Instagram Queen Ravenna : ಹರಿಯಾಣದ ಪಾಣಿಪತ್‌ನ ಚಾಂದನಿ ಬಾಗ್ ಪ್ರದೇಶದ ಪ್ರವೀಣ್ ಕೊಲೆ ಪ್ರಕರಣ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ. ಈ ಕೊಲೆಯ ಸೂತ್ರಧಾರಿಗಳು ಅವನ ಹೆಂಡತಿ ರೀಲ್ಸ್ ಸ್ಟಾರ್ ರವಿನಾ ಮತ್ತು ಅವಳ ಪ್ರಿಯಕರ 26 ವರ್ಷದ ಯೂಟ್ಯೂಬರ್ ಸುರೇಶ್ ಎಂದು ತಿಳಿದುಬಂದಿದೆ. ಅಸಲಿಗೆ ಪ್ರವೀಣ್ ಕೊಲೆಯಾಗಿದ್ದು ಹೇಗೆ..? ಘಟನೆಯ ವಿವರ ಇಲ್ಲಿದೆ..
ಮಾರ್ಚ್ 25 ರಂದು ತಡರಾತ್ರಿ ಪ್ರವೀಣ್ ಕೊಲೆಯಾಗಿದ್ದಾನೆ. ನಂತರ ಪ್ರವೀಣ್ ತಂದೆ 26 ರಂದು ರವೀನಾಳನ್ನು ಪ್ರವೀಣ್ ಎಲ್ಲಿದ್ದಾನೆಂದು ಕೇಳಿದ್ದಾರೆ. ಆಗ ಅವಳು ತನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾಳೆ. ಇದರಿಂದ ಗಂಡ ಹೆಂಡತಿ ಮಧ್ಯ ಬಿರುಕು ಉಂಟಾಗಿರಬಹುದು ಎಂದು ಭಾವಿಸಿ ಮಾವ ಮೌನವಾಗಿದ್ದ. ಮಾರ್ಚ್ 26 ರಂದು ರವೀನಾ ತವರು ಮನೆಗೆ ಹೋಗಿ ಬರುವುದಾಗಿ ಹೇಳಿ ಹೊರಟುಹೋದಳು.. ಮಾರ್ಚ್ 28 ರಂದು ರವೀನಾಗೆ ಕುಟುಂಬಸ್ಥರು ಕರೆ ಮಾಡಿ ಪ್ರವೀಣ್ ಮೃತ ದೇಹ ಪತ್ತೆಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಡಿವೋರ್ಸ್ ಹಾದಿಯಲ್ಲಿ ಅಂತರ್ಧರ್ಮೀಯ ವಿವಾಹವಾಗಿದ್ದ ಸ್ಟಾರ್ ನಟಿ..!?
ರವೀನಾ ಮಾರ್ಚ್ 28 ರಂದು ತನ್ನ ಅತ್ತೆಯ ಮನೆಗೆ ಹಿಂತಿರುಗಿದಾಗ, ಅಲ್ಲಿ ಶೋಕದ ವಾತಾವರಣವಿತ್ತು. ಎನೂ ತಿಳಿಯಂದತೆ ನಟಿಸಿದಳು.. ತನ್ನ ಗಂಡನ ಮರಣದಿಂದ ತಾನು ತುಂಬಾ ದುಃಖಿತಳಾಗಿದ್ದೇನೆ ಎಂದು ಕುಟುಂಬಕ್ಕೆ ತೋರಿಸಿದಳು. ಅದಾದ ನಂತರ ಅವಳು ತನ್ನ ಅತ್ತೆಯ ಮನೆಯಲ್ಲಿಯೇ ಇದ್ದಳು.
ಕಾಲುವೆಯಲ್ಲಿ ಪ್ರವೀಣ್ ಅವರ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಕುಟುಂಬವು ಅಂತಿಮ ವಿಧಿವಿಧಾನಗಳನ್ನು ಸಹ ನೆರವೇರಿಸಿತು. 12 ದಿನಗಳ ಕಾಲ ಕುಟುಂಬ ಯಾವುದೇ ದೂರು ನೀಡಲಿಲ್ಲ. ಆದರೆ ಪ್ರವೀಣ್ ಅವರ ಕಿರಿಯ ಸಹೋದರ ಸಂದೀಪ್ ಮತ್ತು ಸೋದರಸಂಬಂಧಿ ಅಮಿತ್‌ಗೆ ಅನುಮಾನ ಬಂದಿದೆ. ಅವರು ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಪ್ರಾರಂಭಿಸಿ, ಸ್ವತಃ ತನಿಖೆ ನಡೆಸಿದರು.
