ಚಿತ್ರದುರ್ಗ : ಏಳು ತಿಂಗಳ ಹಿಂದೆ ಕಳೆದ ಫೆ. 15 ರಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮದ ಗ್ರಾಪಂ ಸದಸ್ಯೆ / ಉಪಾಧ್ಯಕ್ಷೆ ಗಾಯತ್ರಿ ಅವರ ಪತಿ ಪ್ರಸನ್ನ ಬನಸಿಹಳ್ಳಿ ಗ್ರಾಮದ ಏಕನಾಥೇಶ್ವರಿ ಜಾತ್ರೆಯ ದಿನ ನಾಪತ್ತೆಯಾಗಿದ್ದು ಯಾರಿಗೂ ಸಿಕ್ಕಿರಲಿಲ್ಲ.
ಏಕನಾಥೇಶ್ವರ ಜಾತ್ರೆಯ ಕೊನೆಯ ದಿನ ಸಂಜೆ ಪ್ರಸನ್ನ ಅವರನ್ನು ಎಲ್ಲರೂ ನೋಡಿದ್ದಾರೆ. ಮಗ ಎಲ್ಲೋ ಹೋಗಿದ್ದಾನೆ. ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಲಿಂಗದಹಳ್ಳಿ ಠಾಣೆಯಲ್ಲಿ ಮೃತ ದೇಹಪತ್ತೆಯಾಗಿದ್ದು, ಇದು ಒಂಥರಾ ಆತಂಕದ ವಿಷಯ. ಅವರ ತಂದೆಯೇ ಮಗನ ಗುರುತು ಪತ್ತೆ ಮಾಡಿದ್ದಾರೆ. ನಂತರ ತನಿಖೆಯಲ್ಲಿ ಸುಫಾರಿ ಒ್ಲಾನ್ ಬಯಲಾಗಿದೆ.
ಇದನ್ನೂ ಓದಿ:ಕರ್ನಾಟಕ ಚರಿತ್ರೆಯಲ್ಲಿಯೇ ಅತ್ಯಂತ ಕರಾಳ ಘಟನೆ!
ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮದ ಗ್ರಾಪಂ ಸದಸ್ಯೆ ಪಿ.ಆರ್. ಗಾಯತ್ರಿ ಜತೆ ಶಾಸಕರ ಕಾರು ಚಾಲಕನಾಗಿದ್ದ ಯಶವಂತ್ ಅಕ್ರಮ ಸಂಬಂಧ ಹೊಂದಿದ್ದು, ಇದು ಪತಿ ಪ್ರಸನ್ನ ಅವರ ಗಮನಕ್ಕೆ ಬಂದಿದೆ. ಇದೇ ಅನುಮಾನದ ಮೇಲೆ ಪತ್ನಿಗೆ ಪ್ರಸನ್ನ ದೈಹಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಪತಿಯ ಈ ಸಂಶಯಾಸ್ಪದ ನಡವಳಿಕೆಯಿಂದ ಬೇಸತ್ತಿದ್ದ ಪತ್ನಿ ಗಂಡನ ಕೊಲೆಗೆ ಸಮ್ಮತಿ ನೀಡಿದ್ದಳು ಎನ್ನಲಾಗಿದೆ. ಇದಾದ ನಂತರವೇ ಕೊಲೆಯ ಸಂಚು ರೂಪುಗೊಂಡಿದೆ.
ಇದ್ದಕ್ಕಿದ್ದಂತೆ ನಾಪತ್ತೆಯಾಗಿ ಊರವರ ಸಂಶಯಕ್ಕೂ ಕಾರಣವಾಗಿ ಒಂದು ಬಗೆಯ ಸಂಚಲನವನ್ನೇ ಸೃಷ್ಟಿಸಿತ್ತು. ಪ್ರಸನ್ನ ಅವರ ತಂದೆ ಷಣ್ಮುಖಪ್ಪ ಹೊಸದುರ್ಗ ಠಾಣೆಯಲ್ಲಿ ತನ್ನ ಮಗ ನಾಪತ್ತೆಯಾಗಿದ್ದಾನೆಂದು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಜಿಲ್ಲೆಯಲ್ಲಿ ವರದಿಯಾಗುತ್ತಿದ್ದ ಅನಾಮಧೇಯ ಶವಗಳ ಮೇಲೆ ಕಣ್ಣಿಟ್ಟಿದ್ದರು. ಗಡಿ ತಾಲೂಕುಗಳಲ್ಲಿ ಇಂತಹ ಪ್ರಕರಣ ವರದಿಯಾದಾಗಲೂ ಹೋಗಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ:ಹೊಸ ಜಾತಿಗಣತಿ ಘೋಷಿಸಿದ ಸಿಎಂ ಸಿದ್ದರಾಮಯ್ಯ..!
