪ್ರೀತಿಸಿದ ಯುವತಿಗೆ ಕೈಕೊಟ್ಟು ಪರಾರಿ
ಇನ್ನು ಆರೋಪಿ ನಟಿ ರನ್ಯಾ ಗೊಲ್ಡ್ ಸ್ಮಗ್ಲಿಂಗ್ ಮಾತ್ರ ಮಾಡುತ್ತಿದ್ದರಾ ಅಥವಾ ಬೇರೆ ಯಾವುದಾದರೂ ವಿಚಾರದಲ್ಲಿ ಭಾಗಿಯಾಗಿದ್ದರಾ ಅನ್ನೋದರ ಬಗ್ಗೆ ತನಿಖೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನು ಮೂರು ದಿವಸಗಳ ಕಾಲ ಆರೋಪಿ ರನ್ಯಾ ಏನೆಲ್ಲಾ ವಿಚಾರ ಬಾಯಿಬಿಡಲಿದ್ದಾರೆ ಕಾದು ನೋಡಬೇಕಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