ಕೆಲವೊಮ್ಮೆ, ಯಾವುದೋ ನೆಪ ಹೇಳಿ ಅತ್ತಿಗೆ ರವೀನಾಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.. 12 ದಿನಗಳ ನಂತರ, ಕುಟುಂಬವು ಸಾಕ್ಷಿಯೊಂದಿಗೆ ಪೊಲೀಸರಿಗೆ ದೂರು ನೀಡಿತು. 24 ಗಂಟೆಗಳಲ್ಲಿ ಪೊಲೀಸರು ರವೀನಾ ಮತ್ತು ಪ್ರಿಯಕರ ಸುರೇಶ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬಹಿರಂಗವಾಗಿದೆ.
ಇದನ್ನೂ ಓದಿ:ಪ್ರಧಾನಿಯೇ ಗಡ ಗಡ ನಡುಗುವಂತೆ ಮಾಡಿದ ಏಕೈಕ ಭಾರತೀಯ ಸ್ಟಾರ್ ನಟ.! ಸರ್ಕಾರಕ್ಕೆ ಸವಾಲ್ ಹಾಕಿದ್ದರು
ಘಟನೆ ಹಿನ್ನೆಲೆ : ಮಾರ್ಚ್ 25 ರಂದು, ಪ್ರವೀಣ್ ಮನೆಗೆ ಬಂದಾಗ ತನ್ನ ಭಯ ನಿಜವಾಗುವುದನ್ನು ನೋಡಿ ಆಘಾತಕ್ಕೊಳಗಾದ. ರವಿನಾ ಮತ್ತು ಸುರೇಶ್ ಬೆಡ್ ಮೇಲೆ ಇದ್ದ ಕ್ಷಣವನ್ನು ಕಂಡು ಅವನು ತಾಳ್ಮೆ ಕಳೆದುಕೊಂಡನು. ನಂತರ ವಾಗ್ವಾದದ ನಡೆದಿದೆ.. ಈ ವೇಳೆ ರವಿನಾ ತನ್ನ ದುಪಟ್ಟಾದಿಂದ ಪ್ರವೀಣ್ ಅನ್ನು ಉಸಿರುಗಟ್ಟಿಸಿ ಕೊಂದಳು ಎಂದು ಹೇಳಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ರವೀನಾ ಮತ್ತು ಸುರೇಶ್ ವಿರುದ್ಧ ಸಾಕಷ್ಟು ಪುರಾವೆಗಳಿವೆ. ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ಸ್ಥಳ ಮತ್ತು ಕರೆ ವಿವರಗಳಿಂದ ವಿಷಯಗಳು ಸ್ಪಷ್ಟವಾಗಿದ್ದವು. ಪೊಲೀಸ್ ವಿಚಾರಣೆಯ ಸಮಯದಲ್ಲಿ ಇಬ್ಬರೂ ಆರಂಭದಲ್ಲಿ ಸುಳ್ಳು ಹೇಳಿದರು, ಆದರೆ ಸ್ವಲ್ಪ ಸಮಯದ ನಂತರ ತಪ್ಪಿಸಿಕೊಳ್ಳುವುದು ಕಷ್ಟ ಎಂದು ಅರಿತುಕೊಂಡಾಗ, ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ..
ಪೊಲೀಸ್ ವರದಿ : ರವೀನಾ ಮತ್ತು ಸುರೇಶ್ ತಮ್ಮ ವಿವಾಹೇತರ ಸಂಬಂಧ ಮತ್ತು ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳನ್ನು ವಿರೋಧಿಸಿದ್ದಕ್ಕೆ 33 ವರ್ಷದ ಪ್ರವೀಣ್‌ನನ್ನು ಕತ್ತು ಹಿಸುಕಿ ಕೊಂದಿದ್ದಾರೆ. ಅಲ್ಲದೆ, ಆರೋಪಿಗಳು ಖೋಜ್ಕಿಪುರ ಗ್ರಾಮದ ಬಳಿಯ ಕಾಲುವೆಗೆ ಎಸೆದ ಮೂರು ದಿನಗಳ ನಂತರ, ಮಾರ್ಚ್ 28 ರಂದು ಶವ ಪತ್ತೆಯಾಗಿತ್ತು.
ಇನ್ಟಾಗ್ರಾಮ್ ಕ್ವೀನ್ : ರವಿನಾಗೆ ಇನ್‌ಸ್ಟಾಗ್ರಾಮ್‌ನಲ್ಲಿ 34,000 ಕ್ಕೂ ಹೆಚ್ಚು ಮತ್ತು ಅವರ ಯೂಟ್ಯೂಬ್ ಚಾನೆಲ್‌ನಲ್ಲಿ 5,000 ಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ. ಈಕೆ ಹೆಚ್ಚಾಗಿ ಹಾಸ್ಯಮಯ ಮತ್ತು ಕೌಟುಂಬಿಕ ಸಮಸ್ಯೆಗಳ ಕುರಿತಾದ ವೀಡಿಯೊಗಳನ್ನು ಮಾಡುತ್ತಿದ್ದಳು. ಈಕೆಯ ಪ್ರಿಯಕರ ಸುರೇಶ್ ಯೂಟ್ಯೂಬ್.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









