ರಾಜಧಾನಿಯಲ್ಲಿ ಅಸ್ಥಿಪಂಜರ ಪತ್ತೆ ಪ್ರಕರಣ : ಸ್ಕೆಲಿಟನ್ ಮನಷ್ಯನದ್ದೇ ಎಂಬುದು ಧೃಡ..

ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಅಸ್ಥಿಪಂಜರವೊಂದು ಪತ್ತೆಯಾಗಿ ಎಲ್ಲರಿಗೂ ಶಾಕ್ ತಂದಿತ್ತು. ಈಗ ಆ ಅಸ್ಥಿಪಂಜರದ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ಹಾಗಾದ್ರೆ  ಏನದೂ ಅಪ್ಡೇಟ್ ಅಂತೀರಾ ತೋರಿಸ್ತಿವಿ ನೋಡಿ.

Written by - Krishna N K | Last Updated : Jun 27, 2025, 09:45 PM IST
    • ಬೆಂಗಳೂರಿನಲ್ಲಿ ಅಸ್ಥಿಪಂಜರವೊಂದು ಪತ್ತೆಯಾಗಿ ಎಲ್ಲರಿಗೂ ಶಾಕ್ ತಂದಿತ್ತು
    • ಈಗ ಆ ಅಸ್ಥಿಪಂಜರದ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ.
    • ಗುಂಡಿಯಲ್ಲಿ ಪತ್ತೆಯಾದ ಅಸ್ಥಿಪಂಜರ ಮನುಷ್ಯನದ್ದು ಎಂಬ ಸ್ಪೋಟಕ ಮಾಹಿತಿ ಲಭ್ಯ
ರಾಜಧಾನಿಯಲ್ಲಿ ಅಸ್ಥಿಪಂಜರ ಪತ್ತೆ ಪ್ರಕರಣ : ಸ್ಕೆಲಿಟನ್ ಮನಷ್ಯನದ್ದೇ ಎಂಬುದು ಧೃಡ..

ಬೆಂಗಳೂರು : ನಗರದ ಬೇಗೂರು ಬಳಿಯ ಅಪಾರ್ಟ್‌ಮೆಂಟ್‌ನ ಮಳೆ ನೀರು ಕೊಯ್ಲು ಗುಂಡಿಯಲ್ಲಿ ಪತ್ತೆಯಾದ ಅಸ್ಥಿಪಂಜರ ಮನುಷ್ಯನದ್ದು ಎಂಬ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಅಸ್ಥಿಪಂಜರ ಪತ್ತೆಯಾದ ಬಳಿಕ ಪೊಲೀಸರು ಅದನ್ನು ಎಫ್ಎಸ್ಎಲ್ ಗೆ ಕಳುಹಿಸಿದ್ರು. ಸದ್ಯ ಎಫ್ಎಸ್ಎಲ್ ವರದಿ ಲಭ್ಯವಾಗಿದ್ದು, ಈಗ ಪೊಲೀಸರು ಅಸ್ಥಿಪಂಜರ ಯಾರದ್ದು ಎಂಬುದರ ಹಿಂದೆ ಬಿದ್ದಿದ್ದಾರೆ.

Add Zee News as a Preferred Source

ಇನ್ನೂ ಪೊಲೀಸರು 2012 ರಿಂದ ದಾಖಲಾಗಿರುವ ಕಾಣೆಯಾದವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕಾರ್ಮಿಕರು ಇದೇ ಜೂನ್ 16ರಂದು ಲಕ್ಷ್ಮಿ ಲೇಔಟ್‌ನ ಎಂ.ಎನ್‌. ಕ್ರೆಡೆನ್ಸ್‌ ಫ್ಲೋರಾ ಅಪಾರ್ಟ್‌ಮೆಂಟ್‌ ಕಟ್ಟಡದ ಮಳೆ ನೀರು ಕೊಯ್ಲು ಗುಂಡಿ ಸ್ವಚ್ಛಗೊಳಿಸುವಾಗ ಬುರುಡೆ ಹಾಗೂ ಮೂಳೆ ಸಮೇತ ಅಸ್ಥಿಪಂಜರ ಪತ್ತೆಯಾಗಿತ್ತು. ಇದರ ಜತೆಗೆ ಪಕ್ಕದಲ್ಲೇ ಒಂದು ಪ್ಯಾಂಟ್‌ ಸಹ ಸಿಕ್ಕಿತ್ತು.

