ಪತ್ನಿ, ಅಳಿಯನ ಎದುರೇ ಕುಡಗೋಲಿನಿಂದ ಕತ್ತು ಕೊಯ್ದುಕೊಂಡು ಪತಿ ಆತ್ಮಹತ್ಯೆ

ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ಮಲ್ಲಪ್ಪ ಕಟಬುಗೋಳ (35) ಎಂಬಾತ ಕುಡಗೋಲಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Written by - Manjunath Naragund | Last Updated : Jul 26, 2025, 03:16 PM IST
  • ಶುಕ್ರವಾರ ರಾತ್ರಿ ಸಾರಾಯಿ ಕುಡಿದು ಬಂದ ಮಲ್ಲಪ್ಪ, ಪತ್ನಿ ರೇಖಾಳ ಜೊತೆ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾನೆ.
  • ರೇಖಾ ತನ್ನ ಸಹೋದರನನ್ನು ಕರೆಯಿಸಿದ್ದಾಗ
  • ಅಳಿಯ ಮಲ್ಲಿಕಾರ್ಜುನ ಮಾವನ ಮೇಲೆ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ.
 ಪತ್ನಿ, ಅಳಿಯನ ಎದುರೇ ಕುಡಗೋಲಿನಿಂದ ಕತ್ತು ಕೊಯ್ದುಕೊಂಡು ಪತಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ

ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ಶನಿವಾರ ದಾರುಣ ಘಟನೆಯೊಂದು ನಡೆದಿದೆ. ಮಲ್ಲಪ್ಪ ಕಟಬುಗೋಳ (35) ಎಂಬಾತ ತನ್ನ ಕತ್ತನ್ನು ಕುಡಗೋಲಿನಿಂದ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯು ಪತ್ನಿ ರೇಖಾ ಮತ್ತು ಅಳಿಯ ಮಲ್ಲಿಕಾರ್ಜುನನ ಎದುರೇ ನಡೆದಿದೆ.ನಿನ್ನೆ (ಶುಕ್ರವಾರ) ಮನೆಯಲ್ಲಿದ್ದ ಅಕ್ಕಿ ಮಾರಿ ಸಾರಾಯಿ ಕುಡಿದು ಬಂದ ಮಲ್ಲಪ್ಪ, ಪತ್ನಿ ರೇಖಾಳ ಜೊತೆಗೆ ರಾತ್ರಿಯಿಡೀ ಗಲಾಟೆ ಮಾಡಿದ್ದಾನೆ.

Add Zee News as a Preferred Source

ಇದನ್ನೂ ಓದಿ: ತಾಯಿಗಿದ್ದ ಖಾಯಿಲೆಯನ್ನ ಕ್ಷಣಮಾತ್ರದಲ್ಲಿ ಕಂಡುಹಿಡಿದ ChatGPT..!ಮಗಳ ಭಾವನಾತ್ಮಕ ಪೋಸ್ಟ್ ಆಯ್ತು ವೈರಲ್‌

ಈ ವೇಳೆ ರೇಖಾಳನ್ನು ಹಲ್ಲೆ ಕೂಡ ಮಾಡಿದ್ದಾನೆ. ಗಂಡನ ಗಲಾಟೆ ತಡೆಯಲು ರೇಖಾ ತನ್ನ ಸಹೋದರನನ್ನು ಕರೆಯಿಸಿ ಬುದ್ಧಿವಾದ ಹೇಳಿಸಿದ್ದಾಳೆ. ಆದರೆ, ಈ ಸಂದರ್ಭದಲ್ಲಿ ಅಳಿಯ ಮಲ್ಲಿಕಾರ್ಜುನ ಮಾವನ ಮೇಲೆ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಯ ಸಂದರ್ಭದಲ್ಲಿ ಕುಡಗೋಲು ಹಿಡಿದ ಮಲ್ಲಪ್ಪ, ಸಾಯುವ ಬೆದರಿಕೆ ಹಾಕಿದ್ದಾನೆ. ಈ ವೇಳೆ ಮಲ್ಲಿಕಾರ್ಜುನ, "ನೀನು ಸತ್ತರೆ ಅಕ್ಕ ಚೆನ್ನಾಗಿರುತ್ತಾಳೆ" ಎಂದು ಹೇಳಿದ್ದಾನೆ. ಈ ಮಾತಿನ ಕ್ಷಣಾರ್ಧದಲ್ಲೇ ಮಲ್ಲಪ್ಪ ತನ್ನ ಕತ್ತನ್ನು ಕುಡಗೋಲಿನಿಂದ ಕೊಯ್ದುಕೊಂಡಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯ ಬಳಿಕ ಅಳಿಯ ಮಲ್ಲಿಕಾರ್ಜುನ ಸ್ಥಳದಿಂದ ಪರಾರಿಯಾಗಿದ್ದಾನೆ.ಮಾಹಿತಿ ತಿಳಿದ ಕೂಡಲೇ ಮಾರಿಹಾಳ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಗಂಡನಿಂದ ₹12 ಕೋಟಿ ಜೀವನಾಂಶ, ದುಬಾರಿ ಪ್ಲಾಟ್‌, BMW ಕಾರು ನೀಡುವಂತೆ ಬೇಡಿಕೆಯಿಟ್ಟ ಪತ್ನಿ!!

ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಅಳಿಯ ಮಲ್ಲಿಕಾರ್ಜುನನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕೇಸ್ ದಾಖಲಾಗಿದ್ದು, ತನಿಖೆ ಚಾಲನೆಯಲ್ಲಿದೆ.ಈ ಘಟನೆಯಿಂದ ಹೊನ್ನಿಹಾಳ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ಆರೋಪಿ ಮಲ್ಲಿಕಾರ್ಜುನನಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

About the Author

Trending News