ಜು.20 ರಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹವೊಂದು ಪತ್ತೆಯಾಗಿತ್ತು. ತಂದೆ ಷಣ್ಮುಖಪ್ಪ ಹೋಗಿ ಶವ ಗುರುತಿನಲ್ಲಿ ಭಾಗಿಯಾಗಿದ್ದರು. ಚಹರೆಗಳು, ಧರಿಸಿದ್ದ ಉಡುಪುಗಳನ್ನು ಪರಿಶೀಲಿಸಿದ ನಂತರ ಇದು ತನ್ನ ಮಗ ಪ್ರಸನ್ನ ಎಂದು ಗುರುತಿಸಿದ್ದರು. ನಂತರ ಇದು ಕೊಲೆ ಎಂದು ತಿಳಿದು ಬಂದಿದ್ದರಿಂದ ತನಿಖೆಗೆ ಕೋರಿ ದೂರು ಸಲ್ಲಿಸಿದ್ದಾರೆ.
ಪ್ರಕರಣ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಪ್ರಸನ್ನ ಅವರ ಫೋನ್ ಕಾಲ್ ಗಳ ವಿವರ, ಸಂಪರ್ಕದಲ್ಲಿದ್ದ ಫೋನ್ ನಂಬರ್ ತಲಾಶೆ ಮಾಡಿದಾಗ ಆರೋಪಿ ಯಶವಂತ್, ಪ್ರಸನ್ನ ಅವರ ಪತ್ನಿ ಗಾಯತ್ರಿ ಜತೆಗೆ ನಡೆಸಿದ್ದ ಸಂಭಾಷಣೆಯ ವಿವರಗಳು ಲಭ್ಯವಾಗಿವೆ. ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ಪೊಲೀಸರಿಗೆ ಇದು ಮೃತ ಪ್ರಸನ್ನ ಅವರ ಪತ್ನಿಯ ಕುಮ್ಮಕ್ಕಿನಿಂದಲೇ ನಡೆದ ಕೊಲೆ ಎಂಬುದು ಬಯಲಾಗಿದೆ. ಶಾಸಕರ ಕಾರು ಚಾಲಕನಾಗಿದ್ದ ಯಶವಂತ್ ಮದ್ಯಪಾನ ಮಾಡಿ ಕೆಲಸಕ್ಕೆ ಬರುತ್ತಿದ್ದ ಎನ್ನುವ ಕಾರಣಕ್ಕೆ ಒಂದು ತಿಂಗಳ ಹಿಂದೆಯೇ ಕೆಲಸಕ್ಕೆ ಬರದಂತೆ ಶಾಸಕರು ಹೇಳಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಶಾಲಾ ಮಕ್ಕಳಿಗೆ ಫ್ಲೇವರ್ಡ್ ನಂದಿನಿ ಹಾಲು ವಿತರಣೆಗೆ
ಅದೇನೆ ಆಗಲಿ ಏಳು ತಿಂಗಳ ಹಿಂದೆ ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮದ ಗ್ರಾಪಂ ಸದಸ್ಯೆ ಗಾಯತ್ರಿ ಅವರ ಪತಿ ಪ್ರಸನ್ನ ನಾಪತ್ತೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರಿಗೆ ಪ್ರಸನ್ನ ಕೊಲೆಯಾಗಿರುವುದು ಈ ಕೊಲೆಗೆ ಸ್ವತಃ ಪ್ರಸನ್ನ ಅವರ ಪತ್ನಿ, ಇವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಶಾಸಕರ ಕಾರು ಚಾಲಕ ಯಶವಂತ್ ಕಾರಣ ಎಂದು ತನಿಖೆಯಲ್ಲಿ ತಿಳಿದಿದೆ. ಆರೋಪಿ ಯಶವಂತ್‌ಗೆ ಆತನ ಸ್ನೇಹಿತರಾದ ಲೋಹಿತ್, ಆಟೋ ಡ್ರೈವರ್ ವೀರಭದ್ರಪ್ಪ ಎಂಬುವರು ಸಾಥ್ ನೀಡಿದ್ದರು. ಈಗ ಗ್ರಾಪಂ ಸದಸ್ಯೆ ಗಾಯತ್ರಿ ಸೇರಿ ನಾಲ್ವರ ಮೇಲೂ ಪೊಲೀಸರು ಕೊಲೆ ಕೇಸು ದಾಖಲಿಸಿ, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.









