ಬೆಂಗಳೂರು : ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾಗಿರುವ ಅಮೃತ್ ಪೌಲ್ ಮನೆ ದಾಳಿ ವೇಳೆ ಸಿಐಡಿ ಅಧಿಕಾರಿಗಳಿಗೆ ಡೈರಿ ಪತ್ತೆಯಾಗಿದೆ. ಈ ಡೈರಿ ಪತ್ತೆಯಿಂದ ತನಿಖೆಯಲ್ಲಿ ಮೇಜರ್ ಟ್ವಿಸ್ಟ್ ಸಿಕ್ಕಿದೆ. 


COMMERCIAL BREAK
SCROLL TO CONTINUE READING

ಪಿಎಸ್ಐ ನೇಮಕಾತಿ ಪ್ರಕ್ರಿಯೆ ಅಂಶಗಳನ್ನ ಡೈರಿಯಲ್ಲಿ ಉಲ್ಲೇಖ ಮಾಡಲಾಗಿದೆ. ಅಧಿಕಾರಿಗಳು, ರಾಜಕೀಯ ಮುಖಂಡರು, ಐಎಎಸ್ ಅಧಿಕಾರಿಗಳು, ಡಿವೈಎಸ್ಪಿಗಳು, ಇನ್ಸ್ ಪೆಕ್ಟರ್ ಗಳು ಸೇರಿದಂತೆ ಪ್ರಭಾವಿಗಳ ಹೆಸರು ಡೈರಿಯಲ್ಲಿ ಬರೆಯಲಾಗಿದೆ. ನಾಲ್ಕು ದಿನಗಳ ಹಿಂದೆ ಸಹಕಾರನಗರದ ಅಮೃತ್ ಪೌಲ್ ಮನೆ, ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಹಾಗೂ ಕಚೇರಿಗಳ‌ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿದ್ದರು. 


ಇದನ್ನೂ ಓದಿ : Heavy Rain : ರಾಜ್ಯದಲ್ಲಿ ಮಳೆಯ ಆರ್ಭಟ : ಕರಾವಳಿಯಲ್ಲಿ ಜು.12ರವರೆಗೆ 'ರೆಡ್ ಅಲರ್ಟ್'


ಪ್ರಭಾವಿಗಳು ತಮ್ಮ ಅಭ್ಯರ್ಥಿ ನೇಮಕವಾಗಬೇಕೆಂದು ಸೂಚಿಸಿರುವ ಬಗ್ಗೆ ಅಭ್ಯರ್ಥಿಗಳ ಹೆಸರು ಸಹಿತಿ  ಡೈರಿಯಲ್ಲಿ ಉಲ್ಲೇಖ ಮಾಡಲಾಗಿದೆ. ಸದ್ಯ ಅದು ಅಮೃತ್ ಪೌಲ್ ಕೈ ಬರವಣಿಗೆಯೋ, ಇಲ್ಲವೋ ಎಂಬುದನ್ನ ಪತ್ತೆಯಚ್ಚಲು ಎಫ್ಎಸ್ಎಲ್ ಗೆ ಕಳಿಸಿ, ಕೈ ಬರಹ ಪತ್ತೆಯಚ್ವಲು ಸಿಐಡಿ ಅಧಿಕಾರಿಗಳ‌ ಸಿದ್ಧತೆ ನಡೆಸಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