ಎಣ್ಣೆ ಹೊಡೆದು ಎಗ್‌ ಬುರ್ಜಿ ತಿಂದು ಹೆಂಡತಿ ಶವದ ಜೊತೆ 2 ದಿನ ಮಲಗಿದ್ದ ಭೂಪ!

husband killed wife : ಮನೆಯ ಕಡೆ ಆತಂಕದಿಂದ ನೋಡುತ್ತಿರುವ ಜನ ಮನೆಯ‌‌ ಒಳಗಡೆ ಯಾರು ಹೋಗದಂತೆ ‌ಟೇಪ್ ಹಾಕಿರುವ ಪೊಲೀಸರು‌ ಇದಕ್ಕೆಲ್ಲ ಕಾರಣ ಗರ್ಭಿಣಿಯ ಅನುಮಾನಸ್ಪದ ಸಾವು.

Written by - Chetana Devarmani | Last Updated : Jul 24, 2025, 08:45 PM IST
  • ಮನೆಯ‌ ಒಳಗಡೆಯಿಂದ ಏನೋ ವಾಸನೆ‌ ಬರ್ತಿತ್ತಂತೆ
  • ಆಗ ಕಿಟಿಕಿಯಿಂದ ಇಣುಕಿ ನೋಡಿದ್ದಾರೆ
  • ಆಗ ಮಹಿಳೆಯು‌ ಮೃತಪಟ್ಟ ಸ್ಥಿತಿಯಲ್ಲಿ ಕಂಡಿದ್ದಾರೆ
ಎಣ್ಣೆ ಹೊಡೆದು ಎಗ್‌ ಬುರ್ಜಿ ತಿಂದು ಹೆಂಡತಿ ಶವದ ಜೊತೆ 2 ದಿನ ಮಲಗಿದ್ದ ಭೂಪ!

ಬೆಂಗಳೂರು: ದೂರದ ಊರಿನಿಂದ ಬಂದವರು ಜೀವನ ಕಟ್ಟಿಕೊಳ್ಳಲು ಶುರು ಮಾಡಿದ್ದರು. ಸಣ್ಣದಾದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಓನರ್ ಬಾಡಿಗೆ ಕೇಳುವುದಕ್ಕೆ ಮನೆಯ ಹತ್ತಿರ ಬಂದಿದ್ದಾರೆ. ಕಿಟಿಕಿ ಓಪನ್ ಮಾಡಿದಾಗ ಒಂದು ಕ್ಷಣ ಶಾಕ್ ಆಗಿದ್ದಾರೆ. ತಕ್ಷಣ ‌ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹಾಗಾದ್ರೆ ಅಲ್ಲಿ ಆಗಿದ್ದಾದ್ರು‌ ಏನು ಅನ್ನೊದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ..

Add Zee News as a Preferred Source

ಜೋರು ಗಾಳಿ, ಮಳೆ ಬಂದ್ರೆ ಬೀಳುವ ಹಾಗೆ ಇರುವ ಗೊಡೆಗಳು, ಜೋರಾಗಿ ತಳ್ಳಿದ್ರೆ ಮುರಿದು ಬಿಳುವ ಬಾಗಿಲು, ಮನೆಯ ಕಡೆ ಆತಂಕದಿಂದ ನೋಡುತ್ತಿರುವ ಜನ ಮನೆಯ‌‌ ಒಳಗಡೆ ಯಾರು ಹೋಗದಂತೆ ‌ಟೇಪ್ ಹಾಕಿರುವ ಪೊಲೀಸರು‌ ಇದಕ್ಕೆಲ್ಲ ಕಾರಣ ಗರ್ಭಿಣಿಯ ಅನುಮಾನಸ್ಪದ ಸಾವು.

ಈ ದಂಪತಿಯ ಹೆಸರು ಶುಭಂ ಹಾಗೂ‌ ಸುಮನಾ. ಮೂಲತಃ ‌ಉತ್ತರ ಪ್ರದೇಶದವರು. ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಥಣಿಸಂದ್ರದಲ್ಲಿ ಮಹೇಶ ಅನ್ನೊರ ಮನೆಯಲ್ಲಿ ಬಾಡಿಗೆಗೆ ಇದ್ರು. ಶುಭಂ ಪೆಂಟಿಂಗ್ ಕೆಲಸ ಮಾಡ್ತಿದ್ರೆ, ಸುಮನಾ ಮನೆಯಲ್ಲಿಯೇ ಇರಿತ್ತಿದ್ದಳು.ತಾನಾಯಿತು ತನ್ನ ಕೆಲಸವಾಯಿತು ಎಂದು ದಂಪತಿ ಮನೆಯಲ್ಲಿ ಇರ್ತಿದ್ರಂತೆ..