ಇದನ್ನೂ ಓದಿ:ಕೇವಲ 15 ದಿನಗಳಲ್ಲಿ Voter ID ಪಡೆಯಬಹುದು..! ಜಸ್ಟ್‌ ಈ ಸರಳ ನಿಯಮಗಳನ್ನು ಪಾಲಿಸಿ ಸಾಕು.. 

2012 ರಿಂದಲೂ ಅಪಾರ್ಟ್‌ಮೆಂಟ್‌ನ ಮಳೆ ನೀರು ಕೊಯ್ಲು ಗುಂಡಿಯನ್ನು  ಸ್ವಚ್ಛಗೊಳಿಸಿರಲಿಲ್ಲ. ಹೀಗಾಗಿ ಅಸ್ಥಿಪಂಜರ ಇರೋದು ಯಾರ ಗಮನಕ್ಕೂ ಬಂದಿರಲಿಲ್ಲ. ಯಾವಾಗ ಬಿಡಿ ಬಿಡಿಯಾಗಿದ್ದ ಅಸ್ಥಿಪಂಜರದ ಮೂಳೆಗಳು ಪತ್ತೆಯಾದವೋ ತನಿಖೆ ದೃಷ್ಟಿಯಿಂದ ಪೊಲೀಸರು ಹೆಚ್ಚಿನ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ರು. ಎಫ್ ಎಸ್ಎಲ್ ತಜ್ಞರ ಪ್ರಕಾರ ಈ ವ್ಯಕ್ತಿ ಎಷ್ಟು ವರ್ಷಗಳ ಹಿಂದೆ ಮೃತಪಟ್ಟಿದ್ದ ಎಂಬ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅಧ್ಯಯನ ನಡೆಸಿದ ಬಳಿಕವಷ್ಟೇ ಅದನ್ನು ಹೇಳಲು ಸಾಧ್ಯವೆನ್ನಲಾಗಿದೆ. 

ಇ‌ನ್ನೂ ಬೇಗೂರು ಬಳಿಯ ಲಕ್ಷ್ಮಿ ಲೇಔಟ್‌ನಲ್ಲಿರುವ ಈ ಎಂ.ಎನ್‌. ಕ್ರೆಡೆನ್ಸ್‌ ಫ್ಲೋರಾ ಅಪಾರ್ಟ್‌ಮೆಂಟ್‌ ಕಟ್ಟಡಕ್ಕೆ 2012ರಲ್ಲಿ ಅಡಿಪಾಯ ಹಾಕಲಾಗಿತ್ತು. ನಂತರ 2016ರಲ್ಲಿ ಈ ಅಪಾರ್ಟ್‌ಮೆಂಟ್‌ನ ನಿರ್ಮಾಣ ಪೂರ್ಣಗೊಂಡಿತ್ತು. ಈ ಅಪಾರ್ಟ್ಮೆಂಟ್ ನಿರ್ಮಾಣಕ್ಕೂ ಮುನ್ನ ಆ ಜಾಗದಲ್ಲಿ ಸ್ಮಶಾನವಿತ್ತು ಎನ್ನಲಾಗಿದ್ದು, ಇದೇ ಕಾರಣಕ್ಕೆ ಅಸ್ಥಿಪಂಜರ ಪತ್ತೆಯಾಗಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. 

ಇದನ್ನೂ ಓದಿ:11 ಮಹಿಳೆಯರ ಮೇಲೆ ವೆಸ್ಟ್ ಇಂಡೀಸ್ ಸ್ಟಾರ್‌ ಕ್ರಿಕೆಟಿಗನಿಂದ ಲೈಂಗಿಕ ಕಿರುಕುಳ!? ಕೋಲಾಹಲ ಸೃಷ್ಟಿ!!

ಒಟ್ಟಾರೆ ಅಸ್ಥಿಪಂಜರ ಮನಷ್ಯನದ್ದು ಎಂಬುದು ಕನ್ಫರ್ಮ್ ಆಗಿದ್ದು, ಕೊಲೆಯಾಗಿದ್ದ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದ ಎಂಬ ಸತ್ಯ ಪೊಲೀಸರ ತನಿಖೆ ನಂತರ ಬಯಲಾಗಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News