ಇದನ್ನೂ ಓದಿ: ಮೈಸೂರು: ಸ್ಕೂಟರ್ ಸವಾರಿ ಮಾಡುತ್ತಿದ್ದ ವೃದ್ಧನ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್

ಕಳೆದ ತಿಂಗಳು ಬಾಡಿಗೆ ಕೊಡದ ಕಾರಣ ಮನೆ ಮಾಲೀಕ ಬಂದು ನೋಡಿದಾಗ ಮನೆಯ‌ ಒಳಗಡೆಯಿಂದ ಏನೋ ವಾಸನೆ‌ ಬರ್ತಿತ್ತಂತೆ. ಆಗ ಕಿಟಿಕಿಯಿಂದ ಇಣುಕಿ ನೋಡಿದ್ದಾರೆ.ಆಗ ಮಹಿಳೆಯು‌ ಮೃತಪಟ್ಟ ಸ್ಥಿತಿಯಲ್ಲಿ ಕಂಡಿದ್ದಾರೆ,ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿದ್ದಾನೆ.

ಸ್ಪಾಟ್ ಗೆ ಬಂದು‌ ಪರಿಶೀಲನೆ ಮಾಡಿದಾಗ ಸುಮಾನ ಮೃತ‌ಪಟ್ಟಿದ್ದಾಳೆ. ಅಲ್ಲದೆ ಎರಡು ದಿನಗಳ ಹಿಂದೆಯೇ ಸುಮಾನಾ ಮೃತಪಟ್ಟಿರೋ ಸಂಶಯವಿದೆಯಂತೆ.ಇನ್ನೂ ಹೆಂಡತಿ ಮೃತಪಟ್ಟಿದ್ರು ಗಂಡ ಮಾತ್ರ ಎರಡು ದಿನ ಮನೆಯಲ್ಲೇ  ‌ಎಣ್ಣೆ‌ಹಾಕಿಕೊಂಡು,ಎಗ್ ‌ಬುರ್ಜಿ ಮಾಡಿಕೊಂಡು ತಿಂದ್ದಿದ್ದಾನಂತೆ. ಏನು ಆಗಿಲ್ಲವೆಂಬಂತೆ ನಿನ್ನೆ ಬೆಳಗ್ಗೆ ಮನೆಯಿಂದ ಹೊಗಿದ್ದಾನೆ. 

ಮಹಿಳೆಯ ಮೃತದೇಹದಿಂದ ಮೂಗು, ಬಾಯಿಯಲ್ಲಿ ರಕ್ತಸ್ರಾವವಾಗಿದೆ. ಮುಖ ಊದಿಕೊಂಡಿದೆ ಆದ್ರೆ ದೇಹದ ಮೇಲೆ ಯಾವುದೇ ಗುರುತುಗಳು ಕಂಡು ಬಂದಿಲ್ವಂತೆ. ಘಟನೆಯ ನಂತರ ಶುಭಂನನ್ನ 
ನಿನ್ನೆ ತಡರಾತ್ರಿ ಯಲಹಂಕ ‌ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಪೊಲೀಸರು.

ಸದ್ಯ ಮೃತದೇಹವನ್ನು ಅಂಬೇಡ್ಕರ್ ಕಾಲೇಜಿಗೆ ರವಾನೆ ಮಾಡಿದ್ದು‌ ಮರಣೋತ್ತರ ವರದಿ ಬಂದ ನಂತರ ಕೊಲೆಯೋ, ಆತ್ಮಹತ್ಯೆಯೋ ಅಥವಾ ಅಸಹಜ ಸಾವು ಅನ್ನೋದು ತಿಳಿದುಬರಲಿದೆ.

ಇದನ್ನೂ ಓದಿ:  ಪತಿ ಕೊಲೆಗೆ ಗ್ರಾಪಂ ಸದಸ್ಯೆ ಸುಪಾರಿ..! ಜನಪ್ರಿಯ ಶಾಸಕರ ಕಾರ್‌ ಚಾಲಕ ಸಹಿತ 4 ಜನ ವಶ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News